#ದಿಲೀಪ್_ನಾಡಿಗ್
#ಶಿವಮೊಗ್ಗದ_ಇತಿಹಾಸ_ಸಂಶೋದಕರು
#ಕೆಂಜಿಗಾಪುರದ_ವೀರಭದ್ರ_ದೇವರ_ರಥೋತ್ಸವದ_ಬಗ್ಗೆ_ತಿಳಿಸಿದ್ದಾರೆ.
ನಮ್ಮೂರು ಆನಂದಪುರಂನ ಯಡೇಹಳ್ಳಿ ಸಮೀಪದ ಕೆಂಜಿಗಾಪುರದ ವೀರಭದ್ರ ದೇವರ ರಥೋತ್ಸವ ಹೋಳಿ ಹುಣ್ಣಿಮೆ ದಿನ ಭಕ್ತಿಪೂರ್ವಕವಾಗಿ ನೆರವೇರಿತು
ಮಲ್ಲ ಸಮಾಜದವರು ಹಾಗೂ ಕೆಳದಿಯ ಸಂಬಂಧಿಕರಾದ ಆನಂದಪುರ ಮರಿಯಪ್ಪ ಶೆಟ್ಟರು. ಚನ್ನಶೆಟ್ಟಿಕೊಪ್ಪದ ದುಗ್ಗಾನಿ ಶೆಟ್ಟರು.ಹಾಗೂ ಇತರೆ ಮನೆತನದವರ ಆರಾಧ್ಯ ಮನೆದೇವರು ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ಸ್ವಾಮಿ
#kenjigapura #veerabadra #temple #keladi
ಇತಿಹಾಸ ಸಂಶೋದಕ ದಿಲೀಪ್ ನಾಡಿಗ್ ಲೇಖನ ಓದಿ
ಮಲ್ಲ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಸಂಗಮ ವಂಶಸ್ಥರು
"#ಕೆಂಜಿಗಾಪುರ_ಶ್ರೀವೀರಭದ್ರೇಶ್ವರ_ರಥೋತ್ಸವ "
ಆನಂದಪುರ ಎಡೆಹಳ್ಳಿ ಸಮೀಪವಿರುವ ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಕಣ್ಗಳ ವೀರಪ್ಪ ಗುರುಗಳ ಗದ್ದುಗೆ
ಪ್ರತಿ ವರ್ಷವೂ ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹೋಳಿ ಹುಣ್ಣಿಮೆಯ ರಥೋತ್ಸವವು ಐತಿಹಾಸಿಕ ಹಾಗೂ ಬಹಳ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ
ಅದೇ ರೀತಿ ಈ ವರ್ಷವೂ ವಿಜೃಂಭಣೆಯಿಂದ ನೆರವೇರಿದೆ
ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇವಸ್ಥಾನವು ವಿಜಯನಗರ ಸಾಮ್ರಾಜ್ಯದ ಸ್ಥಾಪಿತ ಸಂಗಮ ವಂಶದ ಪ್ರತಾಪ ದೇವರಾಯ ಕ್ರಿ.ಶ.1419 ಈ ದೇವಸ್ಥಾನವನ್ನು ಕಟ್ಟಿಸಿದರು ಹಾಗೂ ಇದರ ಧಾರ್ಮಿಕ ಕಾರ್ಯಗಳಿಗೆ ಬಹಳಷ್ಟು ಭೂದಾನವನ್ನು ನೀಡಿದರು
ವಿಜಯನಗರ ಸಾಮ್ರಾಜ್ಯವು ಕ್ರಿಶ 1335 ಸಂಗಮ ವಂಶಸ್ಥರಾದ ಒಂದನೇ ಹರಿಹರ ಹಾಗೂ ಒಂದನೇ ಬುಕ್ಕರಾಯರಿಂದ ಸ್ಥಾಪಿ ತಗೊಂಡು ಒಂದನೇ ದೆವರಾಯ ಹಾಗೂ ರಾಣಿ ಹೇಮಾಂಬಿಕೆಯ ಪುತ್ರ ವೀರ ವಿಜಯ ನಾರಾಯಣಂಬಿಕೆಯ ಮಗನಾಗಿ ಪ್ರತಾಪ ದೇವರಾಯರು ಕ್ರಿ.ಶ.1444ರತನಕ ರಾಜ್ಯ ಭಾರವನ್ನು ಮಾಡಿದರು ಇವರ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ವಿಸ್ತಾರಗೊಳಿಸುತ್ತಾರೆ ಇವರಿಗೆ ನಾಲ್ಕು ಸಮುದ್ರವನ್ನು ಆಳಿದ ದೊರೆ ಎಂದು ಸಹ ಕರೆಯುತ್ತಾರೆ
ಇವರ ಕಾಲಾವಧಿಯಲ್ಲಿ ಕಂಗಳ ವೀರಪ್ಪ ಮಹಾ ಗುರು ಜಂಗಮ ಮಠ ಈ ಕೆಂಜಗಾಪುರ ದೇವಸ್ಥಾನದ ಸಮೀಪವೇ ಸ್ಥಾಪಿತಗೊಂಡಿದ್ದು ಎಂದು ಇತಿಹಾಸವನ್ನು ಅವಲೋಕಿಸಿದರೆ ಹೇಳಬಹುದು ಈಗಲೂ ಗದ್ದಿಗೆ ಸಣ್ಣ ಗುಡಿಯಾಗಿ ಮರು ನಿರ್ಮಾಣಗೊಂಡಿದೆ
ಸಂಗಮ ವಂಶಸ್ಥರು ಮೂಲತಃ ಲಿಂಗಾಯತರು ಇವರ ಕಾಲದಲ್ಲಿ ಹಲವಾರು ಲಿಂಗಾಯಿತ ಮಠಮಾನ್ಯಗಳನ್ನು ಸ್ಥಾಪಿಸಿದರು ಪ್ರತಾಪ ದೇವರಾಯರ ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ವಿರೂಪಾಕ್ಷ ಇವರ ಕಾಲದಲ್ಲಿ ಮಲೆನಾಡಿನ ಉದ್ದಗಲಕ್ಕೂ ಇವರು ಕಟ್ಟಿಸಿದ ಶಿಲಾಮಯ ದೇವಸ್ಥಾನಗಳು ಕಾಣಸಿಗುತ್ತವೆ
ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ಕೃಪೆಗೆ ಕೆಳದಿಯ ಮಲ್ಲರಸರೂ ಪಾತ್ರರಾಗಿದ್ದರು ಮಲ್ಲರಸ ಕೆಳದಿ ವೆಂಕಟಪ್ಪ ನಾಯಕನು ತನ್ನ ಆಳ್ವಿಕೆಯನ್ನು ಕೆಲವು ವರ್ಷಗಳು ಅನಂತಪುರಕ್ಕೆ ಸ್ಥಳಾಂತರಸಿದಾಗ ಈ ದಿನದಲ್ಲಿ ಪ್ರತಿದಿನವೂ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು
ಮಲ್ಲ ಸಮಾಜದವರು ಹಾಗೂ ಕೆಳದಿಯ ಸಂಬಂಧಿಕರಾದ #ಆನಂದಪುರ #ಮರಿಯಪ್ಪ_ಶೆಟ್ಟರು. #ಚನ್ನಶೆಟ್ಟಿಕೊಪ್ಪದ #ದುಗ್ಗಾನಿ_ಶೆಟ್ಟರು.ಹಾಗೂ ಇತರೆ ಮನೆತನದವರ ಆರಾಧ್ಯ ಮನೆದೇವರು ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ಸ್ವಾಮಿ
Comments
Post a Comment