ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಸಮಾವೇಶ ಶೃ೦ಗೇರಿಯಲ್ಲಿ ಜಿಲ್ಲಾ ಮಂತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಸಿ.ಟಿ.ರವಿಯವರ ಎಲ್ಲಾ ರೀತಿಯ ಬೆದರಿಕೆ ಒತ್ತಡಗಳನ್ನ ಎದುರಿಸಿಯೂ ಪ್ರಾರಂಭ ಆಗಿದೆ.
ಸಕಾ೯ರದ ಹಸ್ತಕ್ಷೇಪ ಇಲ್ಲದೆ ನಾಡು ನುಡಿಯ ಅಕ್ಷರ ಜಾತ್ರೆಯನ್ನ ಸಾಹಿತ್ಯ ಪರಿಷತ್ ನಡೆಸಿಕೊಂಡ ಇತಿಹಾಸವನ್ನ ಬಿಜೆಪಿ ಮಂತ್ರಿ ಮುರಿದಿದ್ದಾರೆ ಕಲ್ಕುಳಿ ವಿಠಲ ಹೆಗ್ಡೆಯನ್ನ ವೈಯಕ್ತಿಕವಾಗಿ ವಿರೋದಿಸಲು ಹೋಗಿ ಬಿಜೆಪಿ ಪಕ್ಷಕ್ಕೆ ಕೆಟ್ಟ ಇಮೇಜ್ ತಂದಿದ್ದಾರೆ ಮತ್ತು ಬಿಜೆಪಿ ವಿರೋದಿ ಶಕ್ತಿಗಳಿಗೆ ಹೆಚ್ಚಿನ ಆತ್ಮವಿಶ್ವಾಸಕ್ಕೆ ಕಾರಣರಾಗಿದ್ದಾರೆ.
ಇವತ್ತು ನಮ್ಮ ಜಿಲ್ಲೆಯ ಯಡೂರಪ್ಪನವರು ಮುಖ್ಯಮಂತ್ರಿ, ಅವರ ಇವತ್ತಿನ ತನಕದ ರಾಜಕಾರಣದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಯಾವುದೇ ಕಪ್ಪು ಚುಕ್ಕೆ ಉoಟು ಮಾಡುವ ಘಟನೆಗೆ ಆಸ್ಪದ ನೀಡಲಿಲ್ಲ, ಕಳೆದ ಅವದಿಯಲ್ಲಿ ಇವರು ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯ ವರೇ ಆದ ಸಾಹಿತಿ ನಾ.ಡಿಸೋಜ ಇವರನ್ನ ಎಲ್ಲಾ ರೀತಿಯಿಂದಲೂ ವಿರೋದಿಸುತ್ತಿದ್ದರು ಆದರೆ ಒಮ್ಮೆಯೂ ಯಡೂರಪ್ಪ ತಮ್ಮ ಅಧಿಕಾರ ದುಬ೯ಳಕೆ ಮಾಡಲಿಲ್ಲ ಅವರ ಕಾಯ೯ಕ್ರಮ ತಡೆಯಲಿಲ್ಲ.
1980 ರಲ್ಲಿ ಆನಂದಪುರಕ್ಕೆ ಆಗಾಗ್ಗೆ ಕುಮಧ್ವತಿ ಬಸ್ ನಲ್ಲಿ ಬಂದು ಅವತ್ತಿನ ದಿನದಲ್ಲಿ ಆನಂದಪುರದ ಬಿಜೆಪಿ ತ್ರಿಮೂತಿ೯ಗಳಾಗಿದ್ದ ಗೀತಾ ಹೋಟೆಲ್ ಶೆಣೆಯ್, ಬಸ್ ಶ್ರೀಧರಣ್ಣ ಮತ್ತು ಬಸ್ ಏಜೆಂಟ್ ಮOಜು ಕವಲೇಕರ್ ಜೊತೆ ಕೋಟೆ ಆಂಜನೇಯ ದೇವಸ್ಥಾನದ ಹತ್ತಿರ ಮೀಟಿಂಗ್ ಮಾಡಿ ಶಿಕಾರಿಪುರಕ್ಕೆ ವಾಪಾಸಾಗುತ್ತಿದ್ದ ಯಡೂರಪ್ಪರವರನ್ನ ದೂರದಿಂದ ನೋಡುತ್ತಿದ್ದೆ.
ನಂತರ ನಾನು ಮೊದಲ ಸಾರಿ ಇವರನ್ನ ನೋಡಿದ್ದು ಶಿವಮೊಗ್ಗ ಜಿಲ್ಲಾ ಪಂಚಾಯತನ ಮೊದಲ ಸಭೆಯಲ್ಲಿ ಅವತ್ತು ನನ್ನ ಮೊದಲ ಸಭೆಯ ಮಾತಿಗೆ ಬೆನ್ನು ತಟ್ಟಿ ಅಭಿನಂದಿಸಿದ್ದರು, ಆಗಾಗ್ಗೆ ಜಿ.ಪಂ.ಸಭೆಗೆ ಬರುತ್ತಿದ್ದರು.
ನಂತರ ಅವರ ಬೇಟಿ 2014ರ ಲೋಕಸಭಾ ಚುನಾವಣೆಗೆ ಇವರು ಅಭ್ಯಥಿ೯ ಆದಾಗ ಸಾಗರ ತಾಲ್ಲೂಕ್ ಜೆ.ಡಿ.ಎಸ್.ಅಧ್ಯಕ್ಷನಾಗಿದ್ದ ನನ್ನನ್ನ ಮಾಜಿ ಶಾಸಕರಾದ ಗೋಪಾಲಕೃಷ್ಣರು ಅವರೊಂದಿಗೆ ಬಿಜೆಪಿಗೆ ಸೇರಿಕೊಂಡಾಗ.
ನಂತರ ನಾನು ರಾಜಕೀಯದಿ೦ದ ದೂರ ಆದ ಮೇಲೆ ಅವರನ್ನು ಬೇಟಿ ಮಾಡಲಿಲ್ಲ, ಅವರಿಗೂ ನೆನಪು ಇರಲಿಕ್ಕಿಲ್ಲ ಆದರೆ ಅವರು ಸಾಗರ ತಾಲ್ಲೂಕಿನ ತುಮರಿ ಸೇತುವೆ ಮಂಜೂರು ಮಾಡಿದ್ದು ಮತ್ತು ಬ್ರಾಡ್ ಗೇಜ್ ಗೆ ರಾಜ್ಯ ಸಕಾ೯ರದ ಸಹಬಾಗಿತ್ವದ ಹಣ ನೀಡಿ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ರೈಲು ಓಡುವ೦ತೆ ಮಾಡಿದ್ದು ನನಗೆ ಅವರ ಮೇಲೆ ಅಪಾರ ಅಭಿಮಾನ.
ಇದಕ್ಕೆ ಕಾರಣವೂ ಇದೆ ಈ ಎರೆಡು ಮುಖ್ಯ ವಿಚಾರದ ಜೊತೆ ಹಂದಿಗೋಡು ಕಾಯಿಲೆಗೆ ಸಂಶೋದನೆ ಜಾಷದಿ ಕಂಡು ಹಿಡಿಯುವುದು, ಜೋಗ ಜಲಪಾತ ಪ್ರವಾಸೋದ್ಯಮದ ಅಭಿವೃದ್ದಿ, ಸಾಗರ ರೈಲು ನಿಲ್ದಾಣ ಸಾಗರ ಜಂಬಗಾರು ಹೆಸರು ಡಾ.ರಾಮಮನೋಹರ ಲೋಹಿಯಾ ಎಂದು ಮರುನಾಮಕರಣ, ಜಿಲ್ಲೆಯ ಇಂಡಿಕರಣ ಪ್ರಕ್ರಿಯೆ ರದ್ದು ಮಾಡಲು ಒತ್ತಾಯಿಸಿ ಇಡೀ ಸಾಗರ ತಾಲ್ಲೂಕಿನಲ್ಲಿ ಪಾದಯಾತ್ರೆ ಮೂಲಕ ಸಕಾ೯ರಕ್ಕೆ ಒತ್ತಾಯಿಸಿದ್ದು, ದೆಹಲಿ ಚಲೋ ಮಾಡಿದ್ದರಿಂದ ನಮ್ಮ ಬೇಡಿಕೆ ಈಡೇರದಿದ್ದರೂ ಯಡೂರಪ್ಪ ಮುಖ್ಯಮಂತ್ರಿ ಆದಾಗ ನಾವು ಒತ್ತಾಯಿಸುತ್ತಿದ್ದ ಬೇಡಿಕೆಯಲ್ಲಿನ ಈ ಎರೆಡು ದೊಡ್ಡ ಕೆಲಸ ಆಯಿತು, ಇದು ನಮ್ಮ ಹೋರಾಟದ ಕಾರಣ ಅಲ್ಲವಾದರೂ ನಮ್ಮ ಹೋರಾಟ ಸ್ಥಳಿಯ ಅವರ ಪಕ್ಷದವರಿಗೆ ಅವರ ನಾಯಕರಿಗೆ ಬೇಡಿಕೆ ಸಲ್ಲಿಸಲು ಕಾರಣ ಆಯಿತು ಆಗಿನ ಸಾಗರ ಶಾಸಕರಾಗಿದ್ದ ಗೋಪಾಲಕೃಷ್ಣರ ಸಮಯೋಜಿತ ಒತ್ತಾಯ ಮತ್ತು ಒತ್ತಡವೂ ಸೇರಿದ್ದರಿಂದ ಇದು ಸಾಧ್ಯವಾಯಿತು, ಸಹಜವಾಗಿ ಇವರ ಮೇಲಿನ ಅಭಿಮಾನಕ್ಕೆ ಇದು ಕಾರಣ ಆಯಿತು ಇದನ್ನ ಇಡೀ ಜಿಲ್ಲೆಯ ಜನ ಮರೆಯಬಾರದು.
ಸಿ.ಟಿ.ರವಿ ಇಂತವರೆಲ್ಲ ಯಡೂರಪ್ಪನವರಿಗೆ ಪದೇ ಪದೇ ಸಂಕಷ್ಟ ತರುವುದು, ಏನೇನೋ ಹೇಳಿಕೆ ನೀಡಿ ಅವರನ್ನ ಇರುಸು ಮುರುಸು ಮಾಡುವುದು ಸರಿಯಲ್ಲ ಇದಕ್ಕೆಲ್ಲ ಬೆಂಬಲಿಸುವಂತೆ ಸಂತೋಷ್ ಜಿ, ಅಮಿತ್ ಶಹಾ ಮತ್ತು ಮೋದಿ ಕೂಡ ಪರೋಕ್ಷವಾಗಿ ನಡೆಯುತ್ತಿರುವುದು ರಹಸ್ಯವೇನಲ್ಲ.
Comments
Post a Comment