ಬೂದು ಗುಂಬಳದಲ್ಲಿ ಒಳಬಾಗ ತುರಿದು ಹಿಂಡಿ ನೀರನ್ನ ಕುಡಿದರೆ ಚಮ೯ ರೋಗ ಮತ್ತು ನರ ಸಂಬಂದಿ ರೋಗಕ್ಕೆ ಮದ್ದ೦ತೆ, ನೀರು ಹಿಂಡಿದ ನಂತರದ ತುರಿಯಿ೦ದ ಹಲ್ವಾ ಮಾಡಿ ಹಾಗು ಸಿಪ್ಪೆಯನ್ನ ಸಂಡಿಗೆ ಮಾಡುವ ಉತ್ತರ ಭಾರತದ ಜನತೆ ಇದರ ಪೂಣ೯ ಉಪಯೋಗ ಕಂಡಿದ್ದಾರೆ.
ನಮ್ಮ ಭಾಗದಲ್ಲಿ ಬೂದುಗುಂಬಳ ಅಂದರೆ ಭಾರೀ ಭಯ, ಭಕ್ತಿ. ಇದು ಮೇಲ್ ಜಾತಿಯವರು ಮಾತ್ರ ಬಳಸುವ ಪದಾಥ೯ ಅಂತ ಆಗಿಬಿಟ್ಟಿದೆ.
ನಮ್ಮ ಕಲ್ಯಾಣ ಮಂಟಪದಲ್ಲಿ ಬೂದುಗುಂಬಳ ಮದುವೆಯಲ್ಲಿ ಬಳಸುವ ವಿಚಾರದಲ್ಲಿ ಒಳ್ಳೆ ಚಚೆ೯ ಆಗುತ್ತೆ, ನಾನು ಬೂದುಗುoಬಳ ಕಡಿಮೆ ದರ ಅಂತ ಬರೆಸಿದರೆ, ಅಡುಗೆ ಭಟ್ಟರು ಒಂದು ಹುಳ ಬಿಟ್ಟಿರುತ್ತಾರೆ ಇದನ್ನ ನೀವೆಲ್ಲ ಬಳಸುವಂತಿಲ್ಲ ಅಂತ ಆದರೂ ಅವರ ಮಾತು ಕೇಳದೆ ಬಳಸಲು ತೀಮಾ೯ನಿಸಿದರೆ ಮದುವೆ ಮನೆ ಹಿರಿಯರಲ್ಲಿ ಇದು ಮಂಗಳ ಕಾಯ೯ ಬೂದು ಗು೦ಬಳ ಸರಿ ಅಲ್ಲ ಅಂದರೆ ಆಯಿತು ಬೂದುಗುಂಬಳಕ್ಕೆ ಗೇಟ್ ಪಾಸ್ ಸಿಕ್ಕ೦ತೆ ಈ ರೀತಿ ಶೂದ್ರರಲ್ಲಿ ಒಂದು ಭಯ ಹೊಕ್ಕಿದೆ.
ಈಗ ಮುಸ್ಲಿಂ ಜನರು ಬಿರಿಯಾನಿ, ಗೀ ರೈಸ್ ಜೊತೆಯ ದಾಲ್ ನಲ್ಲಿ ಬೂದುಗುಂಬಳ ಹಾಕಲು ಶುರು ಮಾಡಿದ್ದಾರೆ.
ಸೊರ್ಯಾಸೀಸ್ ಎ೦ಬ ತೀವ್ರ ಚಮ೯ದ ರೋಗದಿಂದ ಬಳಲುತ್ತಿದ್ದ ನನ್ನ ಕ್ಲಾಸ್ ಮೇಟ್ ಒಬ್ಬರು ಎಲ್ಲಾ ಚಿಕಿತ್ಸೆ ಮಾಡಿ ಹಣ ಸಮಯ ಹಾಳು ಮಾಡಿಕೊಂಡು ಹತಾಶರಾಗಿದ್ದರು ಆಗ ಆಯುವೆ೯ದ ವೈದ್ಯರ ಸಲಹೆಯಂತೆ ಬೂದುಗುಂಬಳದ ನೀರು ನಿತ್ಯ ಕುಡಿಯಲು ಪ್ರಾರಂಬಿಸಿ ರೋಗ ಮುಕ್ತರಾಗಿದ್ದಾರೆ.
29/November/2018
1995 ರ ಮೊದಲು ಹೊಸದಾಗಿ ಕೃಷಿ ಮಾಡುವ ಹುಮ್ಮಸ್ಸು ಹಾಗಾಗಿ ಸಿಗುತ್ತಿದ್ದ ಮಾಹಿತಿ, ಗಾಳಿ ಸುದ್ದಿಗಳ ಕೇಳಿ ದೊಡ್ಡ ಪ್ರಮಾಣದಲ್ಲಿ ಬೂದಗುಂಬಳ ಬೆಳೆಯಲು ಪ್ರಯತ್ನಿಸಿದ್ದೆ.
ಬೆಳೆ ಚೆನ್ನಾಗಿ ಬಂತು ಆದರೆ ಲೋಡುಗಟ್ಟಲೆ ಆಗಲಿಲ್ಲ, ಒಂದೆರೆಡು ಮೂರು ಟ್ರಾಕ್ಟರ್ ಅಷ್ಟು ಆಯಿತು.
ಆದರೆ ಇದನ್ನ ಖರೀದಿಸುವವರು ಯಾರು ಸಿಗಲಿಲ್ಲ, ಬೇಸಿಗೆ ಬಿಸುಲು ಪ್ರಾರಂಭವಾಗಿ ಬಳ್ಳಿ ಒಣಗಲು ಪ್ರಾರಂಭವಾದ್ದರಿಂದ ಕೊಯಿಲು ಮಾಡಿ ಗದ್ದೆಮನೆಯಲ್ಲಿ ಇಟ್ಟೆ.
ಎಲ್ಲರಿಗೂ ಉಚಿತವಾಗಿ ತೆಗೆದು ಕೊಂಡು ಹೋಗಿ ಅಂದರೂ ಆ ವಷ೯ ಎಲ್ಲರ ಮನೇಲೂ ಈ ಪಸಲು ಹೆಚ್ಚು ಅಂತ ತೆಗೆದುಕೊಳ್ಳಲಿಲ್ಲ.
ನಂತರ ಟ್ರಾಕ್ಟರ್ ಮಾಡಿಗೆ ಮಾಡಿ ನಮ್ಮ ರೈಸ್ ಮಿಲ್ ನಲ್ಲಿ ಹಾಕಿದೆ, ಅಕ್ಕಿ ಮಾಡಿಸಲು ಬಂದ ಎಲ್ಲರಿಗೂ ಕೊಡಲು ಹೇಳಿದೆ.
ಆದರೆ ಇದನ್ನ ಉಚಿತವಾಗಿ ಸ್ವೀಕರಿಸಲು ಅವರಾರು ಸಿದ್ದರಿಲ್ಲ, ಹತ್ತೊ ಇಪ್ಪತ್ತೊ ಪೈಸಾ ಕೊಟ್ಟು ಒಯ್ ಬೇಕಾಗಿ ವಿನಂತಿ ಮಾಡಿ ಒಂದು 3 ತಿಂಗಳಲ್ಲಿ ಖಾಲಿ ಮಾಡಿದೆ.
ಡಬ್ಬಿಗೆ ಹಾಕಿದ ಪೈಸೆಗಳು ನೂರು ರೂಪಾಯಿಗೆ ಕೂಡ ತಲುಪಲಿಲ್ಲ.
Comments
Post a Comment