#ಶೃ೦ಗೇಶ್ ಸಂಪಾದಕತ್ವದ ಜನ ಹೋರಾಟಕ್ಕೆ ಇವತ್ತಿಗೆ 15 ನೇ ವಾಷಿ೯ಕೋತ್ಸವ #
ಶೃ೦ಗೇಶ್ ಪರಿಚಯ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗಿ೦ದ ಪ್ರಾರಂಭವಾದದ್ದು ಇಲ್ಲಿ ತನಕ ಮುಂದುವರಿದು ಕೊಂಡು ಬಂದಿದೆ.
ಅವರು ಶಿವಮೊಗ್ಗದ ಕ್ರಾಂತಿ ದೀಪ ಪತ್ರಿಕೆಯಲ್ಲಿ ವರದಿಗಾರರಾಗಿದ್ದಾಗ ಅವರ ಮೇಲಿನ ಹಲ್ಲೆ ಆದಾಗ ಅವರನ್ನೆಲ್ಲ ನಂಜಪ್ಪ ಆಸ್ಪತ್ರೆಗೆ ಸೇರಿಸಿದ್ದಾರೆಂದಾಗ ನಾವೆಲ್ಲ ಜಿಲ್ಲಾ ಪಂಚಾಯತ್ ಕಚೇರಿಯಿಂದ ಅಲ್ಲಿಗೆ ಹೋಗಿದ್ದೆವು.
ಮರುದಿನ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯಲ್ಲಿ ಬಾಗಿಯಾದ ನೆನಪು ಹಸಿರಾಗಿದೆ.
ರವಿ ಬೆಳೆಗೆರೆ ಸಾರಥ್ಯದ ಹಾಯ್ ಬೆಂಗಳೂರಲ್ಲಿ ಇವರ ತನಿಖಾ ವರದಿಗಳು ಓದಲು ರೋಮಾಂಚನ ಉಂಟು ಮಾಡುತ್ತಿತ್ತು, ಇಂತಹ ವರದಿಗಳಿಂದ ಇವರಿಗೆ ರೋವಿಂಗ್ ರಿಪೋಟ೯ರ್ ಎಂಬ ಬಿರುದನ್ನ ರವಿ ಬೆಳೆಗೆರೆಯವರೆ ನೀಡಿದ್ದಾರೆ.
ನಮ್ಮ ನಾಡು ಪತ್ರಿಕೆಯ ಸಂಪಾದಕರಾಗಿ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಹೊಸತನ ತಂದವರು ಕಾಲಾ೦ತರದಲ್ಲಿ ತಮ್ಮ ಸ್ವಂತ ಪತ್ರಿಕೆ ಜನ ಹೋರಾಟ ಪ್ರಾರ೦ಬಿಸಿ 15ನೇ ವಷ೯ಕ್ಕೆ ಕಾಲಿಟ್ಟಿದ್ದಾರೆ.
ಅನೇಕ ಜನಪರ ಹೋರಾಟಗಳಿಗೆ ಧ್ವನಿಯಾಗಲು ಹೋಗಿ ಅನೇಕ ತೊಂದರೆ ಅನುಭವಿಸಿದ್ದಾರೆ, ನ್ಯಾಯದ ಪರವಾಗಿ ಇರುವವರಿಗೆ ಗೆಳೆಯರಾಗಿ ತಪ್ಪು ಮಾಡುವವರಿಗೆ ಇವರೊಂದು ರೀತಿ ಶತ್ರು ರೀತಿ ಕಾಣುತ್ತಾರೆ.
ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲೂ ಶೃoಗೇಶ್ ಹವಾ ಸೃಷ್ಠಿಸಿದ್ದಾರೆ ಆದರೆ ಅವರನ್ನ ಗುಂಪಿನಲ್ಲಿ ಗುರುತಿಸಲು ಸಾಧ್ಯವಿಲ್ಲದಂತ ಅವರ ದೇಹ ಸ್ವರೂಪ ಅವರ ತನಿಖಾ ವರದಿಗೆ ಹೇಳಿ ಮಾಡಿಸಿದಂತೆ ಇದೆ.
ಯಾವುದೇ ಸುದ್ದಿಯ ಮೂಲ ಪರಿಶೋದಿಸದೆ ವರದಿ ಮಾಡುವುದಿಲ್ಲ, ಇವರಿಗೆ ನೆನಪಿನ ಶಕ್ತಿ ಜಾಸ್ತಿ ಅಂತೆಲ್ಲ ಜನ ಮಾತಾಡುತ್ತಾರೆ.
ನನಗೆ ಅವರ ಪತ್ರಿಕೆಗೆ ಬರೆಯಲು ಒತ್ತಾಯಿಸಿ ನನಗೊಂದು ಕಾಲಂ ಕೊಟ್ಟು ಅವಕಾಶ ನೀಡಿದ್ದು ಮರೆಯಲಾರೆ, ಅವರ ಪ್ರೋತ್ಸಾಹವೇ ನನಗೆ ಹೆಚ್ಚು ಬರವಣಿಗೆ ಮಾಡಲು ಪ್ರೇರಣೆ ಆಯಿತು.
Comments
Post a Comment