ನಾಳೆ -ಬುದವಾರ - 9 - ಫೆಬ್ರುವರಿ-2022ಕ್ಕೆ 57 ವಷ೯ದ ಆಯಸ್ಸು ದಾಟಲಿದೆ.
ಸಾಗಿ ಬಂದ ದಾರಿಯ ಹಿನ್ನೋಟ ಮತ್ತು ಸಾಗಲಿರುವ ದಾರಿಯ ಮುನ್ನೋಟ.
ಅಂದರೆ ನನಗೆ ನನ್ನ ಜೀವಿತದ 57 ವರ್ಷ ಕಳೆದು 58ನೇ ವರ್ಷದ ಕಡೆ ಸಾಗಲು ಪ್ರಾರಂಭ ಆದಂತೆ.
ನಾನು ಹೋದಲ್ಲಿ ಜೀವನ ಬಂತೋ ಅಥವ ಜೀವನ ಕರೆದುಕೊಂಡು ಹೋದ ಮಾಗ೯ದಲ್ಲಿ ನಾನು ಹೋದೆನಾ? ಅಂತ ನೋಡಿದರೆ ನನ್ನ ಪ್ರಯತ್ನಗಳು ವಿಪಲವಾಗಿ,ಅದು ಹೋದಲ್ಲಿ ತಕರಾರು ಇಲ್ಲದೆ ನಾನು ಹೋದದ್ದರಿಂದ ಸಪಲತೆ ದೊರೆಯಿತೆನ್ನಿಸುತ್ತದೆ.
ಯಾವುದೂ ಅಂತ್ಯವೂ ಅಲ್ಲ ಆರಂಭವೂ ಅಲ್ಲ ರೂಪಾಂತರ ಮಾತ್ರ ಎಂಬಂತೆ ಅನೇಕ ಉದರ ನಿಮಿತ ಉದ್ಯೋಗಗಳನ್ನು ಮಾಡಿ ಅಪಾರ ಅನುಭವದ ಕಣಜಗಳನ್ನು ಕಟ್ಟಿದ್ದಾಯಿತು, ಮಿತ್ರ ದ್ರೋಹದ ಫಲ ಕೂಡ ಸ್ವೀಕರಿಸಾಯಿತು ಇದು ಎಲ್ಲರ ಜೀವನದಲ್ಲೂ ನಡೆಯುವಂತದ್ದೇ.
ನಮ್ಮ ಆತ್ಮೀಯ ಖಾಸಾ ವೈದ್ಯರಾದ ಶಿವಮೊಗ್ಗದ ಡಯಾಬಿಟೀಸ್ ತಜ್ಞರಾದ ISLETS ಆಸ್ಪತ್ರೆ ಮಾಲಿಕರಾದ #ಡಾಕ್ಟರ್_ಪ್ರೀತಂ ಕೇಳುತ್ತಿದ್ದರು ನೀವು ಏನೇನೆಲ್ಲ ಉದ್ಯೋಗ ಮಾಡಿದ್ದೀರಿ ಅಂತ.
ಈಗ 57 ವರ್ಷ ಪೂರೈಸಿದಾಗ ಅದೆಲ್ಲ ನೆನಪು ಮಾಡಿಕೊಂಡು ಇಲ್ಲಿ ಬರೆದಿದ್ದೇನೆ.
1. ವಜಿ೯ನಿಯಾ ತಂಬಾಕು ಬೆಳೆಯಲು ನಮ್ಮದೇ ನರ್ಸರಿಯಲ್ಲಿ ತಂಬಾಕು ಸಸಿ ನಾನೇ ನಿತ್ಯ ನೀರು ಹಾಕಿ ಬೆಳೆಸಿದ್ದು ನಂತರ ತಂಬಾಕು ಎಲೆ ಬ್ಯಾರನ್ ನಲ್ಲಿ ಹದ ಮಾಡಿ ಗ್ರೇಡ್ ಮಾಡುವ ಕೆಲಸ.
2. ಸಣ್ಣ ದಿನಸಿ ಅಂಗಡಿ .
3. ಆ ಕಾಲದಲ್ಲಿ ಸಾಗರದಲ್ಲಿ ಮಾಕ್೯-4 ಡಿಸೇಲ್ ಟ್ಯಾಕ್ಸಿ ಮಾಲಿಕ
4. ಚಿಕ್ಕ ಅಕ್ಕಿ ಗಿರಣಿಯಿಂದ, ಬಿನ್ನಿ ಮಿಲ್ ನಂತರ ದಾಂಡೇಕರ್ - 9 ನಂಬರ್ ಮಿಲ್ ತನಕ ಮಾಲಿಕ - ಡ್ರೈವರ್ - ಮೆಕಾನಿಕ್ - ಹಮಾಲಿ ಎಲ್ಲಾ ಅನುಭವ.
5, ತಂಪು ಪಾನಿಯ ಉದ್ದಿಮೆ.
6. ಕೈಗಾರಿಕಾ ಯಂತ್ರೋಪಕರಣ ಸರಬರಾಜುದಾರ.
7. ಕೆಮಿಕಲ್ ಇಂಡಸ್ಟ್ರಿ .
8. ಜಂಬಿಟ್ಟಿಗೆ ಕಲ್ಲು ಕ್ವಾರಿ.
10. ಚಲನ ಚಿತ್ರಮಂದಿರ.
11., ಶಾಮಿಯಾನ - ಪಾತ್ರೆಗಳ ಬಾಡಿಗೆ ಕೊಡುವ ವೃತ್ತಿ
12.. ಬಸ್ ಮಾಲಿಕ
13.. ಪೆಟ್ರೋಲ್ ಡಿಸೇಲ್ ಟ್ರಾನ್ಸ್ ಪೋಟ್೯ ಟ್ಯಾಂಕರ್ ಮಾಲಿಕ.
18. ಹೊಂಬುಜ ಗಾಡೇ೯ನಿಯ ಎಂಬ ಹೊಸ ಲಾಡ್ಜ್
19. ಕಳೆದ ವರ್ಷ ಪ್ರಾರಂಬಿಸಿರುವ ವೈದ್ಯೋ ನಾರಾಯಣ ಹರಿ ಆಯುರ್ವೇದ ಚಿಕಿತ್ಸಾಲಯ.
20. ಕೃಷಿಯಲ್ಲಿ ರಬ್ಬರ್ ಬೇಸಾಯ ಮಾಡಿ ಆದಾಯ ಪಡೆಯುತ್ತಿರುವುದು
21 . ರಾಜಕಾರಣದಲ್ಲಿ ಗ್ರಾಪಂ ಮತ್ತು ಜಿಲ್ಲಾ ಪಂಚಾಯಿತ ಸದಸ್ಯನಾಗಿದ್ದು,
22. ಸಾಗರ ತಾಲ್ಲೂಕ್ ಜೆಡಿಎಸ್ ಅದ್ಯಕ್ಷ, ಜಾಜ್೯ ಪನಾ೯ಂಡಿಸರ ಸಮತಾ ಪಾಟಿ೯ ಮತ್ತು ಸಂಯುಕ್ತ ಜನತಾದಳದ ರಾಜ್ಯ ಪ್ರದಾನ ಕಾಯ೯ದಶಿ೯
23. ಅರೆಕಾಲಿಕ ಹವ್ಯಾಸಿ ಪತ್ರಕತ೯
24. ರೈತ ಸಂಘ -ದಲಿತ ಸಂಘಷ೯ ಸಮಿತಿ ಮೂಲಕ ಜನಪರ ಹೋರಾಟ.
25. ಮಂತ್ರಿ ಕಾಗೋಡರ ವಿರುದ್ದ ವಿಧಾನಸಭಾ ಚುನಾವಣೆ ಸ್ಪದೆ೯ .
26. ಕಾಗೋಡು ರೈತ ಹೋರಾಟದ 50ನೇ ಸ್ವಣ೯ ಮಹೋತ್ಸವ ಕಾಗೋಡಿನಿಂದ ಕಡಿದಾಳಿಗೆ ಕಾಗೋಡು ಜ್ಯೋತಿ ಕಾಯ೯ಕ್ರಮ ಮತ್ತು ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಆತ್ಮಚರಿತ್ರೆ ಪ್ರಕಟನೆಯಲ್ಲಿ ಹೆಚ್ಚು ಜವಾಬ್ದಾರಿ
27. ಊರಿಗಾಗಿ ಸಿದ್ದಿ ವಿನಾಯಕ ದೇವಾಲಯ ನಿಮಿ೯ಸಿ ಅಪ೯ಣೆ ಮಾಡಿ ಈಗ 16 ನೇ ವರ್ಷದ ಜಾತ್ರೆ ನಡೆಯುತ್ತಿರುವುದು.
29. ಜನಪರ ಹೋರಾಟ ಮಾಡಿದ್ದಕ್ಕೆ ಅನೇಕ ದಿನಗಳ ಜೈಲುವಾಸ, 22 ಕೇಸುಗಳನ್ನ ಬಲಾಡ್ಯರು ದಯಪಾಲಿಸಿ Rowdy ಲಿಸ್ಟ್ ಗೂ ಸೇರಿಸಿದ್ದರು.
30. ಸಾಗರ ತಾಲ್ಲೂಕಿನಾದ್ಯಂತ 346 ಕಿ.ಮಿ. ಪಾದಯಾತ್ರೆ ರೈಲ್ವೆ ಬ್ರಾಡ್ ಗೇಜ್, ತುಮರಿ ಸೇತುವೆ, ಹಂದಿಗೋಡು ನಿಗೂಡ ಕಾಯಿಲೆ ಪರಿಹಾರ, ಜೋಗ್ ಜಲಪಾತ ಪ್ರವಾಸಿ ಕೇಂದ್ರ ಇತ್ಯಾದಿ ಬೇಡಿಕೆಗಾಗಿ 9 ದಿನದ ಪಾದಯಾತ್ರೆ ಇದಾಗಿತ್ತು.
31. ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಎತ್ತಿನಗಾಡಿ ಯಾತ್ರೆ ಮಾಡಿದ್ದು ಮಾಹಿತಿ ಹಕ್ಕು, ಲೋಕಾಯುಕ್ತ ಕಾಯಿದೆ ಜನ ಸಾಮಾನ್ಯರಿಗೆ ಜನ ಜಾಗೃತಿಗಾಗಿ 6 ದಿನದ ಯಾತ್ರೆ ಆಗಿತ್ತು.
32. ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನ ಮೇಳ ನಮ್ಮ ಊರಲ್ಲಿ ಆಯೋಜಿಸಿದ್ದು.
33. ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯ ಆಯೋಜನೆ ಮತ್ತು ಕನ್ನಡ ಚಲನ ಚಿತ್ರದ ಹಾಸ್ಯ ನಟರನ್ನು ಕರೆಸಿ ಸನ್ಮಾನಿಸಿದ್ದು.
34. ಸ್ಥಳಿಯ ಕನ್ನಡ ಸಂಘ ಆಯೋಜಿಸಿದ್ದ ನೇತ್ರತಜ್ಞ ಡಾಕ್ಟರ್ ಮೋದಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಸಂಚಾಲಕನಾಗಿ ಕಾಯ೯ನಿವ೯ಹಿಸಿದ್ದು.
35.ಹೆಗ್ಗೋಡಿನ ನಿನಾಸಂ ಸ್ಥಾಪಕರಾದ ಕೆ.ವಿ.ಸುಬ್ಬಣ್ಣರ ಹೆಸರಲ್ಲಿ ಸ್ಮಾರಕ ಬಯಲು ರಂಗಮಂದಿರ ಆಚಾಪುರ ಸಕಾ೯ರಿ ಶಾಲೆಯಲ್ಲಿ, ಕಾಗೋಡು ಹೊರಾಟದ ರೂವಾರಿ ಹೆಚ್.ಗಣಪತಿಯಪ್ಪ ಬಯಲು ರಂಗಮಂದಿರ ನಮ್ಮ ಊರಾದ ಯಡೇಹಳ್ಳಿ ಸಕಾ೯ರಿ ಶಾಲೆಯಲ್ಲಿ, ಖ್ಯಾತ ಸಾಹಿತಿ ನಾ.ಡಿಸೋಜ ಬಯಲು ರಂಗಮಂದಿರ ಆನಂದಪುರದ ಕನ್ನಡ ಸಂಘದ ಆವರಣದಲ್ಲಿ, ಹಾಸ್ಯ ನಟ ಬಾಲಕೃಷ್ಣ ರಂಗಮಂದಿರ ಆನಂದಪುರದ ಪದವಿ ಪೂವ೯ ಕಾಲೇಜು ಅವರಣದಲ್ಲಿ ನಿಮಿ೯ಸಿದ್ದು.
36. ಆನಂದಪುರದ ರೈತ ಬಂದು ಗ್ರಾಮೋದ್ಯೋಗದಲ್ಲಿ ನಾಲ್ಕು ಜನ ಕಾಮಿ೯ಕರು ಕೊಲೆಯಾದಾಗ ನಡೆದ ಕಾಮಿ೯ಕ ಹೋರಾಟದಲ್ಲಿ ಮುಂಚೂಣಿಯಾಗಿ ಸಾಗರದವರೆಗೆ ಪಾದಯಾತ್ರೆ, ಶಿವಮೊಗ್ಗಕ್ಕೆ ಸೈಕಲ್ ಜಾತಾ ನಡೆಸಿದ್ದು,ಮಾಲಿಕರು ಪೋಲಿಸರಿಂದ ನಡೆಸಿದ ಲಾಠಿ ಛಾಜ್೯.
37. ಶಿವಮೊಗ್ಗ ತಾಳಗುಪ್ಪ ರೈಲು ಮಾಗ೯ ರದ್ದು ಮಾಡದಂತೆ ,ಬ್ರಾಡ್ ಗೇಜ್ ಪರಿವರ್ತನೆಗಾಗಿ, ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ್ ರೈಲು ನಿಲ್ದಾಣ ಎಂದು ಪುನರ್ ನಾಮಕರಣ, ತುಮರಿ ಸೇತುವೆ, ಹಂದಿಗೋಡು ನಿಗೂಡ ಕಾಯಿಲೆ ಸಂಶೋದನೆ ಇತ್ಯಾದಿ ಬೇಡಿಕೆ ಈಡೇರಿಕೆಗಾಗಿ ದೆಹಲಿ ಚಲೋ ಸಂಚಾಲಕನಾಗಿ.
38. ಶಿವಮೊಗ್ಗ ಜಿಲ್ಲಾ ಗ್ರಾಮ ಪಂಚಾಯತ್ ಹಂಗಾಮಿ ನೌಕರರ ಸಂಘದ ಗೌರವಾಧ್ಯಕ್ಷನಾಗಿ
(ಮರೆತು ಹೋಗಿರುವ ಒಂದೆರೆಡು ಸಾಹಸ ನೆನಪಾದಾಗ ಮತ್ತೆ ಸೇರಿಸುತ್ತೇನೆ)
#ಮುಂದಿನ_ಗುರಿ
1.ಸುಸಜ್ಜಿತ ಆಯುವೇ೯ದ ಆಸ್ಪತ್ರೆ
2, ಗೃಹ ಕೈಗಾರಿಕೆಯಲ್ಲಿ ಆಹಾರ ಉದ್ಯಮದಲ್ಲಿ ಉತ್ಪಾದನೆ ಮತ್ತು ಮಾರಾಟ.
3. ಪ್ರೋಟಿನ್ ಸಪ್ಲಿಮೆಂಟರಿಗಳ ಉತ್ಪಾದನೆ ಮತ್ತು ಮಾರಾಟ.
4. ಇನ್ನೊಂದು ಸುಸಜ್ಜಿತ ಹೈಟೆಕ್ ರೆಸ್ಟೋರೆಂಟ್.
5. ಸ್ವಂತಕ್ಕೊಂಂದು ಈಜು ಕೊಳ ನಿಮಿ೯ಸಬೇಕು.
6. ಆನಂದಪುರಂ ಇತಿಹಾಸ ಪುಸ್ತಕ ಪ್ರಕಟಿಸಬೇಕು.
ಇದೆಲ್ಲ ನಮ್ಮ ಹಳ್ಳಿ ಸಾಗರ ತಾಲ್ಲೂಕಿನ ಯಡೇಹಳ್ಳಿಯಲ್ಲಿ ನಮ್ಮ ತಂದೆ ಮಾಡಿಟ್ಟಿರುವ ಸ್ವಂತ ಜಾಗ ಮತ್ತು ಕೃಷಿ ಜಮೀನಿನಲ್ಲಿ ನಡೆಸಿರುವ ಒಂದು ರೀತಿ ಜೀವನ ಪಯ೯೦ತ ಸಾಧನೆ ಎನ್ನಬಹುದು.
ಈ 58ನೇ ವರ್ಷವೂ ತಲೆಗೂದಲಿಗೆ ಹೇರ್ ಡೈ ಬೇಕೆನ್ನಿಸಿಲ್ಲ,
ಸತತ 24 ತಿಂಗಳ ಪ್ರಯತ್ನದಿಂದ ತೂಕ ಇಳಿಸಿದ್ದು, ಡಯಾಬಿಟೀಸ್ ಬಿಪಿ ನಾಮ೯ಲ್ ಒಳಗೆ ಇರಿಸಿದ್ದು, ರಾತ್ರಿ ಊಟ ಸಂಪೂಣ೯ ಬಿಟ್ಟು ಒಂದು ಗ್ಲಾಸ್ ರಾಗಿ ಗಂಜಿಗೆ ಹೊಂದಿಕೊಂಡಿದ್ದು, 24 ತಿಂಗಳಲ್ಲಿ ನನ್ನ ಮನೆ ಗೇಟಿನಿಂದ 6 ಬಾರಿ ಮಾತ್ರ (ಕೋವಿಡ್- 19 ಗಾಗಿ) ಹೊರ ಹೋಗಿ ಸುಮಾರು 500 ಕಿಮೀ ಮಾತ್ರ ಪ್ರಯಾಣ ಮಾಡಿದ್ದು ನನಗೇ ಆಶ್ಚಯ೯ ಉಂಟು ಮಾಡಿದೆ.
Comments
Post a Comment