ನಮ್ಮೂರ ಮೊದಲ ಸೈಕಲ್ ಶಾಪ್, 1960 ರಿಂದ 1990ರ ವರೆಗೆ ಸೈಕಲ್ ಯುಗದ ವಿಜೃಂಬಣೆ, ಸೈಕಲ್ ಶಾಪ್ ಮಾಲಿಕರಾಗಿ ಆನಂದಪುರಂ ಗ್ರಾಮ ಪಂಚಾಯಿತಿ ಸದಸ್ಯರೂ ಆದ ಸಿರಿಲ್ ಡಿಕಾಸ್ಟ್ ಜನ ಪ್ರೀತಿಯಿಂದ ಇವರನ್ನು ಕರೆಯುವುದು ಸಿರಿಲಣ್ಣ ಅಂತ
# ಭದ್ರಾವತಿಯ_ಹನುಮಯ್ಯನವರದ್ದು
#ಸೈಕಲ್_ಶಾಪ್_ಪ್ರಾರಂಭ_1960ರಿಂದ
#ಜಮ೯ನ್_ದೇಶದ_ಕಾರ್ಲ್_ವೋನ್_ಡ್ರೇಯಸ್_ಸೈಕಲ್_ಸಂಶೋದಿಸಿದ್ದು.
#ಆನಂದಪುರಂನ_ಸಿರಿಲ್_ಡಿಕಾಸ್ಟ್_ಸೈಕಲ್_ಶಾಪ್_ಮಾಲಿಕರಲ್ಲಿ_ಪ್ರಸಿದ್ಧರು.
https://youtu.be/wYh8ftFQzi0
1817ರಲ್ಲಿ ಸೈಕಲ್ ಸಂಶೋದನೆ ಆಯಿತು, ಅದು ಜರ್ಮನ್ ದೇಶದಲ್ಲಿ.
ಕಾರ್ಲ್ ವೋನ್ ಡ್ರೇಯಸ್ ಸೈಕಲ್ ಜನಕ ಆದರೆ ಸೈಕಲ್ ಗಳು ಪ್ರಸಿದ್ದಿ ಪಡೆದದ್ದು ಮತ್ತು ಬಳಕೆಗೆ ಬಂದದ್ದು 19 ನೇ ಶತಮಾನದಲ್ಲಿ.
ಭಾರತದಲ್ಲಿ ಮೊದಲ ಸೈಕಲ್ ತಯಾರಕ ಸಂಘ 1943 ರಲ್ಲಿ ಅಸ್ತಿತ್ವಕ್ಕೆ ಬಂತು.
1956ರಲ್ಲಿ ಲೂದಿಯಾನದಲ್ಲಿ ಹಿರೋ ಸೈಕಲ್ ಉತ್ಪಾದನೆ ಪ್ರಾರಂಬಿಸಿತು, 1951ರಲ್ಲಿ ಅಟ್ಲಾಸ್ ಮತ್ತು ಏವನ್ ಪ್ರಾರಂಭ ಆದರೆ 1949 ರಲ್ಲಿ ಹರ್ಕುಲಿಸ್ ತಯಾರಿಕೆ ಪ್ರಾರಂಭ ಆಯಿತು.
ಆನಂದಪುರಂನಲ್ಲಿ ಮೊದಲ ಸೈಕಲ್ ಶಾಪ್ ಪ್ರಾರಂಬಿಸಿದವರು ಭದ್ರಾವತಿಯ ಹನುಮಯ್ಯನವರು, ಎರಡನೆ ಸೈಕಲ್ ಶಾಪ್ ಸಿರಿಲಣ್ಣನವರದ್ದು, ಮೂರನೆಯದು ದಾಸಕೊಪ್ಪದ ರುದ್ರಪ್ಪನವರಂತೆ ನಂತರದ ಎರಡನೆ ಸೈಕಲ್ ಶಾಪ್ ಹನುಮಯ್ಯರದ್ದು
ನಂತರ ಭಾಷಾ ಸಾಹೇಬರು ಅವರ ನಂತರ ಲಾರೆನ್ಸ್ ನಂತರ ಆರೀಪ್ ಸೈಕಲ್ ಶಾಪ್ ಪ್ರಾರಂಬಿಸಿದರು.
ಸಿರಿಲ್ ಡಿಕಾಸ್ಟ್ ರ ಸೈಕಲ್ ಶಾಪ್ ಈಗಿನ ಡಾಕ್ಟರ್ ಪ್ರಭುರವರ ಕ್ಲಿನಿಕ್ ಎದರು ಇತ್ತು, 1960ರಿಂದ 1995 ರ ವರೆಗೆ ಸುಮಾರು 35 ವರ್ಷ ಇವರ ಸೈಕಲ್ ಶಾಪ್ ಉತ್ತುಂಗದಲ್ಲಿತ್ತು ಮತ್ತು ಇವರ ಜನ ಬಳಕೆ ಹಾಗೂ ವಿಶ್ವಾಸ ಇವರನ್ನು ಆನಂದಪುರಂನ ಗ್ರಾಮ ಪಂಚಾಯತ್ ಸದಸ್ಯರನ್ನಾಗಿ ಆಯ್ಕೆ ಆಗುವಂತೆ ಮಾಡಿತ್ತು.
ಈಗ ಸುಮಾರು 80 ವರ್ಷದ ವೃದ್ದಾಪ್ಯದಲ್ಲಿ ಕೃಷಿ, ಪಶು ಸಂಗೋಪನೆಯ ಜೊತೆಗೆ ನಿವೃತ್ತ ಜೀವನ ನಡೆಸುವ ಸಿರಿಲಣ್ಣ ಮೊನ್ನೆ ಸಿಕ್ಕಾಗ ಸೈಕಲ್ ಶಾಪ್ ಗಳ ನೆನಪು ಪುನಾರಾವರ್ತನೆ ಆಯಿತು.
ಆ ಕಾಲದಲ್ಲಿ ಬಸ್ ಸೌಕರ್ಯ, ರಸ್ತೆ ವ್ಯವಸ್ಥೆ ಇರಲಿಲ್ಲ ಆನಂದಪುರ೦ ಸುತ್ತಮುತ್ತದ 20 ಕಿ.ಮಿ. ವ್ಯಾಪ್ತಿಯಲ್ಲಿ ಹೆಚ್ಚು ಜನ ಬಾಡಿಗೆ ಸೈಕಲ್ ನ್ನೇ ಅವಲಂಬಿಸುತ್ತಿದ್ದರಂತೆ.
ಆಗ ಸೈಕಲ್ ಕಳ್ಳರು ಜಾಸ್ತಿ ಅಂತೆ.
ಸೈಕಲ್ ಶಾಪ್ ಗಳಲ್ಲಿ ಬಾಡಿಗೆ ಸೈಕಲ್ ನೀಡುವ ವ್ಯವಸ್ಥೆ ಜೊತೆ ಸೈಕಲ್ ಪಂಚರ್ ಹಾಕುವುದು, ಒವರ್ ಆಯಿಲ್ ಮಾಡುವುದು, ವೀಲ್ ಬೆಂಡ್ ತೆಗೆಯುವುದು, ಚೈನ್ ಟೈಟ್ ಮಾಡುವುದು ಇತ್ಯಾದಿ ಸೈಕಲ್ ದುರಸ್ತಿ ಕೆಲಸ ಸೈಕಲ್ ಶಾಪ್ ಮಾಲಿಕರ ಆದಾಯಕ್ಕೆ ದಾರಿ ಆಗಿತ್ತಂತೆ.
1990 ಕ್ಕೆಲ್ಲ ಮೊಪೆಡ್ ಉತ್ಪಾದನೆ ಬಳಕೆ ಜಾಸ್ತಿ ಆದಂತೆ ಸೈಕಲ್ ಶಾಪ್ ಗಳು ಕಣ್ಮರೆ ಆಗಲು ಪ್ರಾರಂಭವಾಗಿ 2000ನೆ ಇಸವಿಗೆ ಸೈಕಲ್ ಶಾಪ್ ಗಳೇ ಇಲ್ಲವಾಗಿದೆ.
ಭಾರತದಲ್ಲಿ 1960 ರಿಂದ 1990 ಸೈಕಲ್ ಶಾಪ್ ಗಳ ಉತ್ತುಂಗ ಕಾಲ ಅನ್ನಬಹುದು, ಆಗ ಸೈಕಲ್ ಇದ್ದವ ಶ್ರೀಮಂತ ಮಾತ್ರ ಮತ್ತು ಮನೋರಂಜನೆಗಾಗಿ ಸೈಕಲ್ ರೇಸ್, ಸ್ಲೋ ಸೈಕಲ್ ರೇಸ್ ಕೂಡ ಆಯೋಜಿಸುತ್ತಿದ್ದ ಕಾಲ.
ಒಂಟಿ ಹ್ಯಾಂಡಲ್ ನ ಡಕೋಟ ಸೈಕಲ್ ನಲ್ಲಿ ಹೆಗ್ಗೋಡು ಸಮೀಪದ ಪುರಪ್ಪೆಮನೆಯ ನೀಳ ಗಡ್ಡದ ಬರೀ ಮೈಯ ಸೊಂಟಕ್ಕೊಂದು ವಸ್ತ್ರ ಧರಿಸಿದ್ದ ಒಂದನೇ ನಂಬರ್ ಕಳ್ಳ ಎಂದು ಸ್ಲೇಟನ್ನು ಸೈಕಲ್ ಗೆ ಸಿಕ್ಕಿಸಿಕೊ೦ಡ ಒಬ್ಬರು ಆಗಾಗ ಸಂಚಾರಕ್ಕೆ ಬರುತ್ತಿದ್ದರು ಆಗ ಹಳ್ಳಿಯ ಮಕ್ಕಳೆಲ್ಲ ಅವರನ್ನು ಮುತ್ತಿಕೊಳ್ಳುತ್ತಿದ್ದ ನೆನಪೂ ಮಾಡಿಕೊಂಡೆವು.
Comments
Post a Comment