Skip to main content

Blog number 3421. ಮರಕಿಣಿ ನಾರಾಯಣ ಮೂರ್ತಿ

#ಮರಕಿಣಿ_ನಾರಾಯಣಮೂರ್ತಿಗಳು

#ನಮ್ಮಿಬ್ಬರ_ಮುಖತಃ_ಬೇಟಿಗೆ_ಮಹೂರ್ತ_ಯಾವಾಗ ?


#marakininarayanamurthy #facebookpost #tkrameshshetty #ninasam #kannada #drama #yakshgana #tvserial

   ಸದಾ ನಗುಮೊಗದ ಕನ್ನಡದ ಸಾಹಿತಿಗಳಿಗೆ, ಯಕ್ಷಗಾನ - ನಾಟಕ - ದಾರಾವಾಹಿಗಳ ಲೋಕದವರಿಗೆ ಚಿರಪರಿಚಿತರು ಮರಕಿಣಿ ನಾರಾಯಣ ಮೂರ್ತಿಯವರು.

 ಪ್ರತಿ ವರ್ಷ ನಮ್ಮ ಸಾಗರ ತಾಲ್ಲೂಕಿನ ಹೆಗ್ಗೋಡಿನ ನಿನಾಸಂ - ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಕಾರ್ಯಕ್ರಮಕ್ಕೆ ತಪ್ಪದೆ ಬಂದು ಹೋಗುತ್ತಾರೆ.

    ಆದರೂ ನಮ್ಮಿಬ್ಬರ ಬೇಟಿಗೆ ಮಹೂರ್ತ ಮೂಡಿಬಂದಿಲ್ಲ ಆದ್ದರಿಂದ ನಾನು ಅವರಿಗೆ ನನ್ನ ಸಂದೇಶ ಕಳಿಸಿದ್ದೇನೆ ...

"ಸರ್ ನಾನು ನಿಮ್ಮ ಅಭಿಮಾನಿ ನನಗೂ ನಿಮ್ಮ ಅನಿರೀಕ್ಷಿತ ಬೇಟಿಯಲ್ಲಿ ಮುಖಾಮುಖಿ ಆಗಲಾಗದ್ದು ಬೇಸರ ಅನ್ನಿಸಿತು, ಅನೇಕ ವರ್ಷದಿಂದ ಬೇಟಿಯ ನಿರೀಕ್ಷೆ ಮುಂದು ಮುಂದು ಹೋಗುತ್ತಿದೆ ಆದ್ದರಿಂದ ಮುಂದಿನ ಬಾರಿ ಹೀಗೆ ದಿಡೀರ್ ಬರಬೇಡಿ,ಒಂದು ದಿನ ನನ್ನ ಅತಿಥಿ ಆಗಿ ಉಳಿದು ಹೋಗುವಂತೆ ಬಿಡುವು ಮಾಡಿಕೊಂಡು ಬನ್ನಿ ಮತ್ತುಬರಲೇ ಬೇಕು" ಅಂತ.

    ನನ್ನ ಅಣ್ಣನಂತೆ ಇರುವ ಇವರು ನನ್ನಂತೆ ಪಂಚೆದಾರಿಗಳು ಆದರೆ ಬಾಯಿ ತುಂಬಾ ನನಗೆ "ಅರುಣಣ್ಣ" ಅನ್ನುತ್ತಾರೆ ಅದೊಂದು ತರ ಅಪ್ಯಾಯವಾಗಿ ನನಗೆ ಕೇಳುತ್ತದೆ ಮತ್ತು ಇಷ್ಟ ಆಗಿದೆ, ನಮ್ಮಿಬ್ಬರನ್ನ ಗೆಳೆಯರನ್ನಾಗಿ ಮಾಡಿದ ಪೇಸ್ ಬುಕ್ ಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ.

   ಅವರ Facebook post ಈ ರೀತಿ ಬರೆದಿದ್ದಾರೆ ನೋಡಿ...
https://www.facebook.com/share/14osjqq227/

#ಆನಂದಪುರದ_ಮಲ್ಲಿಕಾ_ವೆಜ್_ಮತ್ತು_ಹೊಂಬುಜ_ರೆಸಿಡೆನ್ಸಿಯ_Arun_Prasad.
ಪ್ರಕೃತಿ, ಪರಿಸರ, ಇತಿಹಾಸ, ಸಾಮಾಜಿಕ, ರಾಜಕೀಯ, ಸಾಹಿತ್ಯ.... ಹೀಗೆ ಎಲ್ಲದರ ಬಗ್ಗೆಯೂ  ಅಧ್ಯಯನಪೂರ್ಣವಾಗಿಯೂ ಆಕರ್ಷಣೀಯವಾಗಿಯೂ ಬರೆಯಬಲ್ಲವರು. ಕಾದಂಬರಿ ಮತ್ತು ಕಥಾ ಸಂಕಲನವನ್ನು ತಂದಿರುವ ಅರುಣಣ್ಣ ಅವರ ಚಂಪಕರಾಣಿ ಕಾದಂಬರಿ ತುಂಬಾ ಇಷ್ಟವಾಯಿತು. ವರಂಗದಲ್ಲಿರುವಂತೆ ಕೆರೆ ಮಧ್ಯದಲ್ಲಿರುವ ಬಸದಿ, ದೇವಸ್ಥಾನಗಳು, ಕೋಟೆ, ಇಕ್ಕೇರಿ...ಆನಂದಪುರ ಆಸುಪಾಸಿನಲ್ಲಿ ಕನಿಷ್ಠ ಎರಡು ದಿನಗಳಾದರೂ ಬೇಕು. ಆ ದಾರಿಯಾಗಿ ಸಿದ್ಧಾಪುರಕ್ಕೆ ಮದುವೆಯೊಂದಕ್ಕೆ ಹೋಗುವಾಗ ಅವರ 'ಮಲ್ಲಿಕಾ ವೆಜ್' ಗೆ ಹೋಗಿ ಕಾಣದಿದ್ದರೆ ಹೇಗೆ. (ತೀರ್ಥಹಳ್ಳಿಯಲ್ಲಿ Tk Ramesh Shettyಯವರು ಅವರಿಗೆ ಫೋನ್ ಮಾಡ್ತೇನೆಂದಾಗ ಖಡಾಖಂಡಿತವಾಗಿ ಬೇಡವೆಂದೆ)
ಅವರಿಲ್ಲದ ಕಾರಣ ನಿರಾಸೆಯಾದರೂ ಫೋನಲ್ಲಿ ಮಾತಾಡಿ ಸಮಾಧಾನ ಪಟ್ಟುಕೊಂಡೆ. ಯಾವ ತಿಂಡಿ ಅಂತ ಹೇಳಲು ಅವಕಾಶ ಮಾಡಿ ಕೊಡದೆ ಮೂಡೆ ಕೊಟ್ಟಿಗೆ(ಕಡುಬು)ಯನ್ನು ಇಳಿಸಲು, ಅವರ ಸೌಜನ್ಯ ಭರಿತ ಸಿಬ್ಬಂದಿಯವರಿಗೆ ಹೇಳಿ ವ್ಯವಸ್ಥೆ ಮಾಡಿದರು. ಸೋಮೇಶ್ವರದಲ್ಲಿ ತಿಂಡಿ ತಿಂದ ಕಾರಣದಿಂದ ಮತ್ತು ಮದುವೆಯೂಟ ಹೊಡೆಯಲಿರುವುದರಿಂದಲೂ ಬೇರೇನನ್ನೂ ತಿನ್ನಲಾಗಲಿಲ್ಲ😩😁. ಬಿಲ್ಲು ಎತ್ತೋಣವೆಂದರೆ ಕೌಂಟರಿನಲ್ಲಿದ್ದವರು ಕೊಡದೆ ಪ್ರೀತಿಯ ಋಣಭಾರವನ್ನು ಹೊರಿಸಿದವರು ಅರುಣಣ್ಣ. ರೆಸಿಡೆನ್ಸಿಯ ಗೋಡೆಯನ್ನು ಹಸೆಚಿತ್ರದಿಂದ ಎಷ್ಟು ಚೆಂದಕ್ಕೆ ಸಿಂಗರಿಸಿದ್ದಾರೆ👌. ಅವರ ಲೇಖನಗಳನ್ನು ರೆಗ್ಯುಲರಾಗಿ ಓದುವ ನಾನು ಅವರ ಫ್ಯಾನ್. ಇನ್ನು ಯಾವಾಗಲೋ ಏನೋ ಭೇಟಿ. (ವಾಪಾಸಾಗುವಾಗ ಬೇರೆ ದಾರಿಯಾಗಿ ಬಂದ ಕಾರಣ ಕಾಣಲಾಗಲಿಲ್ಲ)
🙏💕❤️🌿.

Comments