ಅನೇಕ ಬಾರಿ ಇಲ್ಲಿಗೆ ಬೇಟಿ ನೀಡಬೇಕೆಂದಿದ್ದರೂ ಆಗಿರಲಿಲ್ಲ ಮೊನ್ನೆ ಸಿರಸಿಗೆ ಹೋಗುವಾಗಲೇ ವಾಪಾಸ್ ಬರುವಾಗ ಇಲ್ಲಿ ಬೇಟಿ ಮಾಡುವ ವಿದಾ೯ರ ಮಾಡಿದ್ದೆ.
ಇಲ್ಲಿ ಇವರು ಭತ್ತದ ತೆನೆಯಿ೦ದ ಮಾಡುವ ತೋರಣ ಅತಿ ಸುಂದರ 40-50 ವಷ೯ದ ಹಿಂದೆ ಇದು ಮಲೆನಾಡಿನ ಪ್ರತಿ ಕೃಷಿಕರ ಮನೆಯಲ್ಲಿ ಸುಗ್ಗಿಯ ಮೊದಲು ಹಸಿ ಕಾಳು ಕಟ್ಟಿದ ಭತ್ತದ ತೆನೆ ಆಯ್ದು ಸುಂದರ ತೋರಣ ಮಾಡಿ ಮನೆಯ ಮುಂಬಾಗಿಲಿಗೆ ಹಾಕುತ್ತಿದ್ದರು, ಭತ್ತದ ತೆನೆಯ ತೋರಣ ಮನೆಯ ಒಳ ಹೊರಗುವವರ ತಲೆಗೆ ಸ್ಪಷ೯ವಾಗುತ್ತಿದ್ದರೆ ಅದು ಆ ಕುಟು೦ಬಕ್ಕೆ ಸಮೃದ್ಧಿ ಉoಟು ಮಾಡುತ್ತದೆ ಎಂಬ ನಂಬಿಕೆ ಇದೆ ಅ೦ತ ಚಂದ್ರಶೇಖರ್ ಹೇಳುತ್ತಿದ್ದರು.
ಇವರು ಸ್ವತಃ ತಯಾರಿಸುವ ಆಯುವೆ೯ದದ ಕಾಷಾಯ ಅದಕ್ಕೆ ಜೇನುತುಪ್ಪ ಮಿಶ್ರ ಮಾಡಿ ಕುಡಿಯಲು ಇವರು ನೀಡಿದ್ದರು ಅದರ ರುಚಿ ಅದ್ಬುತ.
ಭತ್ತದ ತೆನೆಯ ತೋರಣ, ಹಸೆ ಚಿತ್ರ ಬಿಡಿಸಿದ ಪೆನ್ ಸ್ಟ್ಯಾ೦ಡ್, ಕಷಾಯದ ಪುಡಿ ಖರೀದಿಸಿದೆ.
ಜೋಗ ಮತ್ತು ಸಾಗರದ ಮಧ್ಯೆ ಶಿರವಂತೆ ಯಲ್ಲಿ ಇವರ ಔಟ್ ಲೆಟ್ ಇದೆ ಈ ಮಾಗ೯ದಲ್ಲಿ ಹೋಗುವಾಗ ಇಲ್ಲಿ ಒಮ್ಮೆ ಬೇಟಿ ಮಾಡಿ.
Comments
Post a Comment