Skip to main content

#ಮುಂಗಾರು ಪತ್ರಿಕೆ ಮತ್ತು ವಡ್ಡಸೆ೯ ರಘುರಾಮ ಶೆಟ್ಟರ ಬೇಟಿಯ ನೆನಪು#


  ಮುಂಗಾರು ನೆನಪು ಹೇಗೆಂದರೆ ನನ್ನ ಅಣ್ಣ ಅದರ ವರದಿಗಾರ ಮತ್ತು ಆನಂದಪುರಂ (ಸಾಗರ ತಾ)ನ ಪತ್ರಿಕಾ ಏಜೆಂಟರೂ ಆಗಿದ್ದರು.
ಕಾಗೋಡು ತಿಮ್ಮಪ್ಪಾ ಬಂಗಾರಪ್ಪ ಮುಖ್ಯಮಂತ್ರಿ ಆದಾಗ ಹೌಸಿಂಗ್ ಬೋಡ್೯ ಅಧ್ಯಕ್ಷರಾಗಿದ್ದರು ನಮ್ಮ ಊರಲ್ಲಿ ಪಾದರ್ ಜೋಸ್ ಎ೦ಬುವವರು ಗೋಕುಲ್ ಪಾರಂ ಅಂತ ಮಾಡಿದ್ದರು ಅಲ್ಲಿನ ಕೋರ್ ಕಮಿಟಿಯಲ್ಲಿ ನಾನು, ಪ್ರಪುಲ್ಲಚಂದ್ರರು, ಡಾ.ವಿಗ್ನೇಶ್ ಎಲ್ಲಾ ಇದ್ದೆವು, ಅಲ್ಲಿ ವಿದ್ಯುತ್ ಸಂಪಕ೯ ಮಾಡಲು ಟ್ರಾನ್ಸ ಪಾರಂ ಕೊರತೆಯಿ೦ದ ಆಗಿರಲಿಲ್ಲ ಹಾಗಾಗಿ ಸ್ಥಳಿಯ ಶಾಸಕರು ಆಗಿದ್ದ ಕಾಗೋಡರನ್ನ ಬೆಂಗಳೂರಿನ ಅವರ ಹೌಸಿಂಗ್ ಬೋಡ್೯ ಕಚೇರಿಗೆ ಹೋಗಿದ್ದೆ ಅಲ್ಲಿ ವಡ್ಡಸೆ೯ ಕೂಡ ಕುಳಿತಿದ್ದರು , ನನ್ನ ಮನವಿ ಕೇಳಿದ ಕಾಗೋಡು ಇದು ಕ್ರಿಶ್ಚಿಯನ್ ಸಂಸ್ಥೆ ಅಂತ ರಾಗ ಎಳಿದರು ಆಗ ನಾನು ಹಿಂದೂ ಸ೦ಸ್ಥೆಗಿಂತ ಹೆಚ್ಚಿನ ಸೇವಾ ಬಾವನೆ ಈ ಕ್ರಿಶ್ಚಿಯನ್ ಸಂಸ್ಥೆಗೆ ಇರುವುದರಿಂದ ತಕ್ಷಣ ಟ್ರಾನ್ಸ ಪಾಮ೯ರ್ ಕೊಡಿಸ ಬೇಕು ಅಂದಾಗ ವಡ್ಡಸೆ೯ಯವರು ಅದು ಸತ್ಯ ಎಂದು ಧ್ವನಿಗೂಡಿಸಿದಾಗ ಕಾಗೋಡು ಮೌನವಾಗಿದ್ದು ನೆನಪಾಯಿತು.

Comments