ಇಡೀ ರಾಜ್ಯದಲ್ಲೇ ಬಹುಶಃ ವಿಧಾನ ಸಭೆಗೆ ಪರಸ್ಪರ ಸ್ಪದಿ೯ಸಿದ ಸೋತವರೂ ಗೆದ್ದವರೂ ಈ ರೀತಿ ಸಾಮರಸ್ಯದಲ್ಲಿ ಇರುವುದು ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಅಂತ ನನ್ನ ಅಂದಾಜು.
ಸೊರಬದಲ್ಲಿ ಕುಮಾರ್ ಮತ್ತು ಮದು, ತೀಥ೯ಹಳ್ಳಿಯಲ್ಲಿ ಜ್ಞಾನೆಂದ್ರ ಮತ್ತು ಕಿಮ್ಮನೆ, ಭದ್ರಾವತಿಯಲ್ಲಿ ಸಂಗಮೇಶ್ ಮತ್ತು ಅಪ್ಪಾಜಿಗೌಡರು, ಶಿವಮೊಗ್ಗದಲ್ಲಿ ಈಶ್ವರಪ್ಪ ಮತ್ತು ಪ್ರಸನ್ನ ಕುಮಾರ್, ಶಿಕಾರಿಪುರದಲ್ಲಿ ಯಡೂರಪ್ಪ ಮತ್ತು ಗೋಣಿ ಮಾಲ್ತೇಶ್, ಶಿವಮೊಗ್ಗ ಗ್ರಾಮಾಂತರದಲ್ಲಿ ಅಶೋಕ ನಾಯಕ ಮತ್ತು ಶಾರದಾ ಪೂಯ೯ ನಾಯಕ್ ರ ಜಟಾಪಟಿ ಮತ್ತು ಆಯಾ ಪಕ್ಷದ ಕಾಯ೯ಕತ೯ರು ಹಾವು ಮುಂಗುಸಿಯ೦ತೆ ಇದ್ದಾರೆ.
ಆದರೆ ಸಾಗರದ ಶಾಸಕರಾಗಿರುವ ಹರತಾಳು ಹಾಲಪ್ಪ ತಾವು ಸೋಲಿಸಿದ ಕಾಂಗ್ರೇಸ್ ನ ಮಂತ್ರಿ ಕಾಗೋಡು ತಿಮ್ಮಪ್ಪ ರ ಜೊತೆ ಗೆಳೆತನ ಬೆಳೆಸಿದ್ದಾರೆ, ಪರಸ್ಪರ ವೇದಿಕೆಯಲ್ಲಿ ಅವರವರ ಪಕ್ಷದ ಹಿತ ಕಾಪಾಡುವ ಮಾತು ವತ೯ನೆ ಕಡಿಮೆ ಏನು ಆಗಿಲ್ಲ.
ಮತದಾರರಿಗೆ ಇವರಿಬ್ಬರ ಈ ಸಂಬಂದ ಆದಶ೯ವಾಗಿ ಕಂಡು ಬಂದರೂ ಬಿಜೆಪಿ ಮತ್ತು ಕಾಂಗ್ರೇಸ್ ಕಾಯ೯ಕತ೯ರಿಗೆ ಇದು ಬಿಸಿ ತುಪ್ಪ ಆಗಿದೆ ನುOಗಲು ಆಗುತ್ತಿಲ್ಲ ಉಗಳಲು ಸಾಧ್ಯವಿಲ್ಲ.
ಹಾಲಿ ಶಾಸಕರಾದ ಹಾಲಪ್ಪರಿಗೆ ಇದರಿಂದ ಲಾಭವೇ ಹೊರತು ನಷ್ಟವಿಲ್ಲ ಆದರೆ ಕಾಗೋಡರ ಕಾಂಗ್ರೇಸ್ ಪಕ್ಷಕ್ಕೆ ನಷ್ಟವಲ್ಲದೆ ಬೇರೆ ಏನೂ ಇಲ್ಲ ಹಾಗ೦ತ ವೈಯಕ್ತಿಕವಾಗಿ ಕಾಗೋಡರಿಗೆ ಸೋತರು ತಾಲ್ಲೂಕ್ ಆಡಳಿತ ವಗ೯ದಿಂದ ಗೌರವ ಮತ್ತು ಅವರ ಮಾತಿಗೆ ಘನತೆ ಶಾಸಕ ಹಾಲಪ್ಪರಿಂದ ಲಭಿಸಿದೆ.
ಕಾಂಗ್ರೇಸ್ ಪಕ್ಷ ಸಂಘಟನೆಗಾಗಿ ತಾಲ್ಲೂಕಿನ ಶಾಸಕರನ್ನ ಟೀಕಿಸುವ ಶಕ್ತಿ ಆ ಪಕ್ಷದ ಮುಖಂಡರು ಕಳೆದುಕೊಂಡಿರುವುದು ರಹಸ್ಯವಾಗಿಲ್ಲ ಅಲ್ಲಲ್ಲಿ ಕಾಗೋಡರ ಈ ವತ೯ನೆಗೆ ಕಾಯ೯ಕತ೯ರು ಚಚಿ೯ಸುತ್ತಾರಾದರೂ ಕಾಗೋಡರನ್ನ ಅವರ ಇಷ್ಟಕ್ಕೆ ತಕ್ಕ೦ತೆ ಬದಲಿಸಲು ಸಾಧ್ಯವಿಲ್ಲವಾದ್ದರಿಂದ ಹತಾಶರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಈ ತಂತ್ರಗಾರಿಕೆ ಒಂದು ಕಾಲದ ಅವರ ಶ್ರೀಷ್ಯ ಹಾಲಪ್ಪ ಸಾಗರದಲ್ಲಿ ಅವರ ಎದುರಾಳಿ ಕಾಗೋಡರ ಮೇಲೆಯೆ ಪ್ರಯೋಗಿಸಿ ಯಶಸ್ವಿ ಆಗಿದ್ದಾರೆ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಾಲಪ್ಪನವರು ದಿಡೀರ್ ಆಗಿ ಬೇಳೂರು ಗೋಪಾಲಕೃಷ್ಣರನ್ನ ಕಾಗೋಡು ಅಪ್ಪಿಕೊಂಡಿದ್ದರಿಂದ ಸುಪ್ತವಾಗಿ ಬೇಸರಗೊಂಡಿದ್ದ ಸ್ಥಳಿಯ ಕಾಂಗ್ರೇಸ್ ಮುಖಂಡರು ಮತ್ತು ಪ್ರಮುಖ ಕಾಯ೯ಕತ೯ರನ್ನ ವೈಯಕ್ತಿಕವಾಗಿ ಬೇಟಿ ಮಾಡಿ ಸಹಕಾರ ಯಾಚಿಸಿದ್ದು ಕಾಗೋಡರನ್ನ ಸುಲಭವಾಗಿ ಸೋಲಿಸಲು ಸಾಧ್ಯವಾಗಿತ್ತು ಈಗ ಸಾವ೯ಜನಿಕವಾಗಿ ಇವರು ಹೆಚ್ಚು ಹೆಚ್ಚು ಕಾಗೋಡು ಸಖ್ಯ ಪ್ರದಶ೯ನದಿಂದ ಮುಂದಿನ ದಿನಗಳಲ್ಲಿ ಬರುವ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಬಿಜೆಪಿ ಅಭ್ಯಥಿ೯ ಗೆಲ್ಲಿಸಿಕೊಂಡು ಬರುವ ಸುಲಭ ದಾರಿ ಕಂಡು ಹಿಡಿದಿದ್ದಾರೆ ಅಲ್ಲದೆ ಮುಂದಿನ ದಿನದಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚು ವಿರೋದಿಗಳು ಇಲ್ಲದಂತೆ ಮಾಡಿ ಕೊಂಡು ಮುಂದಿನ ಅವರ ಗೆಲುವಿಗೂ ಅವಕಾಶ ಮಾಡಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ಹಾಲಪ್ಪ ನಡೆ ನುಡಿಯಲ್ಲಿ ಪ್ರಬುದ್ಧತೆ ಕಂಡು ಬರುತ್ತಿರುವುದು ಕೂಡ ಅವರು ಬದಲಾಗಿರುವುದು ತೋರಿಸುತ್ತಿದೆ, ದ್ವೇಷದ ರಾಜಕಾರಣ ಮಾಡದೆ ವಿರೋದಿಗಳಿಗೂ ಸಹಾಯ ಮಾಡುವುದು, ಕಾಂಗ್ರೇಸ್ ಬೆಂಬಲಿಸುವ ಗುತ್ತಿಗೆದಾರರಿಗೂ ಕೆಲಸ ನೀಡುತ್ತಿದ್ದಾರೆ, ಕ್ಷೇತ್ರದಲ್ಲಿ ಆಗಬೇಕಾದ ಕೆಲಸಕ್ಕೆ ಆದ್ಯತೆ ನೀಡಿ ಹಣ ಮಂಜೂರು ಮಾಡಿಸಿ ಅನೂಷ್ಟಾನಗೊಳಿಸುತ್ತಿರುವುದು ಕೆಲಸಗಾರ ಕಾಗೋಡರ ಸೋಲಿನಿಂದ ಸಾಗರದಲ್ಲಿ ಅಭಿವೃದ್ಧಿ ನಿಂತಿದೆ ಎಂಬ ಬಾವನೆ ಬರದಂತಾಗಿದೆ.
ಮತದಾರರಿಗೆ ಕಾಗೋಡು ಸೋತ ನೋವು ಆಗದಂತೆ ಗೆದ್ದ ಹಾಲಪ್ಪನವರು ನಡೆನುಡಿಯಿ೦ದ ಕ್ಷೇತ್ರದಲ್ಲಿ ಅಜಾತ ಶತ್ರು ಆಗುತ್ತಿದ್ದಾರೆ.
Comments
Post a Comment