ಸುವರ್ಣ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಿವಮೊಗ್ಗ ಜಿಲ್ಲೆಗೆ ಬಂದ ನೂತನ ಪ್ರಾಥಮಿಕ ಶಾಲೆಯ ಸಿಂಹಪಾಲು ನನ್ನ ಆನಂದಪುರಂ ಕ್ಷೇತ್ರಕ್ಕೆ ಪಡೆದುಕೊಂಡ 25 ವರ್ಷದ ಹಿಂದಿನ ಸವಿ ನೆನಪು, ಕೆಲ ಶಾಲೆ ಮುಚ್ಚಿರುವ ಕಹಿ ನೆನಪು
#ಸ್ವಾತಂತ್ತ್ಯೋತ್ಸವದ_ಸುವರ್ಣಮಹೋತ್ಸವದ_ಪ್ರಾಥಮಿಕ_ಶಾಲೆ_ಬಾಗಿಲು_ಹಾಕಿದೆ.
1997 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 50 ನೇ ಆಚರಣೆ ಆಗಿದ್ದರಿಂದ #ಸುವರ್ಣ_ಸ್ವಾತಂತ್ಯೋತ್ಸವದ ಸಡಗರವೇ ಆಗಿತ್ತು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿಶೇಷ ಕಾಯ೯ಕ್ರಮಗಳು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಗಳಿಗೂ ಪ್ರೇರಣೆ ನೀಡಿತ್ತು.
ಆಗ ಉತ್ಸಾಹಿ ಜಿಲ್ಲಾ ಪಂಚಾಯತನ ಸದಸ್ಯರಾಗಿದ್ದ ನಾವೆಲ್ಲ ಸೇರಿ ಜಿಲ್ಲಾ ಪಂಚಾಯತ್ ನಲ್ಲಿ ರಾತ್ರಿ 12ಕ್ಕೆ ವಿಶೇಷ ಸಭೆ ಆಯೋಜಿಸಿದ್ದೆವು, ಈಸೂರಿನಿಂದ ಸ್ವಾತಂತ್ರ ಜ್ಯೋತಿಯನ್ನು ತಂದಿದ್ದೆವು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಸುವರ್ಣ ಸ್ವಾತಂತ್ಯೋತ್ಸವದ ಸವಿ ನೆನಪಿಗಾಗಿ ಪ್ರಾಥಮಿಕ ಶಾಲಾ ಸೌಲಭ್ಯವಿಲ್ಲದ ಹಳ್ಳಿಗೆ ಹೊಸ ಶಾಲೆ ಮತ್ತು ಅದಕ್ಕೆ ಏಕ ಕೊಠಡಿ ಕಟ್ಟಡ ಮಂಜೂರು ಮಾಡಲು ಮುಂದಾಗಿತ್ತು.
ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಅವತ್ತಿನ 27 ಸದಸ್ಯರ ಕ್ಷೇತ್ರಕ್ಕೆ ಒಂದರಂತೆ 27 ಹೊಸ ಶಾಲೆಗೆ ಪ್ರಸ್ತಾವನೆ ಕೇಳಿದ್ದರು.
ಆದರೆ ಹಳ್ಳಿಗಳಲ್ಲಿ ಶಾಲೆಗೆ ಜಾಗ ಹೊಂದಿಸುವುದು, ಖಾಸಾಗಿ ಶಾಲಾ ಪೈಪೋಟಿಯಲ್ಲಿ ಸರ್ಕಾರಿ ಶಾಲೆಗೆ ಜನ ಆಸಕ್ತಿ ವಹಿಸುವುದಿಲ್ಲ ಎಂದು ಈ ಯೋಜನೆ ಟೇಕ್ ಆಫ್ ಆಗಲಿಲ್ಲ ಆದರೆ ನನ್ನ ಕ್ಷೇತ್ರದಲ್ಲಿ ಹೊಸ ಶಾಲೆ ಕಾರ್ಯಾರಂಭ ಮಾಡಿದ್ದ ಯಶಸ್ಸಿನಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಳಿದ ಶಾಲೆಗಳನ್ನು ನನ್ನ ಕ್ಷೇತ್ರಕ್ಕೆ ನೀಡಿದರು.
ಇಡೀ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಗ್ರಾಮಸ್ಥರ ಜೊತೆ ಪಾದಯಾತ್ರೆಗಳ ಮಾಡುತ್ತಾ ಆಯಾ ಭಾಗದ ಬೇಡಿಕೆ ತಲೆಯಲ್ಲೇ ದಾಖಲಾಗಿದ್ದರಿಂದ ನನ್ನ ಕ್ಷೇತ್ರದಲ್ಲಿನ
1. ಕೆಳಗಿನ ಘಂಟಿನಕೊಪ್ಪ
2. ಸೊರಗುಂದ.
3. ಮದ್ಲೇಸರ.
4. ಮೂಡಾ ಹಗಲು
5. ಜೇಡಿಸರ.
6. ಕಲ್ಲೊಡ್ಡು (ಸಂಗಣ್ಣನ ಕೆರೆ ಹತ್ತಿರದ ಗುಡ್ಡದಲ್ಲಿನ ಊರು)
7. ಚೆನ್ನಕೊಪ್ಪ
ಇನ್ನು ಮೂರು ಕಡೆ ಊರ ಹೆಸರು ಮರೆತಿದ್ದೇನೆ ಹೊಸ ಶಾಲೆ ಪ್ರಾರಂಭ ಆಯಿತು.
ನೂತನ ಶಾಲಾ ಕಟ್ಟಡ ಮಂಜೂರಾಗುವುದಕ್ಕೂ ಮತ್ತು ನೂತನ ಶಾಲೆ ಮಂಜೂರಾಗಲು ವ್ಯತ್ಯಾಸ ಇದೆ ಅದೇನೆಂದರೆ ಯಾವುದೇ ಅನುದಾನದಲ್ಲಿ ಶಾಲಾ ಕಟ್ಟಡ ನಿಮಿ೯ಸಬಹುದು ಆದರೆ ಹೊಸ ಶಾಲೆಗೆ ಶಿಕ್ಷಕರು, ಶಿಕ್ಷಕರ ವೇತನ, ಶಿಕ್ಷಣ ಪರಿಕರಣ ಇತ್ಯಾದಿಗಳು ಬಡ್ಜೆಟ್ ನಲ್ಲಿ ಮಂಜೂರಾಗಬೇಕು ಹಾಗೆ ಮಂಜೂರಾದರೇ ನಿರಂತರ ಶಾಲೆ ನಡೆಯುತ್ತದೆ ಆದ್ದರಿಂದ ನೂತನ ಶಾಲೆ ಪ್ರಾರಂಭ ಆಗಲು ತುಂಬಾ ಅಡೆತಡೆಗಳು ಆಡಳಿತದಲ್ಲಿ ಇರುತ್ತದೆ.
23 ವರ್ಷದ ಹಿಂದಿನ ಹಳ್ಳಿಯ ಪೋಷಕರ ಶಾಲಾ ಬೇಡಿಕೆ ಈಗ ಶಾಲೆ ಬಾಗಿಲು ಹಾಕಲು ಕಾರಣ ನೋಡಿದರೆ ಖಾಸಾಗಿ ಶಾಲಾಗಳು ಇಂಗ್ಲೀಷ್ ಮೀಡಿಯಂ ವಿದ್ಯಾಬ್ಯಾಸ ಮಕ್ಕಳನ್ನು ಅವರ ಮನೆಯಿಂದಲೇ ಕರೆದೊಯ್ದು ವಾಪಾಸ್ ತಂದು ಬಿಡುವ ಶಾಲಾ ವಾಹನ ವ್ಯವಸ್ಥೆ, ಹಳ್ಳಿಗಳ ತಲಾ ಆದಾಯ ವಾಣಿಜ್ಯ ಕೃಷಿಗಳಿಂದ ಹೆಚ್ಚು ಆಗಿರುವುದು ಮತ್ತು ಸರ್ಕಾರಿ ಶಾಲೆ ಎಂಬ ಅಸಡ್ಡೆಯೂ ಸೇರಿದೆ.
ಆನಂದಪುರಂ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಆಚಾಪುರ ಗ್ರಾಮಪಂಚಾಯತ್ ನ ಮೂಡಾಹಗಲು ಎ೦ಬ ಸಣ್ಣ ಗ್ರಾಮ ಹೊಸನಗರ ತಾಲ್ಲೂಕಿನ ಬಾರ್ಡರ್ ನಲ್ಲಿದೆ ಈ ಊರಿನ ದೊಡ್ಡ ಕೆರೆ ಈ ಹಳ್ಳಿಯನ್ನು ಎರೆಡು ಭಾಗ ಮಾಡಿದೆ ಬೇಸಿಗೆಯಲ್ಲಿ ಕೆರೆ ಬತ್ತಿದಾಗಲೇ ಇವರಿಗೆ ಸರಕು ಸಾಗಾಣಿಕೆಗೆ ಅವಕಾಶ ಆಗಿತ್ತು ಆದ್ದರಿಂದ ಕೆರೆ ದಂಡೆ ಅಗಲ ಮಾಡಿ ಕೆರೆ ಕೊಡಿಗೆ ಪೈಪ್ ಅಳವಡಿಸಿ ಎರೆಡೂ ಭಾಗಕ್ಕೆ ಸಂಪಕ೯ ಮಾಡಿಸಿದ್ದೆ ಕೆರೆ ಕೆಳಗಿನ ಭೂ ಮಾಲಿಕಕಾರ ಮೂಡಾ ಹಗಲು ನಾಗಪ್ಪ (ಸಂಗಣ್ಣನ ಕೆರೆ) ತಮ್ಮ ಖಾತೆ ಜಮೀನು ನಮ್ಮ ಮನವಿಗಾಗಿ ಬಿಟ್ಟುಕೊಟ್ಟಿದ್ದರು.
ಈ ಹಳ್ಳಿಗೆ ಕುಡಿಯುವ ನೀರಿನ ಬಾವಿ, ವಿದ್ಯುತ್ ಸಂಪರ್ಕ, ರಸ್ತೆ ಜಲ್ಲಿ ಬಿಚಾವಣೆ ಮತ್ತು ಪ್ರಾಥಮಿಕ ಶಾಲೆ ಜಿಲ್ಲಾ ಪಂಚಾಯತ್ ನಿಂದ ಮಾಡುವಾಗ ಸ್ಥಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸಜ್ಜನ ಸಣ್ಣ ವೀರಪ್ಪ, ಸದಸ್ಯರಾಗಿ ಶ್ರೀ ಮತಿ ಚೌಡಮ್ಮ ಕೃಷ್ಣಪ್ಪ, ಇಕ್ಬಾಲ್ ಬೇಗ್ ಮತ್ತಿತರು ಸದಾ ಬೆಂಬಲಿಕ್ಕಿದ್ದರು.
ಇವತ್ತಿನ ಪತ್ರಿಕೆಯಲ್ಲಿ 15 ವರ್ಷದಿಂದ ಶಾಲೆ ಬಂದಾಗಿದೆ, ಕೆರೆ ದಂಡೆ ಕುಸಿದಿದೆ, ರಸ್ತೆ ಇತ್ಯಾದಿ ಇಲ್ಲದ ವರದಿ ನೋಡಿ ಬೇಸರ ಆಯಿತು ಮತ್ತು ಅವತ್ತಿನ ದಿನಗಳ ನೆನಪಾಯಿತು.
Comments
Post a Comment