#ಬಾಹ್ಯಾಕಾಶ_ನಿಲ್ದಾಣದಿಂದ_ಭೂಮಿಗೆ_ತಲುಪಲಿರುವ
#ಸುನೀತಾವಿಲಿಯಂ_ಮತ್ತು_ಗ್ಯಾರಿವಿಲ್ಮೋರ್
#ಮಾರ್ಚ್_16ರಂದು_ಭೂಮಿಗೆ
#spaceexploration #kenadyspacecentre #sunithawilliams #spacestation #Nyasa
ಸುನೀತಾ ಲಿನ್ #ಸುನಿ_ವಿಲಿಯಮ್ಸ್ ಒಬ್ಬ ಅಮೇರಿಕದ ಗಗನ ಯಾತ್ರಿ ಮತ್ತು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪ್ರಸ್ತುತ ಕಮಾಂಡರ್.
2024 ಜೂನ್ 5 ರಂದು 10 ದಿನಗಳ ಕೆಲಸಕ್ಕಾಗಿ ಬಾಹ್ಯಾಕಾಶ ನಿಲ್ದಾಣ ತಲುಪುತ್ತಾರೆ.
ಇವರು ಪ್ರಯಾಣಿಸಿದ್ದ ಬೋಯಿಂಗ್ ಸ್ಟಾರ್ ಲೈನರ್ ನೌಕೆಯ ರಿಟರ್ನ್ ಕ್ಯಾಪ್ಸೂಲ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಿಂದ ಕಳೆದ 9 ತಿಂಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದಿದ್ದಾರೆ.
ಕಳೆದ ಸೆಪ್ಟೆಂಬರ್ 2024ರಲ್ಲಿ ರಿಟರ್ನ್ ಕ್ಯಾಪ್ಸೂಲ್ ತಾಂತ್ರಿಕ ದೋಷವಿದ್ದರಿಂದ ಮಾನವ ರಹಿತ ಖಾಲಿ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಿತ್ತು.
ಈ ವರ್ಷ ಫೆಬ್ರುವರಿ 2025ರಲ್ಲಿ ಸ್ಪೇಸ್ ಎಕ್ಸ್ ಕ್ರೂ-9 ಮಿಷನ್ ಲಾಂಚ್ ಮಾಡಲಾಗಿತ್ತು ಅದರಲ್ಲಿ ಗಗನಯಾತ್ರಿ ನಿಕ್ ಹೇಗ್ ಮತ್ತು ರೋಸ್ ಕಾಸ್ಮೇನ್ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ ಅವರ ಜೊತೆ ಸುನೀತಾ ವಿಲಿಯಮ್ಸ್ ಮತ್ತು ಗ್ಯಾರಿ ಎಲ್ಮೋರ್ ಭೂಮಿಗೆ ವಾಪಾಸಾಗಲಿದ್ದಾರೆ.
ಅಮೇರಿಕಾದ ಗಗನಯಾತ್ರಿ 60 ವರ್ಷದ ಸುನೀತಾ ವಿಲಿಯಂ ತಂದೆ ಭಾರತೀಯ ಮೂಲದ ನರರೋಗ ತಜ್ಞ ದೀಪಕ್ ಪಾಂಡ್ಯ ಗುಜರಾತಿನ ಮೆಹ್ಸಾನ ಜಿಲ್ಲೆಯ ಜಲಾಸನ್ ಗ್ರಾಮದವರು, ತಾಯಿ ಉಸುನಲಿನ್ ಬೋನಿ ಪಾಂಡ್ಯ ಸ್ಲೋವೇನಿಯನ್ ಅಮೇರಿಕನ್.
2007ರಲ್ಲಿ ಸುನೀತಾ ವಿಲಿಯಮ್ಸ್ ಭಾರತಕ್ಕೆ ಆಗಮಿಸಿ ಸಬರಮತಿಯ ಗಾಂಧೀಜಿ ಆಶ್ರಮ ಮತ್ತು ಅವರ ಪೂರ್ವಿಕರ ಗುಜರಾತಿನ ಮೆಹ್ಸಾನ ಜಿಲ್ಲೆಯ ಜಲಾಸನ್ ಗ್ರಾಮಕ್ಕೆ ಬೇಟಿ ನೀಡಿದ್ದರು.
ತನ್ನ ತಂದೆಯ ಹಿಂದೂ ಧರ್ಮದ ಬಗ್ಗೆ ಮತ್ತು ಭಾರತದ ಬಗ್ಗೆ ಅತಿ ಹೆಚ್ಚು ಅಭಿಮಾನ ಸುನೀತಾ ವಿಲಿಯಮ್ಸ್ ಹೊಂದಿದ್ದಾರೆ ಅದಕ್ಕೆ ಉದಾಹರಣೆ ಎಂದರೆ 2024ರ ಜೂನ್ ಬಾಹ್ಯಾಕಾಶ ಯಾತ್ರೆಯಲ್ಲಿ ಇವರು ಸಮೋಸ ಮತ್ತು ಕಾರ್ನಿಯೋಲನ್ ಸಾಸೇಜ್ ಒಯ್ದಿದ್ದರು ( ತಂದೆ ಮತ್ತು ತಾಯಿ ಸ್ಮರಣೆಯಾಗಿ).
2006 ರ ಬಾಹ್ಯಾಕಾಶ ಯಾತ್ರೆಯಲ್ಲಿ ಭಗವದ್ಗೀತಾ ಪ್ರತಿಯನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆಗೆದು ಕೊಂಡು ಹೋಗಿದ್ದರು.
ಜುಲೈ 2012ರಲ್ಲಿ ಓಂ ಚಿಹ್ನೆ ಮತ್ತು ಉಪನಿಷತ್ ಪ್ರತಿ ಒಯ್ದಿದ್ದರು.
2025 ಜನವರಿಗೆ ಸುನೀತಾ ವಿಲಿಯಮ್ಸ್ ಒಟ್ಟು 62 ಗಂಟೆ 6 ನಿಮಿಷ (ಒಟ್ಟು ಒಂಬತ್ತು ನಡಿಗೆ) ಬಾಹ್ಯಾಕಾಶ ನಡಿಗೆ ಮಾಡಿದ ವಿಶ್ವದ ಪ್ರಥಮ ಮಹಿಳೆ ಎಂದು ದಾಖಲೆ ಮಾಡಿದ್ದಾರೆ.
ಕೇವಲ 10 ದಿನಗಳ ಕೆಲಸಕ್ಕಾಗಿ ಕೆನಡಿ ಬಾಹ್ಯಾಕಾಶ ನಿಲ್ದಾಣ ತಲುಪಿ ಅಲ್ಲಿಂದ ವಾಪಾಸಾಗಬೇಕಾಗಿದ್ದ ಬೋಯಿಂಗ್ ಸ್ಟಾರ್ ಲೈನರ್ ನೌಕೆಯ ರಿಟರ್ನ ಕ್ಯಾಪ್ಸೂಲ್ ನಲ್ಲಿನ ತಾಂತ್ರಿಕ ದೋಷದಿಂದ ಅನಿವಾಯ೯ವಾಗಿ ದೀರ್ಘ 9 ತಿಂಗಳು ಬಾಹ್ಯಾಕಾಶ ಕೇಂದ್ರದಲ್ಲಿ ಉಳಿದಿರುವ ಸುನಿತಾ ವಿಲಿಯಮ್ಸ್ ಮತ್ತು ಗ್ಯಾರಿ ವಿಲ್ಮೋರ್ ಇದೇ 16 ಮಾರ್ಚ್ ಭಾನುವಾರ ಮರಳಲಿದ್ದಾರೆ.
ಈ ಬಗ್ಗೆ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನ್ಯಾಸಾ ದೃಡೀಕರಿಸಿದೆ ಸಣ್ಣ ಬದಲಾವಣೆಗಳಾದರೆ ದಿನಾಂಕ 17 ಅಥವ 18 ಮಾರ್ಚ್ ಗೆ ಭೂಮಿಗೆ ತಲುಪಲಿದ್ದಾರೆ.
ನಾವೆಲ್ಲ ಭಾರತೀಯರು ಇವರು ಭೂಮಿಗೆ ಸುರಕ್ಷಿತವಾಗಿ ಮರಳಲಿ ಎಂದು ಹಾರೈಸೋಣ.
Comments
Post a Comment