Skip to main content

#ಪ್ರಖ್ಯಾತ ಕಾಟೂ೯ನಿಸ್ಟ ಕುಗ್ವೆ ನಿರ೦ಜನರ ಕೈಚಳಕದಲ್ಲಿ ನನ್ನ ಕ್ಯಾರಿಕೇಚರ್#

#ನಿರ೦ಜನಕುಗ್ವೆ ಕಾಟೂ೯ನಿಸ್ಟ್, ಹೋರಾಟಗಾರ, ಶಿಕ್ಷಕ ಮತ್ತು ಕೃಷಿಕರು ಇವರು ಅಭಿಮಾನ ಪೂವ೯ಕವಾಗಿ ನನ್ನ ಕ್ಯಾರಿಕೇಚರ್ ಉಡುಗೊರೆ ಇವತ್ತು ನೀಡಿದ್ದಾರೆ#
  ಉದಯೋನ್ಮುಖ ಚಿತ್ರಕಾರರಾದ  ಸಾಗರ ತಾಲ್ಲೂಕಿನ ಕುಗ್ವೆಯವರು ಶಿಕ್ಷಕರಾಗಿ ಸಕಾ೯ರಿ ಸೇವೆಯಲ್ಲಿದ್ದಾರೆ ಇವರು ಇವರ ಸಮಾಜದ ಮಠಾದೀಷರ ಅನೈತಿಕ ವತ೯ನೆಯನ್ನ ತಮ್ಮ ಕುಂಚದಲ್ಲಿ ಮೊನಚಾಗಿ ವ್ಯಂಗ್ಯ ಚಿತ್ರವಾಗಿಸುತ್ತಿದ್ದರಿಂದ ಇವರನ್ನ ಅನೇಕ ತೊಂದರೆಗೆ ಗುರಿಪಡಿಸಿದ್ದರು ಆದರೂ ಇವರು ತಮ್ಮ ಹೋರಾಟಕ್ಕೆ ಬೆನ್ನು ತೋರಿಸಲಿಲ್ಲ ಆಗ ಎಲ್ಲರ ವಿರುದ್ದವಿತ್ತು ಈಗ ಸತ್ಯಾಂಶ ಗೊತ್ತಾಗಿ ಇವರಿಗೆ ಜನಬೆಂಬಲ ಹೆಚ್ಚಾಗಿದೆ.
 ನಾನು ಇವರ ಕಲೆಗೆ ಅಭಿಮಾನಿ, ಇವರ ಹೋರಾಟಕ್ಕೆ ಬೆಂಬಲಿಗ ಇವರು ಮುಂದಿನ ದಿನದಲ್ಲಿ ರಾಜ್ಯದ ಪ್ರಖ್ಯಾತ ಕಲಾವಿದರಾಗುವ ದಿನ ದೂರವಿಲ್ಲ ಪ್ರಖ್ಯಾತ ಚಿತ್ರಕಾರ ಪಂಜುಗOಗೋಲಿ ಕೂಡ ಇವರ ಅಥ೯ಗಬಿ೯ತ ಸಾಂದಭಿ೯ಕ ಚಿತ್ರಗಳನ್ನ ಅಭಿನಂದಿಸಿದ್ದಾರೆ.
  ಇವತ್ತು ಇವರು ನೀಡಿದ ಉಡುಗೊರೆ ಸಂತೋಷದಿಂದ ಸ್ವೀಕರಿಸಿದ್ದೇನೆ, ನನ್ನ ಕಚೇರಿಯಲ್ಲಿ ನಿರಂಜನರ ಸವಿ ನೆನಪಿನೊಂದಿಗೆ ಇಟ್ಟುಕೊಳ್ಳುತ್ತೇನೆ.

Comments