ದೇವರನ್ನ ಮಾರಾಟಕ್ಕೆ ಇಟ್ಟಿರುವ ದೇವಾಲಯದ ಮತ್ತು ಮಠಗಳ ಮಾಲಿಕರಾದ ಅಚ೯ ಕರು, ಸ್ವಾಮೀಜಿಗಳು ಹಣ, ಖ್ಯಾತಿ ಮತ್ತು ಅಧಿಕಾರ ಹೊಂದಿರುವವರನ್ನ ಹೇಗಾದರೂ ಮಾಡಿ ತಮ್ಮಲ್ಲಿಗೆ ಕರೆಸಿ ಅದನ್ನ ಪತ್ರಿಕೆ ಟಿವಿಗಳಲ್ಲಿ ಸುದ್ದಿ ಮಾಡುವ ವರದಿಗಾರರನ್ನ ತಾಜಾ ಮಾಡಿ ಸುದ್ದಿ ಮಾಡಿಸಿದರೆ ನಮ್ಮoತ ಸಾಮಾನ್ಯರು ಜಾಹಿರಾತು ನೋಡಿ ಸೋಪು, ಶಾಂಪು ಖರೀದಿಸಲು ಮುಗಿ ಬೀಳುವಂತೆ ಸದರಿ ದೇವಸ್ಥಾನಕ್ಕೆ ಹೋಗುತ್ತೇವೆ, ಅಲ್ಲಿನ ಸೇವಾ ಬೋಡ್೯ನOತೆ ಮೆನು ಆಯ್ಕೆ ಮಾಡಿ ಹಣ ಪಾವತಿ ಮಾಡಿ, ಹುಂಡಿ ತುಂಬಿಸಿ, ಅಚ೯ಕರಿಗೆ ಟಿಪ್ಸ್ ನೀಡಿ ಪಾಪ ಕಳೆದು ಕೊಂಡ ಭ್ರಮೆಯಲ್ಲಿ ಶೂದ್ರರಿಗೆ ಮೀಸಲಿಟ್ಟ ಜಾಗದಲ್ಲಿ ಉಂಡು ಬರುತ್ತಾರೆ.
ಅಂಗಡಿ ಮಾಲಿಕರು ಲಾಭದಿಂದ ಸುಖ ಪಟ್ಟಿ, ಸಕಾ೯ರದಿಂದ ಹೆಚ್ಚಿನ ಸವಲತ್ತು, ಪ್ರಶಸ್ತಿ ಪಡೆದು, ಹೆಚ್ಚು ಲಾಭ ನೀಡುವ ಪಕ್ಷಕ್ಕೆ ಓಟು ಕೊಡಿಸಲು ವ್ಯವಹಾರ ಕುದುರಿಸುತ್ತಾರೆ.
ದೇವರು ಸವಾ೯೦ತರಯಾಮಿ ಅನ್ನುವುದು ಮರೆಸಿ ಬಿಡುತ್ತಾರೆ ಹಾಗೆ ಭಕ್ತರೂ ಮರೆಯುತ್ತಾರೆ ಇದು ಇವತ್ತಿನ ದೇವಸ್ಥಾನ ಮತ್ತು ಮಠಗಳು ಕಾಪೊ೯ರೇಟ್ ಮಟ್ಟಕ್ಕೆ ಬೆಳೆಯುತ್ತಿರುವ ಕ್ರಮ.
ISO,ISI ಮುಂತಾದ ಸಟಿ೯ಫಿಕೇಟು ಈಗಾಗಲೆ ಗೋಕಣ೯ ದೇವಸ್ಥಾನಕ್ಕೆ ಬಂದಿದೆ ಅಂತ ಅಲ್ಲಿನ ಸ್ವಾಮಿಗಳು ಪತ್ರಿಕಾ ಹೇಳಿಕೆ ನೀಡಿರುವುದು ಇದಕ್ಕೆ ಸಾಕ್ಷಿ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment