ಮೊಹಮದ್ ಆಲೀ ಅಕ್ಬರ್ ಕಾಗಿ೯ಲ್ ನಿವಾಸಿ ಇವತ್ತು ನಮ್ಮ ಅತಿಥಿ ಇವರು ಮಹಾನ್ ದೇಶ ಪ್ರೇಮಿ ಇವರ ಕುಟುಂಬ ಸಮಾಜ ಸೇವೆಯಲ್ಲಿ ಮು೦ದೆ ದೇಶದ ರಕ್ಷಣಾ ಇಲಾಖೆಗೆ ಇವರು ತುಂಬಾ ಸಹಾಯ ಮಾಡುತ್ತಾರೆ ಇವರ ಮಾವನಿಗೆ ಕ್ಯಾನ್ಸರ್ ಎಲ್ಲಾ ಕಡೆ ಚಿಕಿತ್ಸೆ ಮಾಡಿದರೂ ಪ್ರಯೋಜನ ಆಗಿಲ್ಲ ಹಾಗಾಗಿ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಆಯುವೆ೯ದ ಪಂಡಿತರಾದ ನರಸೀಪುರ ನಾರಾಯಣ ಮೂತಿ೯ ಜಾಷದಿಗಾಗಿ ಬರುತ್ತಿದ್ದಾರೆ ಆದರೆ ಆದನ್ನೆಲ್ಲ ಅವರು ಹೇಳಿಕೊಳ್ಳುವುದಿಲ್ಲ ಅವರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಬೇಕಾಗಿ ಕಾಗಿ೯ಲ್ ಆಮಿ೯ ಬೇಸ್ ನಿಂದ ಬಂದ ಕರೆಯOತೆ ಇವರ ಕುಟುಂಬವನ್ನ ನಮ್ಮ ಲಾಡ್ಜ್ ನಲ್ಲಿ ಉಳಿಸಿ ವೈದ್ಯರನ್ನ ಬೇಟಿ ಮಾಡಿಸಿ ಔಷದಿ ಕೊಡಿಸಿ ವಿದಾಯ ಮಾಡಿದೆ.
ಇವರ ತಂದೆ ಕಾಗಿ೯ಲ್ ನಲ್ಲಿ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಕೊಡುಗೆ ನೀಡಿದವರು ಇವರ ಪ್ರಯತ್ನದಿಂದ ಇಡೀ ಜಿಲ್ಲೆ 75% ಅಕ್ಷರಸ್ಥರಾಗಿದ್ದಾರೆ, ಬಂದ ಪ್ರಶಸ್ತಿಗಳನ್ನ ನಯವಾಗಿ ನಿರಾಕರಿಸಿದವರು ಅವರು ಒಪ್ಪಿದ್ದರೆ ಶಾಸಕ ಸಂಸದರಾಗ ಬಹುದಿತ್ತು ಅವರು ಅದನ್ನೆಲ್ಲ ಬಯಸದೆ ಕಿಂಗ್ ಮೇಕರ್ ಆಗಿದ್ದರು ಅಂತ ಅಕ್ಬರ್ ವಿವರಿಸಿದರು.
ಸ್ಥಳಿಯರ ಸಹಕಾರ ಇಲ್ಲದೆ ಕಾಗಿ೯ಲ್ ಯುದ್ಧ ಗೆಲ್ಲಲಾಗುತ್ತಿರಲಿಲ್ಲ ಅಂತ ಅವತ್ತಿನ ಮುಂಚೂಣಿ ಸೇನಾ ಅಧಿಕಾರಿಗಳ ಹೇಳಿಕೆ 1999ರಲ್ಲಿ ನೆನಪಿತ್ತು ಇದನ್ನ ಪ್ರಸ್ತಾಪಿಸಿದಾಗ ಅವರು ಹೇಳಿದ್ದು ಕಾಗಿ೯ಲ್ ನಲ್ಲಿ 85% ಮುಸ್ಲಿ೦ ಇದ್ದಾರೆ ಅವರೆಲ್ಲ ಶಿಯಾ ಪಂಥದವರು ಭಾರತವನ್ನ ಬೆಂಬಲಿಸುತ್ತಾರೆ 15 % ಬೌದ್ಧರಿದ್ದಾರೆ, ಕಾಗಿ೯ಲ್ ಯುದ್ಧದಲ್ಲಿ ಪಾಕಿಸ್ತಾನದ ಬಾಂಬ್ ನಿಂದ 23 ಜನ ಕಾಗಿ೯ಲ್ ನ ಮುಸ್ಲಿಂ ರೇ ಮೃತರಾದರು ಆ ಎಲ್ಲಾ ದೇಹಗಳ ಗುರುತು ಮಾಡಲು ಇವರೇ ಹೋಗ ಬೇಕಾಯಿತಂತೆ ನಮ್ಮನ್ನ ಕೊಲ್ಲುವವರನ್ನ ನಾವು ಬೆಂಬಲಿಸುವುದು ದಾದರೂ ಹೇಗೆ? ಅಂದರು
ಕಾಗಿ೯ಲ್ ಯುದ್ಧ ಪ್ರಾರಂಬ ಆದಾಗ ಆರು ತಿಂಗಳು ಊರು ತ್ಯಜಿಸಿ 30 ಕಿ.ಮಿ ದೂರದಲ್ಲಿ ಪುನರ್ ವಸತಿ ಕೇಂದ್ರದಲ್ಲಿ ವಾಸಿಸುವಂತಾಯಿತು ಸ್ಥಳಿಯ ಯುವಕರು ಭಾರತೀಯ ಸೇನೆಗೆ ಅವಶ್ಯ ವಸ್ತು ಸಾಗಾಣಿಕೆಗೆ ಸ್ವಯಂ ಸೇವಕರಾಗಿ ಸಹಕರಿಸಿದರು ಅಂದರು.
ಇವತ್ತೂ ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿಸುವವರ ಸಂಖ್ಯೆ 25% ಮೀರಿಲ್ಲ ಭಾರತದ ಪರ 25% ಇದಾರೆ ಶೇಕಡಾ 50% ಯಾರದೇ ಪರವಾಗಿಲ್ಲ ಅಂತ ವಿವರಿಸಿದ್ದಾರೆ.
ಅಲ್ಲಿ ಚಳಿಗಾಲ 2 ಅಡಿ ದಪ್ಪ ಮಂಜುಗಡ್ಡೆ ಇದೆ, ಶಾಲಾ ಕಾಲೇಜು ಮಾಚ್೯ ತನಕ ರಜಾ, ಎಲ್ಲಾ ರಸ್ತೆಗಳು ಬಂದ್ ಆಗಿದೆ, ವಿಮಾನ ಮಾಗ೯ ಒಂದೇ ಸಂಪಕ೯ ಅಂದರು.
ಅಲ್ಲಿನ ಅಹಾರ ಸಂಪ್ರದಾಯದ ಬಗ್ಗೆ ತುಂಬಾ ಚಚಿ೯ಸಿದರು ಅಕ್ಬರ್ ಒಬ್ಬ ಪ್ರಬುದ್ದ ಭಾರತೀಯ ಪ್ರಜೆ ಇವರ ಮನೆ LOC ಯಿOದ ಕೇವಲ 5 KM ದೂರದಲ್ಲಿದೆ ನಾವೆಲ್ಲ ಜಮ್ಮ ಕಾಶ್ಮೀರದ ಮುಸ್ಲಿಂರೆಲ್ಲರ ಬಗ್ಗೆ ತಪ್ಪುಗ್ರಹಿಕೆಯಲ್ಲೇ ಇದ್ದೇವೆ ಆದರೆ ವಾಸ್ತವವೇ ಬೇರೆ ಅಂತ ಅಕ್ಬರ್ ಕುಟುಂಬದ ಜೊತೆ ಒಂದು ದಿನದಲ್ಲಿ ಅನುಭವ ಆಯಿತು.
ಅವರಿಗೆ ಮಲೆನಾಡಿನ ಸಾವಯವ ಜೋನಿ ಬೆಲ್ಲ ನೆನಪಿಗಾಗಿ ನೀಡಿದೆ.
Comments
Post a Comment