#ತೇಜಸ್ವಿ ಒಂದು ನೆನಪು#
ಮೊದಲೆಲ್ಲ ಕವಿಶೈಲಕ್ಕೆ ಹೋದರೆ ಕುವೆಂಪುರವರ ಮನೆ, ಕವಿ ಶೈಲದ ಬಂಡೆ ಮತ್ತು ಕುವೆಂಪುರವರ ಸಮಾದಿ ಸಂದಶಿ೯ಸುತ್ತಿದ್ದೆವು ಈಗ ಕವಿಶೈಲದ ಪ್ರಾರಂಭದಲ್ಲಿಯೆ ಎಡ ಭಾಗದಲ್ಲಿ ತೇಜಸ್ವಿಯವರ ಸಮಾದಿಯನ್ನು ಸಹ ನೋಡಬಹುದು.
ಮೊನ್ನೆ ಕವಿಶೈಲಕ್ಕೆ ಹೋದಾಗ ತೇಜಸ್ವಿ ಸಮಾದಿಗೆ ಬೇಟಿ ನೀಡಿದ್ದೆ, ತೇಜಸ್ವಿಯವರ ಎಲ್ಲಾ ಲೇಖನಗಳ ಮತ್ತು ಅವರ ವಿಚಾರ, ವ್ಯಕ್ತಿತ್ವದ ಅಭಿಮಾನಿಯಾದ ನಾನು ಅವರನ್ನ ಮೊದಲ ಮತ್ತು ಕೊನೆಯ ಬಾರಿಯ ಬೇಟಿ ಮಾಡಿದ್ದು ಕುವೆಂಪುರವರ ಮನೆ ರಾಷ್ಟ್ರಕ್ಕೆ ಅಪಿ೯ಸುವ ದಿನ 2000ನೆ ಇಸವಿಯಲ್ಲಿ.
ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ತೀಥ೯ಹಳ್ಳಿ ತಲುಪಿ ಅಲ್ಲಿಂದ ಎಡಕ್ಕೆ ಹೊರಳಿ ಕೊಪ್ಪ ಮಾಗ೯ದಲ್ಲಿ ತುಂಗಾ ನದಿಯ ಪ್ರಖ್ಯಾತ ಕಮಾನು ಸೇತುವೆ ದಾಟಿ ಕೆಲವು ಕಿ.ಮಿ. ಪ್ರಯಾಣದ ನಂತರ ಎಡ ಬಾಗಕ್ಕೆ ತೆರಳಿದರೆ ಅಲ್ಲಿದೆ ಕವಿಶೈಲು.
Comments
Post a Comment