Skip to main content

ಗಿಣ್ಣದ ಔಷದಯುಕ್ತ ಲಾಭಗಳು ಅನೇಕ, ರುಚಿಕರವಾದ ಗಿಣ್ಣದ ಹಾಲಿನ ಮೌಲ್ಯವರ್ದಿತ ಸಾವಯವ ಗಿಣ್ಣದ ಹಾಲಿನ ಪುಡಿ ಮತ್ತು ಮಾತ್ರೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

#ಗಿಣ್ಣ_ಕನ್ನಡದಲ್ಲಿ
#ಜನ್ನುಪಾಲು_ತೆಲುಗಿನಲ್ಲಿ
#ಕಾವಾ೯_ಮರಾಠಿ_ಮತ್ತು_ಹಿಂದಿಯಲ್ಲಿ
#ಕೌವ್_ಕೊಲಸ್ಟ್ರಮ್_ಇಂಗ್ಲೀಷನಲ್ಲಿ.

#ಗಿಣ್ಣದಲ್ಲಿ_ಏನೇನೆಲ್ಲ_ಇದೆ.

#ಆತ್ಮಹತ್ಯೆಯೆ೦ಬ_ಹತಾಷೆ_ಮನಸ್ಸಿಂದ_ದೂರ_ಮಾಡುವ_ಶಕ್ತಿ_ಗಿಣ್ಣಕ್ಕಿದೆ.

#ಆಯುರ್ವೇದದಲ್ಲಿ_ಪೀಯುಷ್_ಅಂದರೆ_ಅಮೃತ_ಎಂಬ_ಹೆಸರು_ಗಿಣ್ಣಕ್ಕೆ 

  ಕಿರಿಯ ಗೆಳೆಯ ಉತ್ಸಾಹಿ ಶ್ರಮ ಜೀವಿ #ಮಡವಳ್ಳಿ_ಆದರ್ಶ ನನಗಾಗಿ ಮೊನ್ನೆ ಎಮ್ಮೆ ಗಿಣ್ಣ ತಂದು ಕೊಟ್ಟಿದ್ದರು.
  ಗಿಣ್ಣ ಅಂದರೆ ನನಗೆ ಅತ್ಯಂತ ಇಷ್ಟ ಇದರಲ್ಲಿ ಅನೇಕ ಬಗೆಯ ಗಿಣ್ಣ ಮಾಡುತ್ತಾರೆ.
  ಭಾರತೀಯ ಆಯುರ್ವೇದದಲ್ಲಿ ಇದಕ್ಕೆ ಅಮೃತ ಎಂಬ ಸಂಸ್ಕೃತದ ಪೀಯೂಷ್ ಎಂಬ ಹೆಸರಿದೆ.
  ಭಾರತೀಯರಲ್ಲಿ ಮೇಲ್ವರ್ಗದ ಕೆಲ ಜಾತಿಗಳು ಎಮ್ಮೆ ಮತ್ತು ದನದ ಗಿಣ್ಣದ ಹಾಲು ಬಳಕೆ ನಿಷೇದವಿದೆ, ಹನ್ನೊಂದು ದಿನದ ತನಕ ಆಮೆ (ಸೂತಕ ) ಎಂದು ಗಿಣ್ಣದ ಹಾಲು ಕರುಗಳಿಗೆ ಬಿಡುವ ಸಂಪ್ರದಾಯವಿದೆ, ಈ 11 ದಿನದ ಹಾಲು  ಹುಟ್ಟಿದ ಕರುಗಳಿಗೆ ತುಂಬಾ ಆರೋಗ್ಯ ವೃದ್ಧಿ ನೀಡುವ ಹಾಲು ಎಂಬುದು ಒಂದು ಕಾರಣ ಇರಬಹುದು.
   ವೀರಶೈವ ಲಿಂಗಾಯಿತರಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ ಅದಕ್ಕೆ ಗಾದೆಯೂ ಇದೆ ಗಿಣ್ಣ ಮಾಡಿದರೆ ಶತ್ರು ಕೂಡ ಮಿತ್ರನಾಗಿ ಬರುತ್ತಾನೆ ಎಂಬ ಅರ್ಥವಿದೆ.
  ಹೈಪ್ರೋಟೀನ್, ರೋಗ ನಿರೋದಕ ಶಕ್ತಿ, ನರ ದೌರ್ಬಲ್ಯ ಸರಿಪಡಿಸುವ, ಎಳೆಯ ಮಕ್ಕಳು ಮತ್ತು ವೃದ್ಧಪ್ಯಾದಲ್ಲಿ ದೇಹಕ್ಕೆ ಬೇಕಾದ ಶಕ್ತಿ ವೃದ್ದಿಸುವ ಗಿಣ್ಣು ಸೇವನೆ ಒಳ್ಳೆಯದೆಂಬ ಸಂಶೋದನೆ ಆಗಿದೆ.
  ಗಿಣ್ಣು ರುಚಿಯಷ್ಟೆ ಶಕ್ತಿವರ್ಧಕ ಆದ್ದರಿಂದ ಈಗ ಮಾರುಕಟ್ಟೆಯಲ್ಲಿ ಆರ್ಗನಿಕ್ ಗಿರ್ ದನದ ಗಿಣ್ಣದ ಹಾಲಿನ ಪುಡಿ ಮತ್ತು ಮಾತ್ರೆ ಕೂಡ ಲಭ್ಯವಿದೆ.
  ಇದೇ ರೀತಿ ಸಂಸ್ಕರಿಸಿದ ಗಿಣ್ಣದ ಹಾಲಿನ ಪುಡಿ ಕೂಡ ಅನೇಕ ಬ್ರಾಂಡೆಡ್ ಸಂಸ್ಥೆಗಳು ಮಾರಾಟ ಮಾಡುತ್ತಿದೆ ಕನಿಷ್ಟ 100 ಗ್ರಾಂಗೆ ರೂ 599 ರಿಂದ ರೂ 1049ರ ವರೆಗೆ ಇದೆ. ಕರ್ನಾಟಕದ ಬಳ್ಳಾರಿಯ ಕೊಟ್ಟೂರೇಶ್ವರ ದೇವಾಲಯದ ನಿತ್ಯ ದಾಸೋಹದಲ್ಲಿ ಮತ್ತು ಸವದತ್ತಿಯ ಎಲ್ಲಮ್ಮ ದೇವಾಲಯದಲ್ಲಿ ಭಾರತ ಹುಣ್ಣಿಮೆಯಲ್ಲಿ ಗಿಣ್ಣು ಭಕ್ತರಿಗೆ ಬಡಿಸುವ ಸಂಪ್ರದಾಯವಿದೆ.
  ಗಿಣ್ಣದ ಹಾಲನ್ನು ಯಾವ ಕಾರಣಕ್ಕೂ ಹಸಿಯಾಗಿ ಸೇವಿಸಬಾರದೆಂಬ ನಿಯಮಕ್ಕೆ ವೈಜ್ಞಾನಿಕ ಕಾರಣವೂ ಇದೆ, ಗಿಣ್ಣವನ್ನು ಸೇವಿಸಿದರೆ ಮನಸ್ಸಿನಲ್ಲಿನ ಆತ್ಮಹತ್ಯೆಯಂತ ಹತಾಶ ಭಾವನೆ ಮಾಯವಾಗುತ್ತೆ ಎಂಬ ನಂಬಿಕೆಯೂ ಇದೆ.
  ಹೆಚ್ಚು ಗಿಣ್ಣ ಸೇವಿಸಿದರೆ ನಂಜಾಗುತ್ತದೆ ಅದಕ್ಕೆ  ಕಹಿ ಜೀರಿಗೆ ಕಷಾಯ, ಕೊಡಸಿನ ಬೇರನ್ನು ಲಿಂಬೆ ರಸದಲಿ ತೇದಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕೆಂಬ ಪರಿಹಾರವೂ ಚಾಲ್ತಿಯಲ್ಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...