Skip to main content

ಕು೦ದಾದ್ರಿ ಎಂಬ ಸುಂದರ ಪವ೯ತ ತಾಣ

ಕುOದಾದ್ರಿ ಬೆಟ್ಟ.

  ಶಿವಮೊಗ್ಗದಿಂದ 80 ಕಿಮಿ ಆಗುಂಬೆ (ತೀಥ೯ಹಳ್ಳಿ) ಮಾಗ೯ದಲ್ಲಿ ಸಾಗಿದರೆ ಕುಂದಾದ್ರಿ ಸಿಗುತ್ತದೆ, ಗುಡ್ಡೆಕೇರಿ ಎಂಬ ಊರಿಂದ ಎಡಕ್ಕೆ ಹೋಗಬೇಕು ಇಲ್ಲಿ೦ದ ಆಗುOಬೆ ಸಮೀಪದಲ್ಲಿದೆ.

ಕುವೆಂಪುರವರು ಕುಂದಾದ್ರಿ ಬೆಟ್ಟದಲ್ಲಿ ಸೂಯೋ೯ದಯ ವೀಕ್ಷಿಸಲಿಕ್ಕಾಗಿ ಸಮೀಪದ ಸಂಬಂದಿಗಳ ಮನೆಯಲ್ಲಿ ರಾತ್ರಿ ತಂಗಿ ಬೆಳಗಾಗುವ ಮುನ್ನ ಬೆಟ್ಟ ಏರಿ ಸೂಯೋ೯ದಯ ವೀಕ್ಷಿಸಿದ ಅನುಭವ ಅವರ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.

    ಹೊಸನಗರ ತಾಲ್ಲೂಕಿನ ಹೊಂಬುಜ ಜೈನ ಮಠದ ಸುಪದಿ೯ಯಲ್ಲಿರುವ ಈ ಸ್ಥಳ ಇತ್ತೀಚಿನವರೆಗೆ ನಕ್ಸಲೇಟ ಪೀಡಿತ ವ್ಯಾಪ್ತಿ ಪ್ರದೇಶವಾದ್ದರಿಂದ ಪ್ರವಾಸಿಗಳಿಗೆ ಪ್ರವೇಶಕ್ಕೆ ಮಿತಿ ಇತ್ತು, ಈಗ ಅಂತಹ ನಿಬ೯೦ದವಿಲ್ಲ.

   ಸುಮಾರು 2000 ವಷ೯ದ ಹಿಂದೆ ಜೈನ ಆಚಾಯ೯ ಮುನಿಗಳಾದ ಕುಂದ ಕುಂದಾಚಾಯ೯ರು ದಟ್ಟಡವಿಯ ಸಮುದ್ರ ಮಟ್ಟದಿಂದ 3200 ಅಡಿ ಎತ್ತರದ ಇಲ್ಲಿ ತಪಸ್ಸು ಮಾಡಿದ್ದರು ಮತ್ತು ಜೈನರ ಪವಿತ್ರ ಗ್ರಂಥ ಅನುಸರಣ ಇಲ್ಲೇ ರಚಿಸಿದ್ದರಿಂದ ಈ ಸ್ಥಳ ದೇಶದ ಜೈನರಿಗೆ ಅತ್ಯಂತ ಪವಿತ್ರ ಮತ್ತು ಪುಣ್ಯ ಸ್ಥಳವಾಗಿದೆ.

  ಈಗ ಇಲ್ಲಿಗೆ ವಾಹನಗಳು ಸರಾಗವಾಗಿ ತಲುಪುತ್ತದೆ ಆದರೂ ಕಡಿದಾದ ತಿರುವು, ಅಲ್ಲಿಂದ ಅತ್ಯಂತ ಆಳದಲ್ಲಿ ಕಾಣುವ ಊರು, ಮನೆಗಳು ಭಯ ಉoಟು ಮಾಡುತ್ತದೆ, ಶ್ರೀಮತಿ ಕಾಡಮ್ಮ ನಾಗಪ್ಪ ಹೆಗ್ಗಡೆ ದಂಪತಿಗಳು ಇಲ್ಲಿಗೆ ರಸ್ತೆ ಮಾಡಿಸಿಕೊಟ್ಟ ದಾನಿಗಳOತೆ.

   ಇತ್ತೀಚಿಗೆ ಬೆಟ್ಟದ ತುದಿಯಲ್ಲಿ ಪಾವಟಿಗೆ ಅಳವಡಿಸಿ, ಸುಂದರವಾದ ಪ್ರವಾಸಿಗಳು ಕುಳಿತು ವಿಶ್ರಮಿಸಿಕೊಳ್ಳುತ್ತಾ ಸುತ್ತಲಿನ ಪರಿಸರ ವೀಕ್ಷಣೆಗೆ ಗೋಪುರ ನಿಮಿ೯ಸಿದ್ದಾರೆ, ಆಯುವೆ೯ದ ಸಂಶೊದನೆಗಾಗಿ 200 ಎಕರೆ ಅರಣ್ಯವನ್ನ ರಕ್ಷಣಾ ಬೇಲಿ ನಿಮಿ೯ಸಿ ಸಂರಕ್ಷಿಸುವ ಕೆಲಸ ಪ್ರಾರಂಭವಾಗಿದೆ.

  ಬೆಟ್ಟದಲ್ಲಿ ಕೊಳದ ಸುತ್ತ, ಬOಡೆಯ ಸುತ್ತ ರಕ್ಷಣಾ ಬೇಲಿ ನಿಮಿ೯ಸಿದ್ದರಿಂದ ಪ್ರವಾಸಿಗಳಿಗೆ ಅಪಾಯವಿಲ್ಲ.

  ಸ್ಥಳಿಯ ಗ್ರಾಮ ಪಂಚಾಯತ್ ಇಲ್ಲಿ ಪಾಕಿ೯೦ಗ್ ವ್ಯವಸ್ಥೆ ಮತ್ತು ಗೈಡ್ ನೇಮಿಸಬೇಕು.ಇಲ್ಲಿ ಪ್ರವಾಸಿಗಳಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಆಗಬೇಕಾಗಿದೆ.

   ಇಲ್ಲಿ ಒಬ್ಬಿಬ್ಬರು ಮಾತ್ರ ಹೋಗಲು ಭಯ ಆಗುತ್ತೆ, ರಾತ್ರಿ ಹೊತ್ತು ಇರುವುದ೦ತು ಅಸಾಧ್ಯ ಆದರೆ 2000 ವಷ೯ದ ಹಿಂದೆ ಇಲ್ಲಿನ ಗುಹೆಯಲ್ಲಿದ್ದು ಸಾದನೆ ಮತ್ತು ಗ್ರOಥ ರಚನೆ ಮಾಡಿದ್ದರೆಂದರೆ ಅವರು ಜೀವ ಮತ್ತು ಜೀವನದ ಬಗ್ಗೆ ಎಂತಹ ತ್ಯಾಗಿಗಳಾಗಿದ್ದರೆಂದು ಅಥ೯ವಾಗುತ್ತೆ.

   ಮೊನ್ನೆ ಇಲ್ಲಿಗೆ ಬಹುದಿನದ ನಿರೀಕ್ಷೆ ನಂತರ ಬೇಟಿ ನೀಡುವ ಅವಕಾಶವಾಯಿತು.





Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...