Skip to main content

ಆನಂದಪುರಂ ಇತಿಹಾಸ ಭಾಗ-72, ರಾಷ್ಟ್ರೀಯ ಹೆದ್ದಾರಿ 206 ಆಚಾಪುರ ಸಮೀಪದಲ್ಲಿ ಕ್ರಿಶ. 1042 ರಲ್ಲಿ ಸಮೀಪದ ಅಂದಾಸುರದಲ್ಲಿ ಗೋನೇಶ್ವರ ಮತ್ತು ಸೂರ್ಯಮಾರ್ತಾಂಡ ದೇವಾಲಯ ನಿಮಿ೯ಸಿದ ಬನವಾಸಿ ನಾಡಿನ ರಾಜ್ಯಪಾಲ ಬಿಜ್ಜಳನ ಸಾಮಂತ ಗೋರರಸ ದೇವಾಲಯ ನಿರ್ಮಿಸಿದ ಕಮ್ಮಾರ ಚಿಕ್ಕನಿಗೆ ಭೂದಾನ ನೀಡಿದ ಶಿಲಾ ಶಾಸನ

#ಆನಂದಪುರಂ_ಇತಿಹಾಸ_ಭಾಗ_72.

#ಆಚಾಪುರ_ಸಮೀಪದ_ರಾಷ್ಟ್ರೀಯ_ಹೆದ್ದಾರಿ_ಪಕ್ಕದಲ್ಲಿರುವ_ಬೃಹತ್_ಶಿಲಾ_ಶಾಸನ.

#ಕ್ರಿಸ್ತಶಕ_1042_ರಲ್ಲಿ_ಸಮೀಪದ_ಅಂದಾಸುರದಲ್ಲಿ_ದೇವಾಲಯ_ನಿರ್ಮಿಸಿದ_ವಿಶ್ವಕಮ೯ರಿಗೆ_ದಾನ_ನೀಡಿದ_ಶಾಸನ.

#ಎಂಟು_ಅಡಿ_ಎತ್ತರ_ನಾಲ್ಕು_ಅಡಿ_ಅಗಲದ_71_ಸಾಲುಗಳ_ಬೃಹತ್_ಶಿಲಾಶಾಸನ

#ಈ_ಶಾಸನದಲ್ಲಿ_ಉಲ್ಲೇಖಿಸಿರುವ_ಆ_ಕಾಲದ_ರಾಜದಾನಿ_ಅಂದಾಸುರ_ಈಗ_ಒಂದು_ಹಳ್ಳಿ

#ಶಾಸನದಲ್ಲಿರುವ_ಗೋನೇಶ್ವರ_ಮತ್ತು_ಸೂರ್ಯಮಾರ್ತಾಂಡ_ದೇವಸ್ಥಾನದ_ಕುರುಹು_ಇಲ್ಲಿಲ್ಲ.

   ಆನಂದಪುರಂನಿಂದ ಶಿವಮೊಗ್ಗ ಮಾರ್ಗದಲ್ಲಿ ಆಚಾಪುರದಿಂದ ಒಂದು ಕಿ.ಮಿ ಹಿಂದೆ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ರಸ್ತೆಯ ಎಡಬಾಗದಲ್ಲಿ  ಸುಮಾರು 980 ವಷ೯ದಿಂದ ಈ ಬೃಹತ್ ಶಿಲಾ ಶಾಸನ ಬಿಸಿಲು ಮಳೆಗೆ ಎದೆ ಒಡ್ಡಿ ನಿಂತಿದೆ.
   ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಆಗಿ ಮೇಲ್ದರ್ಜೆಗೆ ಏರಿದೆ, ವಾಹನ ಸಂಚಾರ ಹೆಚ್ಚು, ರಸ್ತೆಯೂ ವಿಸ್ತಾರ ಆಗುತ್ತಿರುವುದರಿಂದ ಈ ಶಾಸನ ತುರ್ತಾಗಿ ಸಂರಕ್ಷಿಸಬೇಕಾಗಿದೆ.
  1902 ರಲ್ಲಿ ರೈಸ್ ರವರು ಪ್ರಕಟಿಸಿದ ಎಪಿಗ್ರಾಫಿ ಕರ್ನಾಟಕದ ಸಂಪುಟದಲ್ಲಿ ಇದು ನಮೂದಾಗಿದೆ ಇನ್ನೊಂದು ವಿಶೇಷ ಅಂದರೆ ಸ್ವತಃ ರೈಸ್ ರವರೇ ಆನಂದಪುರಂಗೆ ಬೇಟಿ ನೀಡಿ ಇದನ್ನೆಲ್ಲ ದಾಖಲಿಸಿದ್ದಾರೆ.
   ಆನಂದಪುರಂ ಸುತ್ತಮುತ್ತಲಿನ ಶಿಲಾಶಾಸನ ಮತ್ತು ತಾಮ್ರಪತ್ರಗಳ ದಾಖಲೆಯಲ್ಲಿ
  4) ಎಪಿಗ್ರಾಫಿಯ ಕ್ರ.ಸಂ. 109. ಕ್ರಿಶ 1042 AD.
ಆಚಾಪುರ ರಾ.ಹೆ. 206.8 ಅಡಿ ಎತ್ತರ X 4 ಅಡಿ ಅಗಲದ ಶಿಲಾ ಶಾಸನ.
ಆನಂದಪುರಂನಿಂದ ಶಿವಮೊಗ ಮಾರ್ಗದಲ್ಲಿ  ರಾಷ್ಟ್ರಿಯ ಹೆದ್ದಾರಿ 206 ರಲ್ಲಿ ಆಚಾಪುರಕ್ಕಿಂತ ಹಿಂದೆ ಎಡಬಾಗದಲ್ಲಿರುವ ಬೃಹತ್ ಶಿಲಾ ಶಾಸನ ಮುಂದಿನ ಪೀಳಿಗೆಗಾಗಿ ಈಗಲೇ ಸಂರಕ್ಷಿಸಿಕೊಳ್ಳಬೇಕಾಗಿದೆ ಇದು ಆನಂದಪುರಂ ಇತಿಹಾಸವನ್ನು ಕ್ರಿಸ್ತ ಶಕ 10 ನೇ ಶತಮಾನಕ್ಕೆ ಒಯ್ಯುವ ಅತ್ಯಂತ ಪುರಾತನ ದಾಖಲೆ ಕೂಡ.
  ಕ್ರಿ.ಶ. 25- ಏಪ್ರಿಲ್ -1042 ರಲ್ಲಿ ಬನವಾಸಿ ನಾಡಿನ ರಾಜ್ಯಪಾಲ ಬಿಜ್ಜಳನ ಸಾಮಂತ ಗೋರರಸನು ಅಂದಾಸುರದಲ್ಲಿ ನಿರ್ಮಿಸಿದ ಗೋನೇಶ್ವರ ಮತ್ತು ಸೂಯ೯ ಮಾತಾ೯೦ಡೇಶ್ವರ ದೇವಾಲಯ ನಿರ್ಮಾಣದಲ್ಲಿ ಇಟ್ಟಿಗೆ ಶಿಲೆಯ ಕಾಮಗಾರಿ ನಿರ್ವಹಿಸಿದ ಚಿಕ್ಕ ಎಂಬ ವಿಶ್ವಕರ್ಮಿಗೆ ಭೂದಾನ ಮಾಡಿದ ಶಾಸನ ಇದು, ಈಗ ಅಂದಾಸುರದಲ್ಲಿ ಈ ಶಾಸನದಲ್ಲಿ ತಿಳಿಸಿದ ದೇವಾಲಯಗಳು ಯಾವುದೂ ಇಲ್ಲ, ಗೋನೇಶ್ವರ ಮತ್ತು ಸೂರ್ಯಮಾರ್ತಾಂಡೇಶ್ವರ ಎಂಬ ದೇವಾಲಯಗಳು ಈ ಒಂದು ಸಾವಿರ ವಷ೯ದಲ್ಲಿ ನಶಿಸಿ ಹೋಗಿರಬೇಕು.
  ಈ ಶಾಸನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದು ವಾಹನ ಸಂಚಾರ ದಟ್ಟಣೆಯಿಂದ ಯಾವುದೇ ಅವಘಡ ಸಂಭವಿಸಿದರೆ ಈ ಪ್ರಾಚಿನ ಶಾಸನ ಕಳೆದುಕೊಳ್ಳುವ ಅಪಾಯ ಇದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...