Skip to main content

Blog number 3418. ಇತಿಹಾಸ ಸಂಶೋದಕ ರಮೇಶ್ ಹಿರೇಜಂಬೂರು

#ನಿನ್ನೆಯ_ಸಂಜೆ_ಅವಿಸ್ಮರಣೀಯಗೊಳಿಸಿದ

#ಇತಿಹಾಸ_ಸಂಶೋಧಕ_ರಮೇಶ್_ಹಿರೇಜಂಬೂರ್


#ನಾನು_ಇವರ_ಅಭಿಮಾನಿ.

#historian #rameshhirejamburu #kadamba #talagunda #kannada #shilashasana

  ನಿನ್ನೆ ಸಂಜೆ ರಮೇಶ್ ಹಿರೇಜಂಬೂರ್ ನನ್ನ ಕಛೇರಿಗೆ ಬಂದಿದ್ದರು ಇದು ನನ್ನ ಅವರ ಮೊದಲ ಮುಖತಃ ಬೇಟಿ. 

  ಶಿವಮೊಗ್ಗ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕರಾದ  ಇವರ ಪೇಸ್ ಬುಕ್ ನ ಎಲ್ಲಾ ಲೇಖನ ತಪ್ಪದೆ ಓದುತ್ತೇನೆ ನಾನು ಇವರ ಸಂಶೋದನಾ ಲೇಖನಗಳ ಅಭಿಮಾನಿ.

   ರಮೇಶ್ ಹಿರೇಜಂಬೂರ್ ಮತ್ತು ನವೀನ್ ಶಿರಾಳಕೊಪ್ಪ ಇವರಿಬ್ಬರು ತಾಳಗುಂದದ ಮೊದಲ ಕನ್ನಡ ಶಾಸನದ ಸಂಶೋಧನೆಯಲ್ಲಿ ಹೆಚ್ಚು ಶ್ರಮವಹಿಸಿದವರು ಇದಕ್ಕಾಗಿ ರಾಜ್ಯದ ಕನ್ನಡಿಗರು ಇವರನ್ನು ಅಭಿನಂದಿಸಬೇಕು.

   ನಿನ್ನೆಯ ಸಂಜೆ ನನ್ನ ಕಛೇರಿಯಲ್ಲಿ ಜಿಲ್ಲೆಯ ಇತಿಹಾಸದ ವಿಚಾರವಾಗಿ ತುಂಬಾ ಹೊತ್ತು ಮಾತಾಡಿದೆವು ಇವರ ಪತ್ನಿ ತವರೂರು ಹೊಸನಗರದ ಸೋನಲೆಗೆ ಹೊರಡುವ ತನಕ.

     ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಹಿಂದೆಯೇ  ಓದಿದ್ದಾರೆ, ಆ ಪುಸ್ತಕದ ವಿಚಾರವಾಗಿ ಕೆಲವು ಕಂತುಗಳ ನನ್ನ ಸಂದರ್ಶನ ಪೇಸ್ ಬುಕ್ ನಲ್ಲಿ ಪ್ರಕಟಿಸಲಿದ್ದಾರೆ.

   ಚಹಾ ಮತ್ತು ಮಿರ್ಚಿ ಬೊಂಡದ ಆತಿಥ್ಯ ನೀಡಿದೆ ಹೊರಡುವಾಗ ನನ್ನ ಸಣ್ಣ ಕಥೆಗಳ #ಬಿಲಾಲಿ_ಬಿಲ್ಲಿ_ಅಭ್ಯಂಜನ ಕಥಾ ಸಂಕಲನ ನೀಡಿ ಸೆಲ್ಪಿ ತೆಗೆದುಕೊಂಡು ಬಿಳ್ಕೊಟ್ಟೆ.
   
   ನನ್ನ ಒಂದು ಪ್ರತಿಪಾದನೆ ಮತ್ತು ಪ್ರಯತ್ನ ಏನೆಂದರೆ... ಪ್ರತಿ ಊರಿಗೂ ಇತಿಹಾಸ ಇದೆ, ಅಲ್ಲಿ ಇತಿಹಾಸದ ಕಥೆ ಹೇಳುವ ಶಿಲಾಶಾಸನ, ಸ್ಮಾರಕ, ಕೋಟೆ ಕೊತ್ತಳ ಮತ್ತು ಪುರಾತನ ದೇವಾಲಯಗಳಿದೆ ಅದನ್ನು ಸ್ಥಳಿಯರಿಗೆ ತಿಳಿಸುವ ದಾಖಲಿಸುವ ಕೆಲಸ ಆಗಬೇಕಾಗಿದೆ.

   ಇದನ್ನು ಸ್ಥಳಿಯ ಆಸಕ್ತ ಶಿಕ್ಷಕರಿಂದ ಮಾತ್ರ ಸಾಧ್ಯವಿದೆ ಅವರು ಅದನ್ನು ತಮ್ಮ ವಿದ್ಯಾರ್ಥಿಗಳ ಮೂಲಕ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬಹುದಾಗಿದೆ ಇದಕ್ಕೆ ಪ್ರೇರಣೆಯಾಗಿರುವ ಕದಂಬ ಇತಿಹಾಸದ ಸಂಶೋದಕರಾದ ರಮೇಶ್ ಹಿರೇಜಂಬೂರ್ ಮತ್ತು ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ ಇತಿಹಾಸ ಸಂಶೋದಕರಾದ ಲೋಕರಾಜ ಜೈನರು ನನಗೆ ಮಾದರಿ ಆಗಿದ್ದಾರೆ.

  ರಮೇಶ್_ಹಿರೇಜಂಬೂರ್ ಶಿಕಾರಿಪುರ ತಾಲ್ಲೂಕಿನ ಹಿರೇಜಂಬೂರಿನವರು ಇವರು "ಹಿರೇಜಂಬೂರು ಸತ್ಯಕ್ಕ" ಪುಸ್ತಕ ಬರೆದು ಪ್ರಕಟಿಸಿದ್ದಾರೆ, ಶಾಸನಗಳ ಲಿಪಿ ಓದುವ ಕೆಲವೇ ಕೆಲವು ಸಂಶೋಧಕರಲ್ಲಿ ಇವರೂ ಒಬ್ಬರಾಗಿದ್ದಾರೆ.

  ತಾವು ಶಿಕ್ಷಕರಾಗಿ ಕೆಲಸ ಮಾಡುವ ಶಾಲೆಯಲ್ಲೂ ಅತ್ಯುತ್ತಮ ಶಿಕ್ಷಕರೆಂಬ ಹೆಸರುಗಳಿಸಿದ್ದಾರೆ, ಕನ್ನಡ ಇಂಗ್ಲೀಷ್ ಬಾಷಾ ಪಾಂಡಿತ್ಯ ಹೊಂದಿರುವ ರಮೇಶ್ ಹಿರೇಜಂಬೂರು ಇತಿಹಾಸ ಸಂಶೋದನೆಯ ಕಾರ್ಯದಲ್ಲಿ ಇನ್ನೂ ಎತ್ತರೆತ್ತರಕ್ಕೆ ಏರಲಿ ಎಂದು ಹಾರೈಸುತ್ತೇನೆ.

    ಇತ್ತೀಚಿಗೆ ಇವರು ಮಲೆನಾಡನ ಅಡಿಕೆಯ ಬಗ್ಗೆ ಹತ್ತನೆ ಶತಮಾನದ ಶಾಸನಗಳಲ್ಲಿನ ಉಲ್ಲೇಖದ ಲೇಖನ ಹೆಚ್ಚು ವೈರಲ್ ಆಗಿತ್ತು.

  ತಾಳಗುಂದದ_12ನೇ_ಶತಮಾನದ ಶಾಸನದಲ್ಲಿಯೂ ಅಡಿಕೆ ತೋಟದ ಉಲ್ಲೇಖವಿದೆ, ಕ್ರಿ.ಶ. 1203ರಲ್ಲಿ  ಬಂದಳಿಕೆಯ ಶಾಸನವೊಂದರಲ್ಲಿ ಶಾಂತಿನಾಥ ದೇವರಿಗೆ 500 ಅಡಿಕೆಮರವುಳ್ಳ ತೋಟವನ್ನು ದಾನ ಮಾಡಿದ ಉಲ್ಲೇಖವಿದೆ.
   #ಬಳ್ಳಿಗಾವಿಯ_ಕ್ರಿ_ಶ_1156ರ_ಅವಧಿಯ_ಶಾಸನವೊಂದರಲ್ಲಿ ಶ್ರೀ ಕೇದಾರೇಶ್ವರ ದೇವರ ತೋಟದಲ್ಲಿ ಬೆಳೆಯುವ ಗೋಟು ಅಡಿಕೆಯ ಮೇಲಿನ ಕಂದಾಯವನ್ನು ದೇವರ ಆರಾಧನೆಗಾಗಿ ದಾನವಾಗಿ ನೀಡಲಾಗಿದೆ.

    10ನೇ ಶತಮಾನದಲ್ಲಿ ನಮ್ಮ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿ ಊರಿನ ಅಡಿಕೆ ಮತ್ತು ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತೆಂಬ ಐತಿಹಾಸಿಕ ದಾಖಲೆ ನೀಡಿದವರು ನಮ್ಮ ಜಿಲ್ಲೆಯ ಇತಿಹಾಸ ಸಂಶೋಧಕರಾದ ರಮೇಶ್ ಹಿರೇಜಂಬೂರ್.

  ಅವರ ಸಂಶೋದನಾ ಲೇಖನಗಳು ಪುಸ್ತಕವಾಗಿ ಹೊರಬರಬೇಕು ಅದಕ್ಕೆ ಆಸಕ್ತ ಪುಸ್ತಕ ಪ್ರಕಾಶಕರು ಮುಂದೆ ಬರಬೇಕು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...