# ಪರಿಸರ ಉಳಿಸುವುದರಲ್ಲೂ ಎಡ ಮತ್ತು ಬಲ ಸರಿ ಅಲ್ಲ#
ಕಳೆದ ವಷ೯ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ಜೋಗ ಅಭಿವೃದ್ಧಿ ಯೋಜನೆಯಲ್ಲಿ ಜೋಗ ಜಲಪಾತ ಸವ೯ರುತುವಿನ ಜಲಪಾತಕ್ಕಾಗಿ ನೀರು ಮರು ಪೂರಣ ಯೋಜನೆಗೆ ಸಾಗರದ ನಾ.ಡಿಸೋಜರಾದಿಯಾಗಿ ಅನೇಕರು ವಿರೋದ ಮಾಡಿದರು ಆದರೆ ಅನಂತ ಹೆಗಡೆ ಅಶೀಸರ ಈ ಬಗ್ಗೆ ವಿರೋದಿಸಲಿಲ್ಲ.
ಈಗ ಶರಾವತಿ ಕಣಿವೆಯಲ್ಲಿ ಭೂಗಭ೯ ವಿದ್ಯುತ್ ಯೋಜನೆ ಒಂದು (ವರಾಹಿ ಯೋಜನೆಯಂತೆ) ಪ್ರಾರಂಭವಾಗಲಿದ್ದು ಇದಕ್ಕೆ ಅನಂತ ಹೆಗಡೆ ಅಶೀಸರರ ನೇತೃತ್ವದ ಸಂಘಟನೆ ವಿರೋದಿಸುತ್ತಿದೆ ಆದರೆ ನಾ.ಡಿಸೋಜರ ಒಡನಾಡಿಗಳು ವಿರೋದಿಸುತ್ತಿಲ್ಲ.
ಇದೇ ರೀತಿ ಅರಣ್ಯ ಭೂಮಿ ಸಕ್ರಮದಲ್ಲಿ ಕೂಡ ಎರೆಡು ಗುಂಪಾಗಿದ್ದು ಒಂದು ಪರ ಇನ್ನೊಂದು ವಿರೋದ.
ಒಂದೊಂದು ರಾಜಕೀಯ ಪಕ್ಷಗಳ ಪರಿಸರ ಹೋರಾಟದ ದಿಕ್ಕು ಒಂದೊಂದು ಕಡೆ ಮುಖ ಮಾಡಿದೆ ಇದರಿ೦ದ ರಾಜಕೀಯ ಪಕ್ಷಕ್ಕೆ ಲಾಭವಾಗಬಹುದೇ ಹೊರತು ಪರಿಸರಕ್ಕಲ್ಲ.
ಪಶ್ಚಿಮ ಘಟ್ಟದ ಪರಿಸರ ಉಳಿವಿಗೆ ಎಲ್ಲರ ಕಾಳಜಿ ಸ್ವಾಗತೀಯ ಆದರೆ ಪಕ್ಷ, ದಮ೯ಗಳ ಆಧಾರದಲ್ಲಿ ಪರಿಸರ ಹೋರಾಟ ವಿಭಜನೆಯಾಗಿ ಸಾಗುತ್ತಿರುವುದು ಬೇಸರದ ಸಂಗತಿ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
ಸ್ಪಷ್ಟನೆ:
ReplyDeleteಇದು ತಪ್ಪು ಅರುಣ್ ಪ್ರಸಾದ್ ಜೀ. ನಾ.ಡಿಯವರ ಗಮನಕ್ಕೆ ತರಲಾಗಿದ್ದು, ಅವರೂ ಕೂಡಾ ಇದರ ವಿರೋಧವಿದ್ದಾರೆ. ಪಶ್ಚಿಮಘಟ್ಟದಲ್ಲಿ ಯಾವುದೇ ಯೋಜನೆಗಳೇ ಬೇಡ ಎಂದು ಹೇಳಿದ್ದಾರೆ. ಈ ಯೋಜನೆಯ ವಿರುದ್ಧವಾಗಿ ಮೊದಲು ಧ್ವನಿ ಎತ್ತಿದ್ದೇ ನಾನು ಮತ್ತು ಸಂಗಡಿಗರು. ಇದರ ವಿರುದ್ಧ ಮಾತನಾಡಿದ ವರದಿ "ದ ಹಿಂದೂ" ಪತ್ರಿಕೆಯ ಎಲ್ಲಾ ಆವೃತ್ತಿಯಲ್ಲೂ ಬಂದಿತ್ತು. ಇದಕ್ಕೆ ಕೆ.ಪಿ.ಸಿ. ಎಂ.ಡಿ.ಯವರು ಜನರ ವಿರೋಧ ಇದ್ದಲ್ಲಿ ಯೋಜನೆಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದರು. ಈ ಹೆಗಡೆಯವರು ಮತ್ತೆ ಸುದ್ಧಿಯೆತ್ತಿದ್ದಾರೆ ಅಷ್ಟೆ.