# ಪ್ರಖ್ಯಾತ ವ್ಯಂಗ್ಯ ಚಿತ್ರಕಾರ ಮತ್ತು ಹೋರಾಟಗಾರ ನಿರ೦ಜನ ಕುಗ್ವೆ.#
ನಾನು ಇವರ ಚಿತ್ರ ಮತ್ತು ಹೋರಾಟಗಳನ್ನ ನೋಡಿ ಇವರ ಅಭಿಮಾನಿ ಆಗಿದ್ದೆ ಆದರೆ ಇವರ ನನ್ನ ಬೇಟಿ ಇವತ್ತಿನವರೆಗೆ ಆಗಿರಲಿಲ್ಲ, ಇವತ್ತು ಸಂಜೆ ಒಂದು ಕೈಯಲ್ಲಿ ಕೆಂಪು ಹೆಲ್ಮೆಟ್ ಹಿಡಿದು ಕೊಂಡು, ಬಗಲಲ್ಲಿ ಚೀಲ ಏರಿಸಿಕೊಂಡು ದಿಡೀರ್ ಆಗಿ ನನ್ನ ಆಪೀಸಿಗೆ ಬಂದು ನನ್ನ ಗುರುತು ಸಿಕ್ಕಿತಾ? ಎಂಬ ಪ್ರಶ್ನೆ ಮಾಡಿದಾಗ ತಕ್ಷಣ ನಿರಂಜನ ಕುಗ್ವೆ ಅಂದೆ.
ಇವರು ಸಾಗರ ತಾಲ್ಲೂಕಿನ ಕುಗ್ವೆಯವರು, ಚಿತ್ರಕಲಾ ಶಿಕ್ಷಕರಾಗಿ ಭದ್ರಾವತಿ ತಾಲ್ಲೂಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ, ಇತ್ತೀಚಿಗೆ ಇವರ ವ್ಯಂಗ್ಯಚಿತ್ರ ಹವ್ಯಕ ಸಮಾಜದಲ್ಲಿ ಭಾರೀ ಹವಾ ಸೃಷ್ಟಿ ಮಾಡಿತ್ತು, ಇವರ ಸಮಾಜದ ಮಠದಲ್ಲಿನ ಕನ್ಯಾ ಸಂಸ್ಕಾರ ಎಂಬ ಅಪ್ರಾಪ್ತ ಹೆಣ್ಣು ಮಕ್ಕಳ ಲೈಂಗಿಕ ಶೋಷಣೆಯನ್ನ ವಿರೋದಿಸಿ ಇವರು ಬರೆದ ವ್ಯಂಗ್ಯಚಿತ್ರಗಳು ಮಠದವರನ್ನ ಕೆರಳಿಸಿತ್ತು ಹಾಗಾಗಿ ಇವರನ್ನ ಸುಳ್ಳು ದೂರಿನಿಂದ ಪೋಲಿಸ್ ಕೇಸ್, ಜೈಲಿಗೆ ಕಳಿಸಿ ಇವರ ಕೈ ಕಟ್ಟಿ ಹಾಕುವ ಪ್ರಯತ್ನ ನಡೆಸಿದ್ದರು.
ಈ ಸಂದಭ೯ದಲ್ಲಿ ಈ ಹೋರಾಟಗಾರರನ್ನ ಸುಳ್ಳು ದೂರಿನಿಂದ ಜೈಲಿಗೆ ಕಳಿಸುವುದನ್ನ ವಿರೋದಿಸಿದ್ದೆ, ನಂತರ ಇವರು ಇನ್ನೂ ಹೆಚ್ಚು ಚಿತ್ರ ಬರೆದು ಜನಜಾಗೃತಿ ಮಾಡಲು ಪ್ರಾರಂಬಿಸಿದ್ದರಿಂದ ವಿರೋದಿಗಳಿಗೆ ಸಿಂಹ ಸ್ವಪ್ನ ಆಗಿದ್ದಾರೆ.
ಇವರ ಹೋರಾಟಕ್ಕೆ ಈಗ ಹವ್ಯಕ ಸಮಾಜದಲ್ಲೇ ಹೆಚ್ಚು ಬೆಂಬಲ ವ್ಯಕ್ತವಾಗಿದೆ, ಹವ್ಯಕರ ಸ್ವಣ೯ವಲ್ಲಿ ಸ್ವಾಮೀಜಿ ಕೂಡ ವಿಶ್ವ ಹವ್ಯಕ ಸಮ್ಮೇಳನದಿಂದ ದೂರ ಉಳಿದಿದ್ದು ಇವರೆಲ್ಲರ ಹೊರಾಟಕ್ಕೆ ತಿರುವು ಬಂದಿದೆ.
ಇವರ ನನ್ನ ಬೇಟಿಯ ನೆನಪಿಗಾಗಿ ರೈತ ಸಂಘದ ಪ್ರೊ.ನಂಜುOಡ ಸ್ವಾಮಿಯವರ ಬಗ್ಗೆ ಬಂದಿರುವ "ರೈತ ಹೋರಾಟ ಮತ್ತು ಬಾರು ಕೋಲು " ಪುಸ್ತಕ ನೀಡಿದೆ.
ಹಣ, ಅದಿಕಾರ, ಅಂದ ಭಕ್ತರಿಂದ ವಿಷವತು೯ಲದಿಂದ ಸುತ್ತುವರಿದ ಮಠ ಒಂದು ತನ್ನ ಜಾತಿಯ ಹೆಣ್ಣು ಮಕ್ಕಳನ್ನೆ ಅತ್ಯಚಾರ ಮಾಡಿದ್ದನ್ನ, ಲೈಂಗಿಕ ದುರುಪಯೋಗ ಮಾಡಿದ್ದನ್ನ ವಿರೋದಿಸುವುದು ಅಷ್ಟು ಸುಲಭವಲ್ಲ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
ತಮ್ಮಂತ ಮೇರು ವ್ಯಕ್ತಿತ್ವದ ಆದರ್ಶ ವ್ಯಕ್ತಿಗಳು ಈ ಪುಟ್ಟ ಕಲಾವಿದನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವುದಲ್ಲದೇ ಸಾಮಾಜಿಕ ಕಳಕಳಿಯ ಆಶಯದಲ್ಲಿ ನಾವು ನಡೆಸುತ್ತಿರುವ ಹೋರಾಟಕ್ಕೂ ಬೆಂಬಲ ನೀಡುತ್ತಾ ಬಂದಿರುವಿರಿ...
ReplyDeleteಒಬ್ಬ ಕಲಾವಿದನಿಗಾಗಲೀ ಹೋರಾಟಗಾರರಿಗಾಗಲೀ ಪ್ರೇರಣೆ, ಆತ್ಮ ಬಲ ತುಂಬುವ ತಮ್ಮಂತ ಆತ್ಮ ಬಂಧುಗಳು ಬೆನ್ನಹಿಂದಿರುವಾಗ ಸಾಧನೆಯಲ್ಲಿ ಸಾಪಲ್ಯ ಕಾಣುತ್ತೇವೆಂಬ ವಿಶ್ವಾಸ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ..
ತಮ್ಮಂತವರ ಒಡನಾಟ ನನಗೆ ಸಿಕ್ಕಿರುವುದು ನನ್ನ ಭಾಗ್ಯ...
ತಮ್ಮ ಆದರ , ಪ್ರೀತಿಗೆ ಬದಲಾಗಿ ಕೃತಜ್ಞತೆಯನ್ನಷ್ಟೇ ಈ ಪುಟ್ಟ ಕಲಾವಿದ ನೀಡಲು ಸಾಧ್ಯ...
ಅನಂತ ಧನ್ಯವಾದಗಳು ಸರ್..
ಶಹಬ್ಬಾಸ್ ಮಾಸ್ಟರ್ ಜೀ
ReplyDelete