ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕನ ಆನಂದಪುರಂ ಹೋಬಳಿಯ ಗೌತಮಪುರ ಗ್ರಾಮ ಪಂಚಾಯತ್ ನಲ್ಲಿ ಮುಸ್ಲಿ೦ರ ಮೂರೆ ಕುಟುಂಬ ಇರುವುದು, ಉದನೂರಿನ ಯಹಯಾ ಸಾಹೇಬರದ್ದು, ಸಂಗಣ್ಣನಕೆರೆಯಲ್ಲಿ ಇನ್ನೊಂದು,ಹೊಸಕೊಪ್ಪದಲ್ಲಿನ ಚಾರ್ಕೊಲ್ ಸಾಹೇಬರದ್ದು ಮತ್ತು ಇತ್ತೀಚಿಗೆ ಕಣಿವೆ ಎಂಬಲ್ಲಿ ಒಂದು ಕುಟುಂಬ ಹೊಸದಾಗಿ ಬಂದಿದೆ.
ಮೊನ್ನೆ 2017ರ ಮಾಚ್೯ 1 ನೇ ತಾರೀಖಿಗೆ ನನ್ನ ಕಚೇರಿಗೆ ಚಾರ್ಕೊಲ್ ಸಾಹೇಬರು ಬಂದರು, ಯಾರೊ೦ದಿಗೋ ಮಾತಾಡುತ್ತಿದ್ದೆ ಅದರಿಂದ ಒಳಬರಲು ಹಿಂದೇಟು ಹಾಕಿದರು ಒಳಗಿದ್ದವರಿಗೂ ಇವರ ಪ್ರವೇಶ ಇಷ್ಟವಾಗಲಿಲ್ಲ ಆದರೆ ನಾನು ಅವರನ್ನ ಗಣ್ಯರಂತೆ ಕರೆದು ಕುಳ್ಳಿರಿಸಿದೆ.
ಸಾಹೇಬರು ಇದರಿಂದ ನಿರಾಳರಾಗಿ ತಮ್ಮ ಮಾತು ಶುರು ಮಾಡಿದರು " ನನ್ನ ಮಗಳ ಮದುವೆ ಸಹಾಯ ಮಾಡ ಬೇಕು, ನಾನು ನೀವು ಅಣ್ಣತಮ್ಮ ಗೊತ್ತಲ್ಲ" ಅಂದರು, ಆಯಿತು ಎಷ್ಟು ಜನ ಊಟಕ್ಕೆ ಅಂದೆ 300 ಜನ ಆಗುತ್ತೆ ನಮ್ಮ ಜಾತಿಯವರು ಹುಡುಗನ ಕಡೆ ದಿಬ್ಬಣ ಸೇರಿ 70 ಜನ ಉಳಿದವರು ಹಿಂದು ಜನ ಅಂದರು, ಅಕ್ಕಿ ಕೊಡಿಸುತ್ತೇನೆ ಅಂದೆ ಅವರು ಒಪ್ಪಿದರು.
ಇದನ್ನೆಲ್ಲ ಆಲಿಸುತ್ತಿದ್ದ ಸಾಹೇಬರಿಗಿಂತ ಮೊದಲೇ ವ್ಯವಹಾರ ನಿಮಿತ್ತ ಕುಳಿತಿದ್ದವರಿಗೆ ಒಂದು ರೀತಿ ಕುತೂಹಲ ಉಂಟಾಯಿತು, ಅವರುಗಳು ಇವರಾರು ನೀವು ಇವರಿಗೆ ಹೇಗೆ ಸಹೋದರ? ಇವರ ಮಗಳ ಮದುವೆಗೆ ದಿಡೀರOತ ಸಹಾಯ ಯಾಕೆ ಮಾಡಲು ಒಪ್ಪಿದಿರಿ? ಅಂದರು.
ನಮ್ಮ ಅಜೀ ಅಬ್ಬಕ್ಕ ದ.ಕ. ಜಿಲ್ಲೆಯಿಂದ ಮಲೆನಾಡಿನ ಅಡಿಕೆ ತೋಟಕ್ಕೆ ಕೂಲಿಗಾಗಿ ಬಂದಾಗ ಕೆಲ ಕಾಲ ಹೊಸ ಕೊಪ್ಪದಲ್ಲಿ ಬಿಡಾರ ಮಾಡಿದಾಗ ಈ ಸಾಹೇಬರ ಮಾತಾ ಪಿತೃಗಳು ನೆರೆಯವರು ಹಾಗಾಗಿ ಇವರ ಏಕೈಕ ಮುಸ್ಲಿಂ ಕುಟು೦ಬ ನಮಗೆ ಆಪ್ತರು, ಇವರ ಹತ್ತಿರ ರಾಮಾಯಣ ಮಹಾಭಾರತದ ಬಗ್ಗೆ ಕೇಳಿ ಅಂದೆ, ಅವರ ಪ್ರಶ್ನೆಗೆ ಸಾಹೇಬರ ಉತ್ತರ ಕೇಳಿ ಆಶ್ಚಯ೯ ಪಟ್ಟರು.
ದಮ೯ಗಳ ಬಗ್ಗೆ ಮತ್ತು ಭಾರತ ಪಾಕಿಸ್ತಾನದ ಬಗ್ಗೆ, ರಾಮಾಯಣದ ಬಗ್ಗೆ ಅದರ ಸಾರಾ೦ಶ, ಬರೆದವರ ಬಗ್ಗೆ,ಮಹಾಭಾರತದ ಬಗ್ಗೆ ಈ ಮನುಷ್ಯನ ಜ್ಞಾನ ಕೇಳಿ ಎಲ್ಲರೂ ಇವರನ್ನ ಅಭಿನಂದಿಸಿದರು.
Comments
Post a Comment