#ನಮ್ಮೂರಿನ_ಹೆಮ್ಮೆ_ರುದ್ರಪ್ಪ_ಅಂದಾಸುರ
#ಕಷ್ಟದಿಂದ_ವಿದ್ಯಾಭ್ಯಾಸ_ಮಾಡಿ_ಉನ್ನತ_ಹುದ್ದೆ_ಪಡೆದವರು
#ಹುಟ್ಟಿದ_ಊರಲ್ಲಿ_ಮನೆ_ಗೃಹಪ್ರವೇಶ
#ಆಹ್ವಾನ_ನೀಡಲು_ಬಂದಿದ್ದರು
ನಮ್ಮ ತಂದೆ ರುದ್ರಪ್ಪರ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ್ದರು.
ರುದ್ರಪ್ಪನವರು ಮತ್ತು ಕಾಳೇಶ್ವರದ ಕೆ.ಆರ್. ದರ್ಮಪ್ಪನವರು ಆನಂದಪುರಂನಲ್ಲಿ ವಿದ್ಯಾಬ್ಯಾಸದಲ್ಲಿ ಶಾಲಾ ಸಹಪಾಟಿಗಳು.
ರುದ್ರಪ್ಪನವರು ನಮ್ಮ ಆನಂದಪುರಂ ಹೋಬಳಿಯ ಈಗಿನ ಆಚಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಅಂದಾಪುರ ಗ್ರಾಮದ ಶ್ರೀಮತಿ ರಾಮಕ್ಕ ಮತ್ತು ಸಿದ್ದಪ್ಪ ಕಟಗಾರ ದಂಪತಿ ಪುತ್ರ.
ಇವರ ಪತ್ನಿ ಶ್ರೀಮತಿ ಜಯಮ್ಮ ಸಮೀಪದ ಕೆರೆಹಿತ್ತಲು ಗ್ರಾಮದ ಶ್ರೀಮತಿ ಕೊಲ್ಲಮ್ಮ ಮತ್ತು ಗುಮ್ಮಿ ನಾಗಪ್ಪರ ಪುತ್ರಿ (ಗುಮ್ಮಿ ನಾಗಣ್ಣ ಅವರ ಊರಿನ ಶಾಲೆಗೆ ಭೂದಾನ ಮಾಡಿದವರು).
ನಿನ್ನೆ ದಂಪತಿಗಳು ಅಂದಾಸುರದಲ್ಲಿ ನಿರ್ಮಿಸಿದ ನೂತನ ಗೃಹ ಪ್ರದೇಶದ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು ದಿನಾಂಕ 9 ಏಪ್ರಿಲ್ 2025 ಬುಧವಾರ ಇವರ ನೂತನ ಗೃಹ #ಶ್ರೀಅನುಗ್ರಹ_ನಿಲಯದ ಗೃಹ ಪ್ರವೇಶದ ಕಾರ್ಯಕ್ರಮ ಇದೆ.
ಚಹಾದ ಆತಿಥ್ಯದ ಜೊತೆ ರುದ್ರಪ್ಪರನ್ನ ಮಾತಿಗೆ ಎಳೆದಾಗ ನನ್ನ ತಂದೆ ಮತ್ತು ಅವರ ಒಡನಾಟ, ಅವರ ವಿದ್ಯಾಬ್ಯಾಸ -ಉದ್ಯೋಗದ ಬಗ್ಗೆ ಮತ್ತು ಆಗಿನ ಆನಂದಪುರಂ ಹೇಗಿತ್ತು ಅಂತಲೂ ಅವರ ನೆನಪು ಕೆದುಕಿದಾಗ ಅವರಿಂದ ಬಂದ ನೆನಪಿನ ಮಾತುಗಳು ಈ ವಿಡಿಯೋದಲ್ಲಿ ನೋಡಿ.
Comments
Post a Comment