# ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಅನುಯಾಯಿ 3 ಬಾರಿ ಹೆಗ್ಗೋಡು ವ್ಯ.ಸೇ.ಸ.ಸಂಘದ ಅಧ್ಯಕ್ಷರಾಗಿದ್ದರು#
ಹೆಗ್ಗೋಡಿನ ಮಂಜುನಾಥ ಭಂಡಾರಿಯವರು ಸಾಗರದ ಪ್ರಥಮ ಶಾಸಕರಾದ ಶಾಂತವೇರಿ ಗೋಪಾಲಗೌಡರ ಕಟ್ಟಾ ಅಭಿಮಾನಿಗಳು, ಶಾಂತವೇರಿ ಗೋಪಾಲಗೌಡರು ನಮ್ಮ ರಾಜ್ಯದ ಸಮಾಜವಾದಿ ದುರೀಣರು ರಾಮಮನೋಹರ ಲೋಹಿಯಾರ ಅನುಯಾಯಿಗಳು ಇವರ ಜೀವನ ಚರಿತ್ರೆ "ಜೀವಂತ ಜ್ವಾಲೆ" ಬರೆದವರು ಸಮಾಜವಾದಿ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು ಒಮ್ಮೆ ವೆಂಕಪ್ಪ ಗೌಡರು ಹೆಗ್ಗೋಡಿನ ಮಂಜುನಾಥರ ಬಗ್ಗೆ ಹೇಳಿದ್ದರು ಗೋಪಾಲಗೌಡರು ಚುನಾವಣಾ ಪ್ರಚಾರಕ್ಕೆ ಹೆಗ್ಗೋಡಿಗೆ ಹೋದಾಗೆಲ್ಲ ಅವರ ಸಭೆಗೆ ಕುಚಿ೯ ಹಾಕುತ್ತಿದ್ದ ಬಗ್ಗೆ ಗೋಪಾಲಗೌಡರು ಹೇಳುತ್ತಿದ್ದರು ಅವರು ಇದಾರಾ? ಅಂತ ಕೇಳಿದರು.
ವೆಂಕಪ್ಪ ಗೌಡರೆ ಅವರು ಇದ್ದಾರೆ ನಾನು ಸಾಗರ ವಿದಾನಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪದೆ೯ ಮಾಡಿದಾಗ ಚುನಾವಣಾ ಪ್ರಚಾರಕ್ಕೆ ಹೆಗ್ಗೋಡಿಗೆ ಹೋದಾಗ ಅವರೇ ಸಭೆ ನಡೆಸಲು ಅನುಕೂಲ ಮಾಡಿದ್ದರು ಅಂದಾಗ ವೆಂಕಪ್ಪ ಗೌಡರು ಅವರನ್ನ ಬೇಟಿ ಮಾಡಿಸು ಅಂದಾಗ ಅವರನ್ನ ಕರೆದು ಕೊಂಡು ಹೆಗ್ಗೋಡಿನ ಅವರ ಸೆಲೂನ್ಗೆ ಕರೆದುಕೊಂಡು ಹೋಗಿ ಬೇಟೆ ಮಾಡಿದಾಗ ಮಂಜುನಾಥರು ಗೋಪಾಲಗೌಡರ ನೆನಪು ಮಾಡಿಕೊಂಡು ಅವರಿಗಿಂತ ಅವರ ತಂದೆ ಗೋಪಾಲಗೌಡರ ದೊಡ್ಡ ಅಭಿಮಾನಿ ಅಂದ ನೆನಪು, ಮಂಜುನಾಥರ ಮಗ ರವಿ ಪ್ರಕಾಶ ಕೂಡ ಜಾತ್ಯತೀತ ಸಮಾಜವಾದ ತತ್ವ ಜೀವನದಲ್ಲಿ ಅಳವಡಿಸಿಕೊಂಡಿರುವುದು ಅಭಿನಂದನೀಯ.
ಅವರ ಸೆಲೂನಿನ ಎದುರೇ ಇರುವ ಕೃಷಿ ಸಹಕಾರ ಸಂಘಕ್ಕೆ ಶತಮಾನೋತ್ಸವ ಸದರಿ ಸಂಘದಲ್ಲಿ 3 ಬಾರಿ ಅಧ್ಯಕ್ಷರಾಗಿದ್ದ ಮಂಜುನಾಥರು ಈಗ ಜೀವಂತ ಇಲ್ಲ ಆದರೆ ಅವರ ಸಾದನೆ ನೆನಪು ಕೂಡ ಶತಮಾನೋತ್ಸವ ಸಮಿತಿ ಬಡವ, ಸಣ್ಣ ಜಾತಿಯವರು ಎಂಬ ಕಾರಣದಿಂದ ಮಾಡದೇ ಇರುವುದು ವಿಷಾದನೀಯ.
ಮಂಜುನಾಥರವರು
Comments
Post a Comment