#ಭಯಾನಕ_ಕಾಳಿಂಗಸರ್ಪಗಳೆಲ್ಲ_ಇವರು_ಬರಿಗೈಯಲ್ಲಿ_ಹಿಡಿಯುತ್ತಿದ್ದರು.
#ವಿಷಪೂರಿತ_ಹಾವು_ಹಿಡಿಯಲು_ಸೂಕ್ತ_ಉಪಕರಣ_ಬಳಸಬಹುದು.
*#ಅವೈಜ್ಞಾನಿಕವಾಗಿ_ಹಾವು_ಹಿಡಿಯುವವರೆಲ್ಲ_ಇನ್ನೊಮ್ಮೆ_ಯೋಚಿಸಲಿ.*
*ನಮ್ಮ ಸಾಗರದ #ಮನ್ಮಥ್_ಕುಮಾರ್, ಹೊಸನಗರದ #ಸ್ನೇಕ್_ಪ್ರಬಾಕರ್, ಶಿವಮೊಗ್ಗದ #ಸ್ನೇಕ್_ಕಿರಣ್ ಮತ್ರು ಮೈಸೂರಿನ #ಸ್ನೇಕ್_ಶ್ಯಾಮ್ ಮತ್ತು ಅವರ ಪುತ್ರ #ಸ್ನೇಕ್_ಸೂಯ೯ಕೀರ್ತಿ ಇವರುಗಳು ಹಾವು ಹಿಡಿದು ಸಂರಕ್ಷಣೆ ಮಾಡುವುದು ನೋಡುತ್ತಿರುತ್ತೇನೆ.*
*ಆದರೆ ಕೇರಳದ #ವಾವಾ_ಸುರೇಶ್ ಮಾತ್ರ ಹಾವು ಹಿಡಿಯುವುದು ಬರೀ ಕೈಯಲ್ಲಿ, ಯಾವುದೇ ಉಪಕರಣ ಸ್ಟಿಕ್ ಬಳಸುವುದಿಲ್ಲ ಇದು ನಿಜಕ್ಕೂ ಆತಂಕಕಾರಿ ಅವರ ಹಾವು ಹಿಡಿಯುವ ವಿಡಿಯೋ ನೋಡಿದರೆ ಯಾರಿಗೂ ಅನ್ನಿಸುತ್ತದೆ ಇದೊಂದು ಆತ್ಮಹತ್ಯಾ ಪ್ರಯತ್ನ ಎಂಬಂತೆ.*
*ಈಗ ವಾವಾ ಸುರೇಶ್ ದೊಡ್ಡ ನಾಗರ ಹಾವು ಹಿಡಿದು ಚೀಲಕ್ಕೆ ತುಂಬುವಾಗ ಸ್ವಲ್ಪ ನಿರ್ಲಕ್ಷ ಮಾಡಿದರಾ? ಅಥವ ಆ ಕತರ್ ನಾಕ್ ಹಾವು ಬೇರೆಲ್ಲ ಹಾವಿಗಿಂತ ಬಿನ್ನವಾಗಿತ್ತಾ? ವಾವಾ ಸುರೇಶರ ದುರಾದೃಷ್ಟವೊ ಗೊತ್ತಿಲ್ಲ, ನಾಗರ ಹಾವು ಇವರ ತೊಡೆಗೆ ಕಚ್ಚಿದೆ ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.*
*ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಿದ್ದಾರೆ ಆದರೆ ಇನ್ನೂ ವೆಂಟಿಲೇಟರ್ ನಲ್ಲಿ ಇದ್ದಾರೆ.*
*ವಾವಾ ಸುರೇಶ್ ಮೃತ್ಯು ಗೆದ್ದು ಬರಲಿ ಎಂದು ಹಾರೈಸೋಣ ಜೊತೆಯಲ್ಲಿ ಹಾವು ಹಿಡಿಯುವವರೆಲ್ಲ ಸುರಕ್ಷಿತ ಉಪಕರಣ, ಸ್ಟಿಕ್ ಇತ್ಯಾದಿ ಬಳಸಿ ಹಾವು ಹಿಡಿಯಲು ಮುಂದಾಗಲಿ, ವಿಷ ಪೂರಿತ ಹಾವು ಸಂರಕ್ಷಣೆ ಮಾಡುವವರಿಗೆ ಇದು ಎಚ್ಚರಿಕೆ ಗಂಟೆ ಆಗಿರಲಿ.*
Comments
Post a Comment