ಗಾಂದೀಜಿಯವರಿಗೆ ಡರ್ಬಾನ್ ನ ಯುರೋಪಿಯನ್ ನ್ಯಾಯಾದೀಶರು 1893 ರಲ್ಲಿ ಪೇಟಾ ಧರಿಸಿ ನ್ಯಾಯಾಲಯದ ಒಳ ಬರಲು ಅವಕಾಶ ನೀಡುವುದಿಲ್ಲ, ಗಾಂಧೀಜಿ ಈ ತಾರತಮ್ಯ ಪ್ರತಿಭಟಿಸುತ್ತಾರೆ
#ಡರ್ಬಾನ್_ನ್ಯಾಯಾಲಯದಲ್ಲಿ_1893ರ_ಘಟನೆ.
#ಇದನ್ನು_ಪ್ರತಿಭಟಿಸಿ_ಗಾಂಧೀಜಿ_ನ್ಯಾಯಾಲಯದಿಂದ_ಹೊರನಡೆಯುತ್ತಾರೆ.
1893 ರಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದ ಶ್ರೀಮಂತ ವರ್ತಕರಾದ ದಾದಾ ಅಬ್ದುಲ್ಲಾ & ಕಂಪನಿ ನಟಾಲ್ ಇವರ ವ್ಯಾಜ್ಯ ಬಗೆಹರಿಸಲು ಅವರ ಆಹ್ವಾನದ ಮೇರೆಗೆ ಹೋಗುತ್ತಾರೆ.
ಡರ್ಬಾನ್ ನ ನ್ಯಾಯಾಲಯಕ್ಕೆ ದಾದಾ ಅಬ್ದುಲ್ಲಾರ ಜೊತೆಗೆ ಹೋಗಿ ನ್ಯಾಯಾಲಯದಲ್ಲಿ ವಕೀಲರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತು ಕೊಳ್ಳುತ್ತಾರೆ.
ಅಲ್ಲಿನ ಮ್ಯಾಜಿಸ್ಟ್ರೇಟರ್ (ಯುರೋಪಿಯನ್ ) ಗಾಂಧೀಜಿಗೆ ನಿಮ್ಮ ಪೇಟಾ (ಟರ್ಬನ್ ) ಹೊರಗಿಟ್ಟು ಬನ್ನಿ ಅನ್ನುತ್ತಾರೆ, ಗಾಂಧೀಜಿಗೆ ಏಕಂತ ಅರ್ಥವಾಗುವುದಿಲ್ಲ, ಮ್ಯಾಜಿಸ್ಟ್ರೇಟರ್ ತಮ್ಮ ಕೈ ಬೆರಳು ಗಾಂಧೀಜಿಗೆ ತೋರಿಸಿ ನಿಮಗೆ ಹೇಳುತ್ತಿರುವುದಾಗಿ ತಿಳಿಸಿದಾಗ ಗಾಂಧೀಜಿ ಸುತ್ತಲೂ ನೋಡುತ್ತಾರೆ ಅಲ್ಲಿ ಮುಸ್ಲಿಂ ಮತ್ತು ಪಾರ್ಸಿ ವಕೀಲರುಗಳು ಅವರವರ ದರ್ಮಾದಾಧಾರಿತ ಟರ್ಬನ್ ಧರಿಸಿ ಕುಳಿತಿರುತ್ತಾರೆ!
ಗಾಂಧೀಜಿಯವರಿಗೆ ಬ್ರಿಟಿಷರು ಭಾರತೀಯರನ್ನ ಕೂಲಿಯಂತೆ ಕಾಣುವ ಈ ವರ್ಣನೀತಿ ಸಹಿಸಲಾಗದೆ ತಮ್ಮ ಪ್ರತಿಭಟನೆ ದಾಖಲಿಸಿ ನ್ಯಾಯಾಲಯ ಬಹಿಷ್ಕರಿಸಿ ಹೊರನಡೆಯುತ್ತಾರೆ.
ಅಪ್ರಿಕಾದ ಪ್ರೆಸ್ ಗೆ ಸವಿವರವಾಗಿ ವಿವರಿಸಿದ್ದು ಆ ಕಾಲದಲ್ಲಿ ಡರ್ಬಾನ್ ನ್ಯಾಯಾಲಯದ ಯುರೋಪಿಯನ್ ನ್ಯಾಯಾದೀಶರ ಈ ತಾರತಮ್ಯ ದೊಡ್ಡ ಸುದ್ದಿ ಆಗುತ್ತದೆ.
ಇದೆಲ್ಲ ಈಗ ಸ್ಮರಣೆಗೆ ಕಾರಣ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಶಾಂತಿಯುತ ಸರಣಿ - ಸರಣಿ ಹಿಜಾಬ್ ಮತ್ತು ಕೇಸರಿ ಶಾಲು ದಾರಣೆ ಪ್ರತಿಭಟನೆಗಳು ಇವತ್ತು ನಮ್ಮ ಶಿವಮೊಗ್ಗ ಜಿಲ್ಲೆನಲ್ಲಿ ಕಾಲೇಜು ಅವರಣದಲ್ಲಿ ಕಲ್ಲು ತೂರಾಟಕ್ಕೂ ಕಾರಣ ಆಗಿದೆ.
ಕೆಲವೇ ಕ್ಷಣದಲ್ಲಿ ಉಚ್ಚ ನ್ಯಾಯಾಲಯ ಈ ವಿವಾದಕ್ಕೆ ಏನು ಪರಿಹಾರದ ತೀಪು೯ ಅಂತ ಘೋಷಣೆ ಮಾಡಲಿದೆ ಅಲ್ಲಿ ತನಕ ವಿದ್ಯಾರ್ಥಿ ವೃಂದ ಕಾಯಬಾರದೇಕೆ ?
Comments
Post a Comment