ಉ.ಕ.ಜಿಲ್ಲೆಯ ಸಿಸಿ೯ಯಿ೦ದ ಯಲ್ಲಾಪುರ ರಸ್ತೆಯಲ್ಲಿ ಸಹ ಸಹಸ್ರ ಲಿಂಗ ಎಂಬ ಸ್ಥಳವಿದೆ ಇಲ್ಲಿ ಶಾಲ್ಮಲ ಎಂಬ ನದಿ ಹರಿಯುತ್ತದೆ. ಈ ನದಿಯಲ್ಲಿ ಅಸ೦ಖ್ಯ ಬಂಡೆಗಲ್ಲುಗಳಿವೆ ಆ ಎಲ್ಲಾ ಬಂಡೆಗಲ್ಲು ಗಳ ಮೇಲೆ ಈಶ್ವರ ಲಿಂಗಳನ್ನ ಕೆತ್ತಿದ್ದಾರೆ.
ಹರಿಯುವ ಜುಳು ಜುಳು ನೀರಿನ ತಂಪಿನ ದಟ್ಟ ಕಾಡಿನ ಮಧ್ಯದ ಈ ಸ್ಥಳದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಪ್ರವಾಸಿಗರಿಗಾಗಿ ಪಾಕಿ೯೦ಗ್, ಕ್ಯಾ೦ಟೀನ್ ಮತ್ತು ಟಾಯಿಲೆಟ್ ವ್ಯವಸ್ಥೆ ಮಾಡಿರುವುದರಿ೦ದ ಪ್ರವಾಸಿಗಳಿಗೆ ಅನುಕೂಲ ಆಗಿದೆ.
ಸೋದೆಯ ರಾಜ ಅಲಸಪ್ಪ ನಾಯಕರಿಗೆ ಸಂತಾನ ಭಾಗ್ಯ ಇಲ್ಲದ್ದರಿಂದ ಜೋತಿಷಿಗಳು ಸಹಸ್ರ ಲಿಂಗ ಕೆತ್ತಿಸಿ ಪೂಜಿಸಿದರೆ ಮಕ್ಕಳಾಗುತ್ತಾರೆ ಎಂದಿದ್ದರಿಂದ ರಾಜ ಈ ಲಿಂಗ ಕೆತ್ತಿಸಿ ಪೂಜಿಸಿದರೆಂದು ಇದರಿಂದ ಅವರಿಗೆ ಮಕ್ಕಳ ಬಾಗ್ಯ ದೊರಕಿತೆಂದು ಇತಿಹಾಸವಿದೆ.
ನದಿಯಲ್ಲಿ ಗಣಪತಿಯೂ ಇದ್ದಾನೆ ಮು೦ಜಾನೆ ಇಲ್ಲಿ ಅಡಿಕೆಯ ಹೂವಿನ ಹಿಂಗಾರ ಮುಡಿಸಿ ಅಚ೯ಕರು ಪೂಜೆ ಮಾಡಿ ಹೋಗುತ್ತಾರೆ, ಬರುವ ಪ್ರವಾಸಿಗಳು ನದಿಯಲ್ಲಿ ಎಲ್ಲಾ ಲಿಂಗಗಳನ್ನ ದಶಿ೯ಸುತ್ತಾರೆ, ನೀರಲ್ಲಿ ಈಜಾಡುತ್ತಾರೆ.
ಆಯಾಸವಾದಾಗ ಮರಗಳ ತಂಪು ನೆರಳಲ್ಲಿ ವಿರಮಿಸುತ್ತಾರೆ, ಕಾಲನ್ನ ಹರಿಯುವ ತಣ್ಣನೆಯ ನೀರಲ್ಲಿ ಇಳಿಬಿಟ್ಟರೆ ಇಲ್ಲಿನ ನೈಸಗಿ೯ಕ ಮೀನುಗಳಿಂದ ಪೆಡಿಕ್ಯುರ್ ಆಗುತ್ತೆ.
ಇದೊಂದು ಸುಂದರ ತಾಣ.
Comments
Post a Comment