ರಂಗ ಪೂಜೆ ಏನಿದರ ಮಹತ್ವ? ನಮ್ಮ ಊರಿನ ಶ್ರೀ ವರ ಸಿದ್ಧಿ ವಿನಾಯ ಸ್ವಾಮಿ ದೇವರ ರಥೋತ್ಸವದ ದಿನ ನಡೆಯುವ ರಂಗ ಪೂಜೆಯ ವಿಶೇಷತೆಗಳು
#Ranga_puja_for_siddivinayaka
#ಶ್ರೀವರಸಿದ್ದಿವಿನಾಯಕ_ದೇವರಿಗೆ_ರಂಗಪೂಜೆ.
#ಪ್ರತಿವರ್ಷ_ಈ_ರಂಗಪೂಜೆಯೊಂದಿಗೆ_ಜಾತ್ರೆ_ಸಂಪನ್ನವಾಗುತ್ತದೆ.
#ರ೦ಗಪೂಜೆಯ_ಮಹತ್ವ_ಇಲ್ಲಿದೆ.
ಪ್ರತಿ ವರ್ಷ ಕುಂದ ಚತುರ್ಥಿಯಲ್ಲಿ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವರ ವಾರ್ಷಿಕೋತ್ಸವ,108 ಕಾಯಿಗಳ ಮಹಾ ಗಣಹೋಮ,ಬ್ರಹ್ಮ ರಥೋತ್ಸವ ಮತ್ತು ಈ ರಂಗ ಪೂಜೆ ನಿರಂತರ ನಡೆದಿದೆ.
ಈ ವರ್ಷ 16 ನೇ ವರ್ಷಾಚಾರಣೆ ಕೋವಿಡ್ ನಿರ್ಬಂದಗಳಿದ್ದರಿಂದ ರಥಬೀದಿ ಉತ್ಸವ, ಊರ ಒಳಗೆ ಪಲ್ಲಕ್ಕಿ ಉತ್ಸವ, ರಂಗೋಲಿ ಸ್ಪರ್ದೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರತಿ ವರ್ಷದಂತೆ ವಿಶೇಷ ಅನ್ನ ಸಂತರ್ಪಣೆ (ಹೋಳಿಗೆ ತುಪ್ಪದ ಊಟ) ಈ ವರ್ಷ ರದ್ದಾಗಿತ್ತು.
#ದಾರ್ಮಿಕ ಕಾರ್ಯಕ್ರಮಗಳು ಮಾತ್ರ ಶ್ರದ್ದಾ ಭಕ್ತಿಯಿಂದ ನಡೆಯಿತು, ಬೆಳಿಗ್ಗೆ ಹೋಮ-ಹವನ-ಅಭಿಶೇಕ -ಬಲಿಪೂಜಿ ಮದ್ಯಾಹ್ನ ಬ್ರಹ್ಮ ರಥೋತ್ಸವ ಮತ್ತು ಸಂಜೆ ರಂಗ ಪೂಜೆಯೊಂದಿಗೆ 16ನೇ ವಾರ್ಷಿಕ ಕಾರ್ಯಕ್ರಮ ಸಂಪನ್ನಗೊಂಡಿತು.
#ಏನಿದು_ರಂಗಪೂಜೆ?
ರಂಗ ಪೂಜೆಯ ಕಾಲಮಾನದ ಬಗ್ಗೆ ನಿಖರ ಮಾಹಿತಿ ಇಲ್ಲ ಆದರೆ ರಂಗ ಪೂಜೆಯಿಂದ ಪಾಪ ಪರಿಹಾರ, ಪುಣ್ಯ ಪ್ರಾಪ್ತನೆ, ಕೀರ್ತಿ, ಯಶಸ್ಸು, ಧನ, ಬೂತಪ್ರೇತಾದಿ ಉಪದ್ರವ ವಿವಾರಣೆ, ಪತ್ನಿ, ಪುತ್ರ, ಪೌತ್ರಾದಿಗಳನ್ನು ನೀಡುತ್ತದೆ ಈ ಪೂಜೆಯಿಂದ ಗ್ರಾಮ, ದೇಶಕ್ಕೆ ಶುಭ ಉಂಟಾಗುತ್ತದೆ ಇದರಿಂದ ಎಲ್ಲಾ ದೇವತೆಗಳೂ ಸಂತುಷ್ಟರಾಗುತ್ತಾರೆ ಶ್ರೀಹರಿಯ ಪೂರ್ಣ ಅನುಗ್ರಹ ಪ್ರಾಪ್ತಿ ಮತ್ತು ಸರ್ವ ಸಿದ್ದಿ ದೊರೆಯುತ್ತದೆ ಎಂಬ ಪ್ರತೀತಿ, ನಂಬಿಕೆ ಮತ್ತು ಆಚರಣೆ ಇದೆ ಅಂತ ರಥೋತ್ಸವ ಮತ್ತು ರಂಗ ಪೂಜೆ ಪ್ರತಿ ವರ್ಷ ನಡೆಸುವ ಸೋ೦ದ ಸ್ವರ್ಣವಲ್ಲಿ ಸ್ವಾಮೀಜಿಗಳ ಪೂವಾ೯ಶ್ರಮದ ಮನೆಯ ಪುರೋಹಿತರಾದ ಸಿರ್ಸಿಯ ತಾರಗೋಡಿನ ಶ್ರೀ ರಾಮಚಂದ್ರ ಭಟ್ಟರು ಪ್ರವಚನದಲ್ಲಿ ಹೇಳುತ್ತಾರೆ.
ರಾತ್ರಿ ದೇವರ ಗರ್ಭಗುಡಿ ದ್ವಾರದಿಂದ ದ್ವಜ ಸ್ಥಂಭದವರೆಗೆ ಹಲಗೆಯನ್ನು ಕಟ್ಟಿ, ವಸ್ತ್ರಹಾಸಿ ಕುಡಿ ಬಾಳೆ ಎಲೆ ಜೋಡಿಸಿ ನೈವೇದ್ಯ ಲಿಂಗಾಕಾರವಾಗಿ ಇರಿಸಿ ಅದರ ಜೊತೆ ಬೆಲ್ಲ, ಬಾಳೆಹಣ್ಣು, ಅವಲಕ್ಕಿ, ಅರಳು, ವಿವಿದ ಹಣ್ಣುಗಳು, ತೆಂಗಿನಕಾಯಿ, ಮೊದಕ, ವೀಳ್ಯದ ಎಲೆ, ಅಡಿಕೆ, ಕಬ್ಬು, ಹಿಂಗಾರ ಹೂವುಗಳ ಅಲಂಕಾರ ಮಾಡಿ ಎರೆಡೂ ಪಾರ್ಶ್ವದಲ್ಲಿ ಹಣತೆಯ ದೀಪ ಬೆಳಗಿ ದೇವರಿಗೆ ಸಮರ್ಪಿಸಿ, ಸ೦ಗೀತ - ನೃತ್ಯ - ಶಂಖಾನಾದಗಳ ಸೇವೆಯೊಂದಿಗೆ ಮಂತ್ರ ಉಚ್ಚಾರದ ನಂತರ ಮಹಾಮಂಗಳಾರತಿ ಆಗುತ್ತದೆ.
ಇಂತಹ ರಂಗ ಪೂಜೆಯಲ್ಲಿ ಭಾಗವಹಿಸಿದರೆ, ನೋಡಿದರೆ, ಸಹಕರಿಸಿದರೆ ಮತ್ತು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಪುಣ್ಯ ಪ್ರಾಪ್ತಿ, ವಿಘ್ನಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.
Comments
Post a Comment