ಜಾಜ್೯ ಹಾರ ತುರಾಯಿಗಳಿ೦ದ ಬಹು ದೂರ .
ಸಮಾಜವಾದಿ ಜಾಜ್೯ ಅಭಿಮಾನಿಗಳಿಂದ ಹಾರ ತುರಾಯಿ ಯಾವುದೇ ಕಾರಣಕ್ಕೂ ಹಾಕಿಸಿ ಕೊಳ್ಳುತ್ತಿರಲಿಲ್ಲ ಆದರೆ ಶಾಲುಗಳನ್ನ ಸ್ವೀಕರಿಸುತ್ತಿದ್ದರು.
ಹಾಗಾಗಿ ಪ್ರತಿ ಬೆಳಿಗ್ಗೆ 5ಕ್ಕೆ ಅವರನ್ನ ಬೇಟಿ ಮಾಡಲು ಬರುವವರು ತರಹಾವಾರೆ ಶಾಲುಗಳೊಂದಿಗೆ ಬರುತ್ತಿದ್ದರು, ಶಾಲುಗಳಿಗೆ ಜಾಜ್೯ರ ಹೆಗಲು ಯಾವತ್ತೂ ತೆರೆದಿರುತ್ತಿತ್ತು.
ನೂರಾರು ಶಾಲುಗಳನ್ನ ತೆಗೆದು ಸಹಾಯಕರ ಕೈಗೆ ನೀಡಿ ಕೊನೆಯ ಶಾಲನ್ನ ಹೊದ್ದು ದೆಹಲಿಯ ಸೂಯೋ೯ದಯದ ಮೊದಲಿನ ಚುಮು ಚುಮು ಚಳಿಯಲ್ಲಿ ಏರ್ ಪೋಟ್೯ಗೆ ಯಾವುದೇ ಎಸ್ಕಾಟ೯ ಇಲ್ಲದೆ ತಮ್ಮ ಹಳೆಯ ಪಿಯಟ್ ಕಾರ್ ನಲ್ಲಿ ಹೋಗಿ ಬಿಡುತ್ತಿದ್ದರು.
ಅವರ ಅತ್ಯಾಪ್ತ ಕನ್ನಡಿಗ ಅನಿಲ್ ಹೆಗ್ಗಡೆಯವರಿಗೆ ಕೇಳಿದೆ ಅಷ್ಟೆಲ್ಲ ಶಾಲುಗಳ ಏನು ಮಾಡುತ್ತಾರೆ ಜಾಜ್ ೯ ಅಂತ ಅವರು ಹೇಳಿದ್ದು ಕೇಳಿ " ಪ್ರತಿ ನೂರು ಶಾಲಿನ ಒಂದೊಂದು ಬಂಡಲ್ ಮಾಡಿಸಿ ಇಡುತ್ತಾರೆ, ದೇಶದಾದ್ಯಂತ ಓಡಾಡುವ ಅವರು ಅವಶ್ಯವಿರುವ ಶಾಲೆ, ಅನಾಥ ಆಶ್ರಮ ಅಥವ ವೃದ್ದಾಶ್ರಮಕ್ಕೆ ಕಳಿಸಿಬಿಡುತ್ತಾರೆ, ಇದು ಅವರು ನಡೆಸಿ ಕೊಂಡು ಬಂದಿರುವ ಪದ್ದತಿ" ಎ೦ದರು.
ನಮ್ಮ ರಾಜಕಾರಣಿಗಳಲ್ಲಿ ಇಂತವರು ಸದ್ಯ ಯಾರೂ ಇರಲಿಕ್ಕಿಲ್ಲ.
ನೆನಪು/ಬರಹ
ಕೆ.ಅರುಣ್ ಪ್ರಸಾದ್.
ಮಾಜಿ ಜಿ.ಪಂ. ಸದಸ್ಯ
ಆನಂದಪುರಂ.
Comments
Post a Comment