ದೀಘ೯ ಕಾಲ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಧ್ಯಕ್ಷರಾಗಿ, ದಿನಕರ ದೇಸಾಯಿಯವರ ಶೈಲಿಯಲ್ಲಿ ಚುಟುಕು ಸಾಹಿತ್ಯ ರಚಿಸಿ ಮಲೆನಾಡ ದಿನಕರ ದೇಸಾಯಿ ಎಂದೇ ಹೆಸರಾಗಿದ್ದ ಸಜ್ಜನ ಹಾ. ಸಾ. ಹಸನ್ ರು ಇನ್ನು ನೆನಪು ಮಾತ್ರ
#ದೀಘಾ೯ವದಿ_ಸಾಗರ_ತಾಲ್ಲೂಕ್_ಕಾಂಗ್ರೇಸ್_ಅಧ್ಯಕ್ಷರಾಗಿದ್ದರು.
#ಮಲೆನಾಡ_ದಿನಕರ_ದೇಸಾಯಿ_ಎಂಬ_ಬಿರುದು_ಇವರಿಗಿತ್ತು.
#ನನ್ನ_ಕಥಾ_ಸಂಕಲನದ_ಪುಸ್ತಕದಲ್ಲಿನ_ಒಂದು_ಕಥೆಯಲ್ಲಿ_ಹಾ_ಸಾ_ಹಸನ್_ಸಾಹೇಬರಿದ್ದಾರೆ.
ಲಿಂಗನಮಕ್ಕಿ ಡ್ಯಾಂ ನಿರ್ಮಾಣದ ವೇಳೆ ಸಣ್ಣದಾಗಿ ಕಂಟ್ರಾಕ್ಟ್ ಕೆಲಸ ಮಾಡ್ತಾ ಇದ್ದ ಕಾಗ೯ಲ್ ನ ಹಸನ್ ಸಾಬರಿಗೆ ನಿಧಿ ಸಿಕ್ಕಿತ್ತು ಅಂತ ಜನ ಅಂತಿದ್ದರು, ಒಮ್ಮೆ ಹಸನ್ ಸಾಬರಿಗೆ ಈ ಬಗ್ಗೆ ಕೇಳಿದಾಗ ಅವರು ಹೇಳಿದ್ದು, ಮಣ್ಣು ಆಗೆಸಲಿಕ್ಕೆ ಆಂಧ್ರದಿಂದ ಕೂಲಿ ಆಳುಗಳನ್ನು ಬಿಟ್ಟಿದ್ದೆ. ಮಧ್ಯಾಹ್ನದ ಹೊತ್ತು ಬಿಸಿಲಲ್ಲಿ ಅಲ್ಲೇ ಮರದ ಕೆಳಗೆ ಕುಳಿತಿದ್ದೆ, ಆಗ ಕೆಲಸ ನಿಲ್ಲಿಸಿ ಬಂದ ಕೂಲಿಗಳು ನೆಲದಲ್ಲಿ ದೊಡ್ಡ ಕೊಪ್ಪರಿಗೆ ಇದೆ ಅಂದರು, ನಾನು ಹುಷಾರಾದೆ, ತಕ್ಷಣ ಕೆಲಸ ನಿಲ್ಲಿಸಲು ಹೇಳಿದೆ. ರಾತ್ರಿ ಅವರನ್ನೂ ಉಪಯೋಗಿಸಿಕೊಂಡು ಆ ಕೊಪ್ಪರಿಗೆ ತೆಗೆದರೆ ಅದರಲ್ಲಿ ಏನೂ ಇರಲಿಲ್ಲ, ನಂತರ ಸಣ್ಣ ಕೊಪ್ಪರಿಗೆ ನನ್ನ ಹೆರಾಲ್ಡ್ ಕಾರ್ ನ ಡಿಕ್ಕಿಯಲ್ಲಿ ಹಾಕಿಕೊಂಡು ಬಂದೆ, ಒಂದು 40 ಕೇಜಿ ಬಿರಿಯಾನಿ ಮಾಡೋ ಅಂತ ತಾಮ್ರದ ತಪ್ಪಲೆ ಅದು.
ಜನ ನನಗೆ ನಿಧಿ ಸಿಕ್ಕಿತು ಅಂತ ಪ್ರಚಾರ ಮಾಡಿದರು, ನನ್ನ ಹೆರಾಲ್ಡ್ ಕಾರ್ ಡಿಕ್ಕಿ ಈ ತಪ್ಪಲೆ ಇಡಬೇಕಾದರೆ ಸ್ವಲ್ಪ ಜಕ್ಕಂ ಆಗಿತ್ತು ಅದನ್ನು ಸಾಕ್ಷಿ ಮಾಡಿಕೊಂಡು ಹೇಳ್ತಾ ಬಂದರು .....
ಈ ಘಟನೆ ನನ್ನ ಕಥಾ ಸಂಕಲನದಲ್ಲಿ ದಾಖಲಾಗಿದೆ ಈ ರೀತಿ ಅದನ್ನು ದಾಖಲಿಸುವುದಾಗಿ ಅವರಿಗೆ ತಿಳಿಸಿದ್ದೆ ಕನ್ನಡ ಸಾಹಿತ್ಯಾಭಿಮಾನಿಗಳು ಸ್ವತಃ ಸಾಹಿತಿಗಳಾಗಿದ್ದ ಹಾ.ಸಾ. ಹಸನ್ ಸಾಹೇಬರು ಒಪ್ಪಿದ್ದರು ಪುಸ್ತಕ ಪ್ರಕಟವಾಗಿ ಬಿಡುಗಡೆ ಆಯಿತು, ಪುಸ್ತಕ ಅವರಿಗೆ ಮುದ್ದಾಂ ಆಗಿ ತಲುಪಿಸಲು ವಿಳಂಬ ಆಯಿತು ಕಳೆದ ವಾರದಿಂದ ವೈರಲ್ ಪೀವರ್ ಆಗಿ ಮಲಗಿಬಿಟ್ಟಿದ್ದೆ ಆಗಲೇ ಗೊತ್ತಾಗಿದ್ದು ಹಾ. ಸಾ. ಹಸನ್ ಸಾಹೇಬರು ನಮನ್ನೆಲ್ಲ ಅಗಲಿದ್ದಾರೆ ಅಂತ.
ರಾಜಕೀಯ, ಉದ್ಯೋಗ, ಓದು-ಬರವಣಿಗೆ ಜೊತೆ ಜೊತೆಯಲ್ಲೇ ಯಶಸ್ವಿಯಾಗಿ ನಿರ್ವಹಿಸಿದರು.
ಅವರ ಶ್ವೇತ ವರ್ಣದ ಉಡುಪು, ಕ್ಷೀನ್ ಶೇವ್ ಮಾಡಿದ ಹಸನ್ಮುಖಿ ಹಸನ್ ಸಾಹೇಬರಿದ್ದಲ್ಲಿ ಸಮಯ ಸರಿಯುವುದೇ ಗೊತ್ತಾಗುತ್ತಿರಲಿಲ್ಲ, ಆಳವಾಗಿ ಓದಿಕೊಂಡಿರುತ್ತಿ ಅವರು ಮಧ್ಯಮದ್ಯ ಹಾಸ್ಯ ಚಟಾಕಿಯೊಂದಿಗೆ ರಾಜಕೀಯ, ಪ್ರಚಲಿತ ಘಟನೆ, ಸಾಹಿತ್ಯದ ಬಗ್ಗೆ ವಿಸ್ತಾರವಾಗಿ ಮಾತಾಡುತ್ತಿದ್ದರು.
ಇವರ ಸಹೋದರಿ ರಿಪ್ಪನ್ ಪೇಟೆಯಿಂದ (ಯೂಸೂಪ್ ಸಾಹೇಬರ ದರ್ಮ ಪತ್ನಿ) ಹೊಸನಗರ ತಾಲ್ಲೂಕನ ತಾಲ್ಲೂಕ್ ಪಂಚಾಯತ್ ಸದಸ್ಯರಾಗಿ ಉಪಾಧ್ಯಕ್ಷರೂ ಆಗಿದ್ದರು ಅವರೂ ಸಾಹಿತಿಗಳಾಗಿದ್ದರು.
1980 ರಲ್ಲಿ ಸಾಗರದಲ್ಲಿ ತೀ.ನಾ. ಶ್ರೀನಿವಾಸರ ಸ್ಥಳಿಯ ಪತ್ರಿಕೆ #ನ್ಯಾಯದ_ತಕ್ಕಡಿ ಕಾಯಾ೯ಲಯಕ್ಕೆ ಪ್ರತಿ ದಿನ ಕಾರ್ಗಲ್ ನಿಂದ ಕಾಂಗ್ರೇಸ್ ಕಛೇರಿಗೆ ಬರುತ್ತಿದ್ದ ಹಾ. ಸಾ. ಹಸನ್ ಸಾಹೇಬರು ಸರಸರನೆ ಹತ್ತಾರು ಚುಟುಕಗಳನ್ನು (ನಾಲ್ಕು ಸಾಲಿನಲ್ಲಿ) ಬರೆದು ಕೊಟ್ಟು ಹೋಗುತ್ತಿದ್ದರು ಅದು ಮರುದಿನ ಪ್ರಕಟ ಆಗುತ್ತಿತ್ತು ಈ ಚುಟುಕುಗಳನ್ನು ನೋಡಿ ಆಸ್ವಾದಿಸಿದವರೇ ಇವರಿಗೆ ಮಲೆನಾಡ ದಿನಕರ ದೇಸಾಯಿ ಎಂಬ ಬಿರುದು ನೀಡಿದ್ದರು.
Comments
Post a Comment