Skip to main content

#Blog number 3415. ಅಡಿಕೆ ಹಾಳೆ ಉತ್ಪನ್ನ ತಯಾರಿಕರಿಗಾಗಿ

#ಕುಮಾರ_ಸುಬ್ರಮಣ್ಯ_ಮುಳಿಯಾಳ


#ದೇಶ_ವಿದೇಶಗಳ_ಔಷದ_ಉತ್ಪಾದನೆ_ಮಾರಾಟ_ಕ್ಷೇತ್ರದಲ್ಲಿ_ದೊಡ್ಡ_ಹೆಸರು

#ಅಡಿಕೆ_ವಿಶ್ವಸಂಸ್ಥೆ_ನಿರ್ಬಂದದ_ಬಗ್ಗೆ_ಅನೇಕ_ವರ್ಷದಿಂದ_ಜನಜಾಗೃತಿ_ಲೇಖನ_ಪ್ರಕಟಿಸುತ್ತಿದ್ದಾರೆ

#ಅಮೇರಿಕಾ_ಅಡಿಕೆ_ಹಾಳೆ_ಉತ್ಪನ್ನ_ಆಮದು_ಬ್ಯಾನ್_ಮಾಡಿದೆ

#ಆಡಿಕೆಹಾಳೆ_ಉತ್ಪನ್ನ_ತಯಾರಕರಿಗೆ_ಅವರು_ನೀಡಿದ_ಮಾರ್ಗದರ್ಶನದ_ಲೇಖನ_ಇಲ್ಲಿದೆ

#arecanut #malenadu #westernghat #karnataka #FDA #palmleafdinnerware #arecacatachu 

ಅಡಿಕೆ ಹಾಳೆಯ ಸಂಬಂದಿತ ಉತ್ಪನ್ನಗಳ ರಫ್ತ್ತುನಿಷೇಧ ದಿಂದ ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳು 
****************************** 
ಅಡಿಕೆಯನ್ನು ಜಾಗತಿಕ ಮನ್ನಣೆಯನ್ನು ಪಡೆದ Food and Drug Administration (FDA) ಯು ಹಾನಿಕಾರಕ ಪಟ್ಟಿಯಲ್ಲಿ ಸೇರಿಸಿದ್ದಲ್ಲದೆ USA ಅಡಿಕೆ ಹಾಳೆಯ ಸಹಿತ  ಸಂಬಂದಿತ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ.ಇದು ಹಂತ ಹಂತವಾಗಿ ಅಡಿಕೆಯನ್ನು ನಿರ್ಬಂಧಿತ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸುವ ಮುಂದಿನ ಹಂತದ ಬೆಳವಣಿಗೆಯಂತೆ ತೋರುತ್ತದೆ.ಈಗಾಗಲೇ ಅಡಿಕೆ ನಿಷೇಧದ ಬಗ್ಗೆ WHO ಬೇರೆ ಬೇರೆ ರಾಜ್ಯಗಳ ಅಭಿಪ್ರಾಯವನ್ನು   ಕೇಳಿದ್ದನ್ನು ನಾವು ಗಮನಿಸಬಹುದು. 

  ಅಡಿಕೆಯ ಬಹುಪಯೋಗಿ ಅನುಕೂಲತೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಸರಿಯಾದ ಕ್ಲಿನಿಕಲ್ ಟ್ರಯಲ್ ನಡೆಯದೆ ಇದ್ದುದರ ಪರಿಣಾಮವನ್ನು ನಾವು ಈಗ ಕಾಣುತ್ತಿದ್ದೇವೆ.ಕೇವಲ ನಮ್ಮ ಊರುಗಳಲ್ಲಿ ನಡೆದ ಕಮ್ಮಟಗಳಾಗಲಿ ,ಇಲ್ಲಿಯ ಆವಿಷ್ಕಾರಗಳಾಗಲಿ  ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದಾಗ ಮಾತ್ರ ಅದು ಮೌಲ್ಯವನ್ನು ಪಡೆಯುತ್ತದೆ ಮತ್ತು ಗುರುತಿಸಲ್ಪಡುತ್ತದೆ.ಕೇವಲ ನಮ್ಮ  ಪುರಾತನ ಆಯುರ್ವೇದ ಗ್ರಂಥಗಳಲ್ಲಿವೆ ಎಂಬುದು ಮಾನ್ಯತೆಯನ್ನು ಪಡೆಯುವುದಿಲ್ಲ ಅದು ಸರಿಯಾದ ರೀತಿಯಲ್ಲಿ ಪರೀಕ್ಷೆಗೊಳಪ್ಪಟ್ಟು ನಿರೂಪಿಸಲ್ಪಡಬೇಕು.ಆದರೆ ನಾವು ಹೇಳಿಕೆಗಳಿಗೆ , ಮಾಧ್ಯಮ ಪ್ರಚಾರಗಳಿಗೆ, ವದಂತಿಗಳಿಗೆ, ನಮ್ಮೂರ ಜಗಲಿಯ ಚರ್ಚೆಗಳಿಗೆ ಸಾಕ್ಷಿಗಳಾಗಿ ಈಗ ನಿಷೇಧದ ಅಪಾಯದ ಅಂಚಿನಲ್ಲಿ ಬಂದು ನಿಂತಿದ್ದೇವೆ.

   ಈ ಸಂದರ್ಭದಲ್ಲಿ ಅಡಿಕೆ ಹಾಳೆಗಳ ರಫ್ತಿನಿಂದಾಗಿ ಭಾರತದ ಮಾರುಕಟ್ಟೆ ಮೇಲೆ ಅತಿ ಹೆಚ್ಚಿನ ಪರಿಣಾಮ ಆಗದೆ ಇದ್ದರೂ ಕೆಲವೊಂದು ಮಾರುಕಟ್ಟೆ ಅಪಾಯವನ್ನು ಅಲ್ಲಗಳೆಯುವಂತಿಲ್ಲ .ಈ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. 
ಅಡಿಕೆ ಹಾಳೆ ಉತ್ಪನ್ನಗಳ ದೇಶೀಯ ಮಾರುಕಟ್ಟೆಯ ಅಂದಾಜು ಮೌಲ್ಯವು ₹800 ಕೋಟಿ – ₹1,000 ಕೋಟಿ  ನಡುವೆ ಇರಬಹುದು.

   ಅಡಿಕೆ ಹಾಳೆಯಿಂದ ತಯಾರಿಸಲಾದ ಡಿನ್ನರ್‌ವೇರ್‌ಗಳಿಗೆ (ತಟ್ಟೆ, ಬಟ್ಟಲು, ಕಪ್, ಚಮಚ, ಬಾಕ್ಸ್) ಭಾರತದ 
ಈ ಮಾರುಕಟ್ಟೆ ಪ್ರಾಥಮಿಕವಾಗಿ ಪರಿಸರ ಸ್ನೇಹಿ, ಬಯೋಡೀಗ್ರೇಡಬಲ್ ಮತ್ತು ಕಂಪೋಸ್ಟಬಲ್ ಪರ್ಯಾಯಗಳGrowing consumer interest‌ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದೆ.

   ಅಡಿಕೆ ಹಾಳೆಯ ಪ್ರಮುಖ ಬಳಕೆದಾರರು:
ಮದುವೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು
ಎಕೋ-ರೆಸ್ಟೋರೆಂಟ್‌ಗಳು, ಕ್ಯಾಫೆಗಳು
ಆಹಾರ ಸರಬರಾಜು ಕೇಂದ್ರಗಳು (catering units)
ಇ-ಕಾಮರ್ಸ್ ಗ್ರಾಹಕರು (Amazon, Flipkart, BigBasket)
ಆಯುಷ್, ಯೋಗ ಮತ್ತು ಜೈನ ಆಹಾರ ಕೇಂದ್ರಗಳು.

   ಭಾರತೀಯ ಮಾರುಕಟ್ಟೆಯ ಮೇಲೆ FDA ನಿಷೇಧದ ಪರಿಣಾಮಗಳು.

(A) #ನಕಾರಾತ್ಮಕ_ಪರಿಣಾಮಗಳು:
• ಗ್ರಾಹಕರು ಮತ್ತು ವ್ಯಾಪಾರಿಗಳು  ಅಡಿಕೆ  ಉತ್ಪನ್ನಗಳ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು – “ಅಮೆರಿಕದಲ್ಲಿ ನಿಷೇಧ ಇದ್ರೆ ನಾವು ಏಕೆ ಉಪಯೋಗಿಸಬೇಕು?” ಎಂಬ ಭಾವನೆ ಹೆಚ್ಚಬಹುದು.
• ಇ-ಕಾಮರ್ಸ್ ವೇದಿಕೆಗಳು (ಅಮೆಝಾನ್, ಫ್ಲಿಪ್‌ಕಾರ್ಟ್) ಈ ಉತ್ಪನ್ನಗಳ ಮೇಲೆ ತಾತ್ಕಾಲಿಕ ನಿಯಂತ್ರಣ ಹೇರಬಹುದು.
• ರಫ್ತಿಗೆ ನಂಬಿಕೊಂಡಿದ್ದ ಘಟಕಗಳು ಈಗ ದೇಶೀಯ ಮಾರಾಟದ ಮೇಲೆ ಅವಲಂಬಿಸಬೇಕಾಗುತ್ತದೆ. ಇದರಿಂದ ದರ ಕುಸಿತ ಸಂಭವಿಸಬಹುದು.

(B) #ಸಕಾರಾತ್ಮಕ_ಪರಿಣಾಮಗಳು (ಸಾಧ್ಯತೆ):
• ಬಾಂಬೂ, ಶುಗರ್‌ಕೇನ್ ಬ್ಯಾಗಾಸ್, ಜೋಳದ ಢಿಪ್ಪಿ, ಇತ್ಯಾದಿ ಮೂಲಗಳ ಡಿನ್ನರ್‌ವೇರ್‌ಗಳಿಗೆ ಬೇಡಿಕೆ ಹೆಚ್ಚಾಗಬಹುದು.
• ಸ್ಥಳೀಯ ಸರ್ಕಾರಗಳು BIS/FSSAI ಮೂಲಕ ಗುಣಮಟ್ಟದ ಪ್ರಮಾಣೀಕರಣಗಳನ್ನು ಕಡ್ಡಾಯಗೊಳಿಸಬಹುದು.
• ಅಡಿಕೆ ಹಾಳೆ ಉತ್ಪನ್ನ ತಯಾರಕರು ಈಗ ಹೆಚ್ಚಿನ ಶುದ್ಧೀಕರಣ, ಟೋಕ್ಸಿನ್ ಟೆಸ್ಟಿಂಗ್ (Lab Certification) ಗಳು ಮಾಡಿಸಿ ಮುಕ್ತ ಮಾರುಕಟ್ಟೆಗೆ ತಯಾರಾಗಬೇಕು.

  #ಉದ್ಯಮದ_ಮುಂದಿನ_ಬೆಳವಣಿಗೆ :
• Lab certification/GRAS Test Reports ಅನ್ನು ಭಾರತೀಯ ಪ್ರಯೋಗಾಲಯಗಳಿಂದ ಪಡೆಯುವುದು.
• Export Market Diversification: ಅಮೆರಿಕಾ ಬದಲು ಯುರೋಪ್, ಮಧ್ಯಪೂರ್ವ, ಏಷ್ಯಾ ಕಡೆ ಗಮನ ಹರಿಸುವುದು.
• Indian eco-conscious branding – “Tested Safe in Indian Labs” ಮುಂತಾದ ಲೇಬಲಿಂಗ್.
• Alternate Material Integration – ಬಾಂಬೂ, ಪ್ಲಾಂಟ್‌ ಸ್ಟಾರ್ಚ್ ಮಿಶ್ರಣ ಪ್ಯಾಕೇಜಿಂಗ್‌ ಆರಂಭಿಸುವುದು.
ಇಷ್ಟೆಲ್ಲಾ ಇದ್ದರೂ ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ   ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ಸಂಸ್ಥೆಗಳ ನೆರವಿನೊಂದಿಗೆ  ಕ್ಲಿನಿಕಲ್ ಟ್ರಯಲ್ ಮಾಡುವುದರ ಮೂಲಕ ಕ್ಯಾನ್ಸರ್ ಕಾರಕ ಎಂಬ ಅಂಶವನ್ನು ಅಲ್ಲಗಳೆಯಲಾಗದಿದ್ದರೂ ಬಹುಪಯೋಗಿ ಪ್ರಯೋಜನಗಳನ್ನು ಸ್ಥಾಪಿಸಿ ಮನವರಿಕೆ ಮಾಡುವುದರ ಮೂಲಕ ಅಡಿಕೆಯ ಮಾನವನ್ನು ಉಳಿಸಿಕೊಳ್ಳಬಹುದು.

✍️ಕುಮಾರ ಸುಬ್ರಹ್ಮಣ್ಯ ಮುಳಿಯಾಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...