Skip to main content

Blog number 3420. ಅಡಿಕೆ ಇತಿಹಾಸದ ಶಾಸನಗಳಲ್ಲಿ

#ಅಡಿಕೆ

#ಹತ್ತನೆ_ಶತಮಾನದಲ್ಲಿನ_ಶಾಸನಗಳಲ್ಲಿ_ಅಡಿಕೆ_ಉಲ್ಲೇಖ
#ಈಗಿನ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಹಳ್ಳಿ

#ಹೊನ್ನಾಳಿ_ತಾಲ್ಲೂಕಿನ_ನ್ಯಾಮತಿಯ_ಅಡಿಕೆಗೆ_ಹೆಚ್ಚು_ಬೇಡಿಕೆ_ಇತ್ತು.

#ಸಂಶೋದಕರಾದ_ರಮೇಶ್_ಹಿರೇಜಂಬೂರ್_ಶಾಸನಗಳಲ್ಲಿ_ಅಡಿಕೆ_ಉಲ್ಲೇಖದ_ಬಗ್ಗೆ_ಬರೆದಿದ್ದಾರೆ.

#areca #rameshhirejamburu #centuries #history #kappanalli #nyamathi

     ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ.

  ಅವರು ಅಡಿಕೆಗಳ ಉಲ್ಲೇಖ 10 ನೇ ಶತಮಾನ ಮತ್ತು 12 ನೇ ಶತಮಾನದ ಶಾಸನಗಳಲ್ಲಿ ಇರುವುದು ಸಂಗ್ರಹಿಸಿ ಸಂಶೋದನೆ ಮಾಡಿ ಪ್ರಕಟಿಸಿದ್ದಾರೆ ಅವರನ್ನ ಅಡಿಕೆ ಬೆಳೆಗಾರರು ಮತ್ತು  ಅಡಿಕೆ ಸಂಸ್ಕರಣ -ಮಾರಾಟ ಸಂಸ್ಥೆಗಳು ಅಭಿನಂದಿಸಬೇಕು.

  #10ನೇ_ಶತಮಾನದಲ್ಲಿ_ನಮ್ಮ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಳ್ಳಿ ಊರಿನ ಅಡಿಕೆ ಮತ್ತು ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತೆಂಬ ಐತಿಹಾಸಿಕ ದಾಖಲೆ.
  #12ನೇ_ಶತಮಾನದ_ಶಾಸನದಲ್ಲಿ_ಗೋಟು_ಅಡಿಕೆಯ_ಉಲ್ಲೇಖ
  ಅಡಿಕೆ ಕೃಷಿ ಈಗ ವಾಣಿಜ್ಯ ಬೆಳೆಯಾಗಿ ರೈತರ ವರವಾಗಿ ಪರಿಣಮಿಸಿದೆ. ಇತಿಹಾಸ ಪುಟಗಳಲ್ಲಿ ಸಾವಿರಾರು ವರುಷಗಳಿಂದ ಈ ಭಾಗದಲ್ಲಿ ಅಡಿಕೆ ಮರಗಳ ಉಲ್ಲೇಖವಿದೆ.

    #ಪೊನ್ನನ_ಶಾಂತಿನಾಥ_ಪುರಾಣದಲ್ಲಿಯೂ ಅಡಿಕೆಯ ಉಲ್ಲೇಖವಿದೆ ಅದರಲ್ಲೂ ನೆಲವತ್ತಿ ಮತ್ತು ಕಪ್ಪರ ಹಳ್ಳಿಯ ಅಡಿಕೆ ಉತ್ತಮ ಗುಣದ ಅಡಿಕೆ ಎಂದು ಉಲ್ಲೇಖಿಸಿದ್ದಾನೆ. ಈ ನೆಲವತ್ತಿ ಮತ್ತು ಕಪ್ಪರ ಹಳ್ಳಿಯ ಅಡಿಕೆಗಳು 10 ನೇ ಶತಮಾನದಲ್ಲಿ ನಾಡಲ್ಲಿ ಹೆಚ್ಚು ಬೇಡಿಕೆ ಇದ್ದ ಅಡಿಕೆಯಾಗಿದ್ದವು.

   ಈಗಿನ #ನ್ಯಾಮತಿ ಮತ್ತು ಶಿಕಾರಿಪುರ ತಾಲೂಕಿನ #ಕಪ್ಪನಹಳ್ಳಿಗಳೇ ನೆಲವತ್ತಿ ಮತ್ತು ಕಪ್ಪರಹಳ್ಳಿಗಳು ಎಂದು ಅಲ್ಲಿನ ಶಾಸನಗಳಿಂದ ಸ್ಪಷ್ಟವಾಗುತ್ತದೆ.

  ಅಂದರೆ ಹತ್ತನೇ ಶತಮಾನದ ವೇಳೆಗೆ ಈ ಭಾಗದಲ್ಲಿ ಅಡಿಕೆಯ ಕೃಷಿ ಜೋರಾಗಿತ್ತು ಮತ್ತು ಅದರ ಮಾರಕಟ್ಟೆಯೂ ವಿಶಾಲವಾಗಿತ್ತು ಎನ್ನಬಹುದು.
    #ತಾಳಗುಂದದ_12ನೇ_ಶತಮಾನದ ಶಾಸನದಲ್ಲಿಯೂ ಅಡಿಕೆ ತೋಟದ ಉಲ್ಲೇಖವಿದೆ. ಕ್ರಿ.ಶ. 1203ರಲ್ಲಿ  ಬಂದಳಿಕೆಯ ಶಾಸನವೊಂದರಲ್ಲಿ ಶಾಂತಿನಾಥ ದೇವರಿಗೆ 500 ಅಡಿಕೆಮರವುಳ್ಳ ತೋಟವನ್ನು ದಾನ ಮಾಡಿದ ಉಲ್ಲೇಖವಿದೆ.
   #ಬಳ್ಳಿಗಾವಿಯ_ಕ್ರಿ_ಶ_1156ರ_ಅವಧಿಯ_ಶಾಸನವೊಂದರಲ್ಲಿ ಶ್ರೀ ಕೇದಾರೇಶ್ವರ ದೇವರ ತೋಟದಲ್ಲಿ ಬೆಳೆಯುವ ಗೋಟು ಅಡಿಕೆಯ ಮೇಲಿನ ಕಂದಾಯವನ್ನು ದೇವರ ಆರಾಧನೆಗಾಗಿ ದಾನವಾಗಿ ನೀಡಲಾಗಿದೆ. 

   ಇಲ್ಲಿ ಗೋಟು ಅಡಿಕೆಯ ಮೇಲೆ ಅಂದೇ ತೆರಿಗೆ ಸುಂಕ ಹಾಕುತ್ತಿದ್ದುದು ವಿಶೇಷ. ಅದರಲ್ಲೂ ದೇವಾಲಯದ ತೋಟದ ಅಡಿಕೆಯಾದರೂ ಸಹ ಅದಕ್ಕೆ ಕಂದಾಯ ಕಟ್ಟಬೇಕಾಗಿತ್ತು.
  #ಇದು_ಮಲೆನಾಡಿನ_ಅಡಿಕೆಯ_ಬಗ್ಗೆ_ಉಪಯುಕ್ತ_ಮಾಹಿತಿ_ಆಗಿದೆ.

ಹೊಸ ಸುದ್ದಿ ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಮ್ಮ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆಗೆ ದೇಶದಾದ್ಯಂತ ಬೇಡಿಕೆ ಇರುವುದು ಅಂಕಿಅಂಶಗಳ  ಮಾಹಿತಿ ಪ್ರಕಾರ ಸಂಗ್ರಹಿಸಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...