#ಪ್ರತಿ_ಮನೆಯಲ್ಲೂ_ಇರಬೇಕಾದದ್ದು.
#ಬಹಳ_ವರ್ಷಗಳಿಂದ_ಬಯಸಿದ್ದು_ನಿನ್ನೆ_ಬಂದಿತು.
ಸ್ನೇಕ್ ಕ್ಯಾಚರ್, ಸ್ನೇಕ್ ಕ್ಯಾಚರ್ ಸ್ಟಿಕ್, ಟಾಂಗ್ ಇತ್ಯಾದಿ ಹೆಸರಲ್ಲಿ ಕರೆಯುವ ಈ ಸರಳ ಉಪಕರಣ ಅನಪೇಕ್ಷಿತ ಅತಿಥಿಗಳಾಗಿ ಮನೆಯ ಒಳಗೆ ಬರುವ ಅಥವ ಮನೆ ಸುತ್ತಲ ಕೈ ತೋಟಗಳಲ್ಲಿ ತನ್ನ ಅಹಾರಕ್ಕಾಗಿ ಹೊಂಚಿ ಕುಳಿತುಕೊಳ್ಳುವ ಹಾವುಗಳನ್ನು ನಿವಾರಿಸಲು ಅತ್ಯಂತ ವೈಜ್ಞಾನಿಕವಾದ ಸರಳವಾದ ಮತ್ತು ಸುರಕ್ಷಿತ ಉಪಕರಣ.
ಹೆಚ್ಚಿನ ಸಂದರ್ಭದಲ್ಲಿ ಹಾವುಗಳು ಕಂಡಾಗ ಅದನ್ನು ಹಿಡಿದೊಯ್ದು ಕಾಡಿಗೆ ಬಿಡುವ ಹಾವು ಸಂರಕ್ಷರನ್ನು ಸಂಪರ್ಕಿಸಿದರೆ ಅವರು ತಕ್ಷಣ ಬರಲಾಗದಂತ ಸಂದಭ೯ಗಳಲ್ಲಿ ಹಾವಿನ ಜೊತೆ ಆತಂಕದಿಂದ ದಿನ ಕಳೆಯಬೇಕಾಗುತ್ತದೆ, ಇಂಥಹ ಸಂದರ್ಭ ರಾತ್ರಿ ಆದರೆ ದೇವರೇ ಗತಿ.
ಕೆಲವೊಮ್ಮೆ ವಿಷಪೂರಿತ ಹಾವು, ಕೆಲವೊಮ್ಮೆ ವಿಷ ಇಲ್ಲದ ಹಾವು ಕೂಡ ಇರುತ್ತದೆ, ಮೊದಲೆಲ್ಲ ಹಾವು ಹಿಡಿದು ಹಾವಾಡಿಸಿ ಜೀವನ ಮಾಡುತ್ತಿದ್ದ ಹಾವಾಡಿಗರು ಈ ವೃತ್ತಿಯಿಂದ ಬಿಡುಗಡೆ ಪಡೆಯುತ್ತಿದ್ದಾರೆ.
ಸ್ಥಳಿಯ ಆಪತ್ಕಾಲದ ಬಾಂದವರಾಗಿ ಹಾವು ಹಿಡಿದು ದೂರ ಬಿಡುವವರೂ ಈಗಿಲ್ಲ, ಹಾವು ಹೊಡೆದರೆ ನಾಗರ ಶಾಂತಿಗೆ ಕೆಲ ಸಾವಿರ ಖರ್ಚಾಗುತ್ತೆ ಅಂತೆಲ್ಲ ಭಯಾ ಕೂಡ.
ಹಾವು ಸಂರಕ್ಷಣೆ ಮಾಡಲು ದೂರದಿಂದ ಬರುವವರಿಗೆ ಕನಿಷ್ಟ ಎರಡರಿಂದ ಮೂರು ಸಾವಿರ ಹಣ ಕೊಡಲೇ ಬೇಕು ಆದ್ದರಿಂದ ಆರು ಅಡಿ ದೂರದಿಂದ ಸುರಕ್ಷಿತವಾಗಿ ಈ ಕ್ಲಿಪ್ ನಂತ ಉಪಕರಣದಿಂದ ಹಾವು ಹಿಡಿದು ಮನೆಯಿಂದ ದೂರ ಬಿಟ್ಟು ಬರಬಹುದಾದ ಈ ಉಪಕರಣ ಪ್ರತಿ ಒಬ್ಬರ ಮನೇನಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.
ಇದನ್ನು ಖರೀದಿಸಲು ಯೋಚಿಸುವುದು ನಂತರ ಮರೆಯುವುದು ಕೆಲವಷ೯ದಿಂದ ಆಗಿತ್ತು.
Comments
Post a Comment