# ಬಿದನೂರು ನಗರದ ಈ ಸು೦ದರ ಈಜು ಕೊಳಗಳ ಸಂಕೀಣ೯ಕ್ಕೆ ಒಮ್ಮೆಯಾದರೂ ಬೇಟಿ ನೀಡಿ.#
ಬಿದನೂರು ನಗರದ ಕೋಟೆಯಿ೦ದ ಕೊಲ್ಲೂರು ಮಾಗ೯ದಲ್ಲಿ 5-6 ಕಿ.ಮಿ. ಸಾಗಿದರೆ ಅಲ್ಲಿ ಬೈಸೆ ಎಂಬ ಹಳ್ಳಿ ಸಿಗುತ್ತದೆ, ಈ ಹಳ್ಳಿಯ ಬಲ ಬಾಗದಲ್ಲಿ ಕೆಳದಿ ಅರಸರ ಶಿಥಿಲ ಸಮಾದಿಗಳು ಇದೆ.
ಇಲ್ಲೇ ಒಂದು ರಸ್ತೆ ಬಲಕ್ಕೆ ದೇವಗಂಗೆಗೆ ಹೋಗುತ್ತದೆ, ಇಲ್ಲಿಯೇ ಕೆಳದಿ ಅರಸರ ಅದ್ಬುತ ನಿಮಾ೯ಣದ ಈಜು ಕೊಳಗಳ ಸಂಕೀಣ೯ವಿದೆ.
ಈಗೆಲ್ಲ ನೈಸಗಿ೯ಕ ಈಜುಕೊಳಗಳ ಬಗ್ಗೆ ವಿದೇಶಗಳಲ್ಲಿ ವಿಪರೀತ ಕಯಾಲಿಪ್ರಾರಂಭ ಆಗಿದೆ ಆದರೆ 350 - 400 ವಷ೯ದ ಹಿಂದೆ ಕೆಳದಿ ಅರಸರು ನಿಮಿ೯ಸಿದ ಈ ನೈಸಗಿ೯ಕ ಈಜು ಕೊಳಗಳ ಸಂಕೀಣ೯ ಸಂಶೋದನೆಗೆ ಆಹ೯ವಾಗಿದೆ.
ವಷ೯ ಪೂತಿ೯ ಈ ಈಜು ಕೊಳದಲ್ಲಿ ಒಂದೇ ಮಟ್ಟದಲ್ಲಿ ನೀರು ಇರುತ್ತದೆ ಮತ್ತು ನೀರು ಸದಾ ಹರಿಯುತ್ತಿರುತ್ತದೆ.
ದೊಡ್ಡ ಕೊಳ ಸಂಪೂಣ೯ ಶಿಲೆ ಕಲ್ಲಿನಿಂದ ನಿಮಿ೯ಸಿದ್ದಾರೆ, ಇದರ ಮದ್ಯೆ ರಾಣಿ ಪರಿವಾರದವರಿಗಾಗಿ ಕಲ್ಲಿನ ಸುಂದರ ತೊಟ್ಟಿಲು ಅಲ್ಲಿಗೆ ತಲುಪಲು ಕಲ್ಲಿನ ಸಂಕ ಇದೆ.
ಈಜು ಕೊಳದ ಸುತ್ತಲೂ ಸುಂದರವಾದ ಕಟಾಂಜನ, ಕೊಳಕ್ಕೆ ಇಳಿಯಲು ವಿಶಾಲವಾದ ಪಾವಟಿಗೆಗಳಿದೆ.
ದೊಡ್ಡ ಕೊಳದ ನೀರು ಹರಿಯುವ ದಿಕ್ಕಿನಲ್ಲಿ ವಿವಿಧ ಆಕೃತಿಯ, ಅಳತೆಯ ಮತ್ತು ಆಳದ 7 ಕೊಳಗಳಿದೆ.
ವಷ೯ ಪೂತಿ೯ ಈ ಕೊಳಗಳಲ್ಲಿ ನೀರು ಹರಿಯುವುದರಿಂದ ಇದರ ನೀರು ಮಲೀನವಾಗುವುದಿಲ್ಲ, ಈ ಕೊಳಕ್ಕೆ ಬೆಟ್ಟದ ಮೇಲಿನ ದೊಡ್ಡಕೆರೆಯಿOದ ನೀರು ಹರಿದು ಬರಲು ಭೂಮಿ ಆಳದಲ್ಲಿ ಹಿತ್ತಾಳೆಯ ಕೊಳವೆ ಮತ್ತು ಕಲ್ಲಿನ ಕೊಳವೆ ಅಳವಡಿಸಿದ್ದಾರೆ.
ಈಜು ಕೊಳದ ಸ೦ಕಿಣ೯ ನೆಲದಿಂದ ಸುಮಾರು 15 ಅಡಿ ಆಳದಲ್ಲಿ ನಿಮಿ೯ಸಿರುವುದು ರಾಣಿ ವಾಸದ ಖಾಸಾಗಿ ತನಕ್ಕಾಗಿ, ದೂರದಿಂದ ಈಜು ಕೊಳ ಕಾಣುವುದಿಲ್ಲ.
ಕೊಳದ ಒಂದು ಭಾಗದಿಂದ ಪಾವಟಿಗೆ ಹತ್ತಿ ಹೋದರೆ ಸುಂದರವಾದ ಈಶ್ವರ ದೇವಸ್ಥಾನ, ಇನ್ನೊಂದು ಬಾಗದ ಪಾವಟಿಗೆ ಹತ್ತಿ ಮೇಲೆ ಹೋದರೆ ಸುಂದರ ಉದ್ಯಾನವನ ಸುತ್ತಲೂ ಕಲ್ಲು ಪಗಾರವಿದೆ.
ಇದರ ಸುತ್ತಲೂ ನೂರಾರು ಎಕರೆ ದೇಶ, ವಿದೇಶಗಳ ಹಣ್ಣುಗಳ ಸುಂದರ ತೋಟವಿತ್ತಂತೆ ಅದು ಈಗಿಲ್ಲ.
ಕೆಳದಿ ಅರಸರು ಕೆಲವು ಶತಮಾನದ ಹಿಂದೆ ನಿಮಿ೯ಸಿರುವ ಈಗಲೂ ಹಾಗೇ ಇರುವ ಈ ನೈಸಗಿ೯ಕ ಈಜು ಕೊಳ ಅಧ್ಯಯನ, ಸಂಶೋದನೆಗೆ ಅಹ೯ವಾಗಿದೆ ಈ ಎಲ್ಲಾ ದೃಷ್ಟಿಕೋನದಿಂದ ಬಿದನೂರು ನಗರದ ದೇವಗಂಗೆ ಸಂದಶಿ೯ಸಿದರೆ ನಿಜಕ್ಕೂ ನೀವು ಪುಳಕಿತರಾಗುತ್ತೀರಿ.
ನನ್ನ ಬಾಲ್ಯದಲ್ಲಿ ಈಜು ಈ ಕೊಳದಲ್ಲೆ ಕಲಿಯುವ ಅವಕಾಶ ದೊರೆತಿದ್ದು ಕೂಡ ನನಗೆ ಸದಾ ದೇವಗಂಗೆಯ ಒಂದು ನೆನಪು.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment