ಜೇನು ಕೃಷಿ ವಿಶಿಷ್ಟ, ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೇಶವಪುರದವರಾದ ಕೃಷಿಕ ಸತ್ಯಣ್ಣ ಪರಿಣಿತರು.
ನಮ್ಮ ಮನೆಯಲ್ಲಿ ಎರಡು ಜೇನು ಕುಟುಂಬಗಳ ಪೆಟ್ಟಿಗೆಗಳನ್ನ ಸಾಗರದ ಜೇನು ಸಹಕಾರಿ ಸಂಘದ ಅಧ್ಯಕ್ಷರಾದ ಗೆಳೆಯ ನಾಗೇಂದ್ರ ಸಾಗರರಿಂದ ಖರೀದಿಸಿದೆ, ನಂತರ ಇದರಲ್ಲಿಡಲು ಜೇನು ಕುಟುಂಬಗಳನ್ನ ಈ ಸತ್ಯಣ್ಣನಿಂದ ಖರೀದಿಸಿದೆ.
ಸತ್ಯಣ್ಣ ಸ್ಥಳಿಯ ಜೇನು ತಜ್ಞ ಆದರೆ ಸದಾ ಮದ್ಯದ ಅಮಲಿನಲ್ಲಿ ಇರುತಾರಾದ್ದರಿಂದ ಅನೇಕರು ಇವರ ಮಾತು ಆಲಿಸುವುದಿಲ್ಲ ಆದರೆ ಸತ್ಯಣ್ಣ ಪ್ರಾಮಾಣಿಕ ಮತ್ತು ಜೇನಿನ ಬಗ್ಗೆ ಅಪಾರ ಅನುಭವ ಇರುವಾತ, ಅವರು ಎಷ್ಟು ಕುಡಿದು ಬಂದರೂ ನನ್ನ ಆಪೀಸಲ್ಲಿ ಅವರಿಗೆ ಸಿಗುವ ಗೌರವ ಮತ್ತು ಜೇನು ತಂದದ್ದು, ಅದರಿಂದ ಜೇನು ತೆಗೆಯುವುದು ನೋಡಿ, ನಮ್ಮ ಲಾಡ್ಜನ ಮಂಜುಳಮ್ಮ ಜೇನಿನ ಡಾಕ್ಟರ್ ಅಂತ ಸತ್ಯಣ್ಣನನ್ನ ಕರೆಯುತ್ತಾಳೆ ಯಾಕೆಂದರೆ ದನ ಮತ್ತು ನಾಯಿಗೆ ಚಿಕಿತ್ಸೆಗೆ ದನದ ಡಾಕ್ಟರ್ ಬರುತ್ತಾರೆ ಅದೇ ರೀತಿ ಜೇನಿಗೆ ಜೇನು ಡಾಕ್ಟರ್ ಹಾಗಾಗಿ ಸತ್ಯಣ್ಣ ನಮ್ಮಲ್ಲಿ ಎಲ್ಲಾ ಕೆಲಸದವರ ಬಾಯಲ್ಲಿ ಜೇನುಡಾಕ್ಟರ್ ಆಗಿದ್ದಾರೆ.
ಪ್ರತಿ ಮನೆಯಲ್ಲೂ ಎರೆಡು ಪೆಟ್ಟಿಗೆ ಜೇನು ಕೃಷಿ ಮಾಡಿದರೆ ಮನೆ ಬಳಕೆಗೆ ಪರಿಶುದ್ಧ ಜೇನುತುಪ್ಪ ಸಿಗುತ್ತದೆ, ಕನಿಷ್ಠ 10 ಜೇನು ಪೆಟ್ಟಿಗೆ ಇಟ್ಟರೆ ಮಾರಾಟವೂ ಮಾಡಬಹುದು.
Comments
Post a Comment