ತಾಳಗುಪ್ಪದಿಂದ ಸಿಸಿ೯-ಸಿದ್ದಾಪುರ ಮಾಗ೯ದಲ್ಲಿ 10 ಕಿ.ಮಿ.ದೂರ ಸಾಗಿದರೆ ಅಕ್ಕುOಜಿಗಿ೦ತ 5 ಕಿ.ಮಿ.ಹಿಂದೆ ಎಡ ಭಾಗದಲ್ಲಿ ಒಂದು ವಿಶಿಷ್ಟ ಬಸ್ ನಿಲ್ದಾಣ ಒಂದು ಇದೆ ಅನೇಕ ವಷ೯ದಿಂದ ನೋಡುತ್ತಿದ್ದೆ ಹತ್ತಿರ ಹೋಗಿ ನಿಂತು ನೋಡಲು ಆಗಿರಲಿಲ್ಲ ಇವತ್ತು ಸಾಧ್ಯವಾಯಿತು.
ಕೆ೦ಪು ದಾಸವಾಳದ ಹೂವಿನ ಗಿಡವನ್ನ ಸುಮಾರು ಹತ್ತು ವಷ೯ದಿOದ ಜೋಪಾನ ಮಾಡಿ ಅದನ್ನ ಚಪ್ಪರದ೦ತೆ ಆಗಾಗ್ಗೆ ಪ್ರೋನಿ೦ಗ್ ಮಾಡಿ ಸುತ್ತಲೂ ಅದಕ್ಕೆ ಸಪೋಟ್೯ ಆಗಿ ದೆಬ್ಬೆಯ ಚಪ್ಪರ ಕೊಟ್ಟು ಸುತ್ತ ಕಲ್ಲಿನ ಕಟ್ಟೆ ಕಟ್ಟಿದ್ದಾರೆ ಮತ್ತು ಮುಂದುಗಡೆ ಚಪ್ಪಡಿಕಲ್ಲಿನ ಕಟ್ಟೆ ಇದೆ.
ಬಸ್ ಗೆ ಕಾಯುವ ಜನ ಈ ಸುಂದರ ಹೂವಿನ ಚಪ್ಪರದ ಬಸ್ ನಿಲ್ದಾಣದ ನೆರಳಿನಲ್ಲಿ ವಿರಮಿಸಿದರೆ ಹಿಂಬಾಗದ ಇದರ ನೆರಳಿನಲ್ಲಿ ಮೊಟಾರ್ ಸೈಕಲ್ ಗಳ ಪಾಕಿ೯೦ಗ್ ಆಗಿದೆ.
ಈ ಪರಿಸರ ಪ್ರೇಮಿ ಬಸ್ ನಿಲ್ದಾಣದ ಕಲ್ಪನೆ, ನಿಮಾ೯ಣ ಮತ್ತು ನಿವ೯ಹಣೆ ಹಿಂಬಾಗದಲ್ಲಿನ ದಿನಸಿ ಅಂಗಡಿ ಮಾಲಿಕ ಅಣ್ಣಪ್ಪರದ್ದು.
Comments
Post a Comment