ಬಾರತ ದೇಶಕ್ಕೆ ದೊಡ್ಡ ಶತ್ರು ಯಾರು?
ಅವತ್ತು ಬೆಂಗಳೂರಿನ ಬಸವೇಶ್ವರ ನಗರದ ಮಾಜಿ ಸಂಸದ ಐ.ಎಂ. ಜಯರಾಂ ಶೆಟ್ಟರ ನಿವಾಸದಲ್ಲಿ ಜಾಜ್೯ ಮದ್ಯಾಹ್ನ ಊಟಕ್ಕೆ ಬರುವ ಕಾಯ೯ಕ್ರಮ, ಜಯರಾಂ ಶೆಟ್ಟರು ಸಮತಾ ಪಕ್ಷದ ರಾಜ್ಯ ಅಧ್ಯಕ್ಷರು, ನಾನು ರಾಜ್ಯ ಪ್ರದಾನ ಕಾಯ೯ದಶಿ೯, ಕೇವಲ ಕೆಲವೇ ಜನರಿಗೆ ಗೊತ್ತಿತ್ತು.
ಕರಾವಳಿ ಜಯರಾಂ ಶೆಟ್ಟಿ ದಂಪತಿಗಳು ಮೀನಿನ ವಿವಿಧ ಪದಾಥ೯ಗಳ ಅದ್ದೂರಿ ಬೋಜನ ತಯಾರಿಸಿ ನಮ್ಮ ಜೊತೆ ಜಾಜ್೯ ಆಗಮನಕ್ಕೆ ಕಾಯುತ್ತಿದ್ದರು.
3 ಗಂಟೆ ಆದರೂ ಜಾಜ್೯ ಬರಲಿಲ್ಲ, ಸಂಪಕ೯ಕ್ಕೆ ಸಿಗಲಿಲ್ಲ, ಶೆಟ್ಟರು ಆಪ್ತ ಪತ್ರಕತ೯ರಿಗೆ ಜಾಜ್೯ ಎಲ್ಲಿರ ಬಹುದೆಂದು ವಿಚಾರಿಸಿದರು, ಆದರೆ ರಾಜ್ಯ ಸಕಾ೯ರಕ್ಕೆ ಜಾಜ್೯ ಕನಾ೯ಟಕಕ್ಕೆ ಬಂದಿರುವ ಮಾಹಿತಿ ಇಲ್ಲ.
ಈ ಬಗ್ಗೆ ಆಸಕ್ತಿ ವಹಿಸಿದ ಪತ್ರಕತ೯ರು ಶೆಟ್ಟರ ಮನೆಗೆ ಬಂದರು ಜಾಜ್೯ ಗೆಳೆಯರ ಕಾರಲ್ಲಿ ಬಂದರು, ವಿಳಂಬ ಆದ ಬಗ್ಗೆ ಕ್ಷಮೆ ಕೇಳಿ ಊಟದ ಟೇಬಲಲ್ಲಿ ಕುಳಿತರು, ಅವತ್ತು ಸೆಲ್ ಪೋನ್ ಇರಲಿಲ್ಲ, ಕ್ಯಾಮೆರಾ ಇರಲಿಲ್ಲ.
ಕರಾವಳಿ ಕುಚುಲಕ್ಕಿ ಮೀನಿನ ಖಾದ್ಯ ಸವಿದು ಜಯರಾಂ ಶೆಟ್ಟಿ ದಂಪತಿಗಳನ್ನ ಸಂಪ್ರೀತರನ್ನಾಗಿಸಿದರು.
ಊಟದ ಜೊತೆ ಆ ಪತ್ರಕತ೯ರು ದೇಶದ ರಕ್ಷಣಾ ಸಚಿವರಿಗೆ ಪಾಕಿಸ್ತಾನದ ಶತ್ರುತ್ವದ ಬಗ್ಗೆ ಕೇಳಿದರು ಅವರ ಅನೇಕ ಪ್ರಶ್ನೆಗೆ ಜಾಜ್೯ ರ ಒಂದೇ ಉತ್ತರ ನಮಗೆ ಪಾಕಿಸ್ತಾನ ನಿಜವಾದ ಶತ್ರು ಅಲ್ಲ, ನಮಗೆ ಚೀನಾ ದೇಶದಿಂದ ಆತಂಕ ಇದೆ ಅಂತ.
ಕೈತೊಳೆದ ಜಾಜ್೯ ವಿಳಂಬ ಮಾಡದೆ ದೆಹಲಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ವಾಪಾಸ್ ಆದರು.
ಇವತ್ತು ಕಾಶ್ಮೀರ ಸೈನೀಕ ಹತ್ಯೆಯ ಸಂದಭ೯ದಲ್ಲಿ ಅವತ್ತಿನ ದೇಶದ ರಕ್ಷಣಾ ಸಚಿವರ ಜೊತೆ ಊಟ ಮಾಡಿದ ನೆನಪಾಯಿತು.
ನಿಜಕ್ಕೂ ನಮ್ಮ ದೇಶದ ಶತ್ರು ಯಾರು?
Comments
Post a Comment