# ಹಸೆ ಚಿತ್ತಾರ ಎಂಬ ಪಶ್ಚಿಮ ಘಟ್ಟದ ದೀವರೆಂಬ ಸಮುದಾಯದ ನಿತ್ಯ ಜೀವನದ ಕಲೆ ಜಗತ್ತಿಗೆ ಪಸರಿಸುತ್ತಿರುವ ಕಲಾವಿದ ಈಶ್ವರ್ ಹಸುವಂತೆ#
ಹಸೆ ಚಿತ್ತಾರ ಎ೦ಬ ತನ್ನ ಜನಾ೦ಗದ ಕಲೆಯನ್ನ ವಿಶ್ವಕ್ಕೆ ಪ್ರಸರಣ ಮಾಡಿದ ಅಪೂವ೯ ಕಲಾವಿದ ಈಶ್ವರ್ ಹಸುವಂತೆಯ ಒಂದು ವಿಸ್ಮಯ ಕಥೆ
1982 ಅಥವ ನಂತರದ ಇಸವಿಯಲ್ಲಿ ಸಾಗರದಲ್ಲಿ ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ ಗೌಡ, ಸಿಗರೇಟ್ ನಾಗರಾಜ್, ರಿಕ್ಷಾ ಮೋಹನ್, ಪ್ರೇಡರಿಕ್, ಮಂಡಗಳಲೆ ನಾರಾಯಣಪ್ಪಾ, ತೀ.ನಾ.ಶ್ರೀನಿವಾಸ್ ಮತ್ತು ಅನೇಕ ಪ್ರಗತಿ ಪರರು ಸೇರಿ ಭದ್ರಾವತಿ ಬಿ.ಕೃಷ್ಣಪ್ರನವರು ಸ್ಥಾಪಿಸಿದ ದಲಿತ ಸಂಘಷ೯ ಸಮಿತಿ ಸಾಗರ ತಾಲ್ಲೂಕಿನಲ್ಲಿ ಪ್ರೊಫೆಸರ್ ರಾಚಪ್ಪನವರ ಪ್ರಯತ್ನ ದಿಂದ ಪ್ರಾರಂಭವಾಗಿತ್ತು.
ಕೋಲಾರದ ಕಾಮರೇಡ್ ನಾರಾಯಣಸ್ವಾಮಿಯ ಸತತ ಪ್ರಯತ್ನದಿಂದ ನಾವೆಲ್ಲ ಈ ಸಂಘಟನೆಯಲ್ಲಿ ಸಂಪೂಣ೯ ಬಾಗಿಗಳಾದಾಗ ಈ ಈಶ್ವರ್ ಹಸುವಂತೆ ಕೂಡ ನಮ್ಮ ಸಹಪಾಟಿ.
ಆನಂದಪುರಂ ನ ರೈತ ಬಂದು ಗ್ರಾಮೋದ್ಯೋಗ ಎಂಬ ಸಂಸ್ಥೆಯಲ್ಲಿ ಅಕ್ಕಿ ಮಾರಾಟದ ನಗದು ಅಕ್ರಮ ಸಾಗಾಣಿಕೆ ಸಂದಭ೯ದಲ್ಲಿ ನಾಲ್ಕು ಜನ ಕಾಮಿ೯ಕರನ್ನ ತೀಥ೯ಹಳ್ಳಿ ಸಮೀಪದ ಅರಳಸುರುಳಿ ಎಂಬ ಹಳ್ಳಿಯಲ್ಲಿ ಲಾರಿಯಲ್ಲಿ ಕೊಲೆ ಮಾಡಿ ಹಣ ದರೋಡೆ ಮಾಡಿದ ಪ್ರಕರಣ ನಾವೆಲ್ಲ ಗೆಳೆಯರು ತನಿಖೆಗಾಗಿ ಒತ್ತಾಯಿಸಿದ ಪ್ರಕರಣ ಉದ್ದಿಮೆ ಮಾಲಿಕರಾದ ಸುಬ್ಬಣ್ಣ ನಾಯಕರು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು ಅವರಿಗೆ ಅಧಿಕಾರಿಗಳು ಬೆಂಬಲಿಸಿದ್ದು ಆಗ ಶಾಸಕರಾಗಿದ್ದ ಎಲ್.ಟಿ.ಹೆಗ್ಗಡೆ ಕಾಮಿ೯ಕರ ಹಿತ ಕಾಪಾಡದೆ ಉದ್ದಿಮೆದಾರರ ಪರ ವಹಿಸಿದ್ದರಿಂದ ಪರಿಸ್ತಿತಿ ವಿಕೋಪಕ್ಕೆ ಹೋಗಿ ಲಾಠಿ ಚಾಜ೯, ಬಂದನ ಮತ್ತು ಸುಳ್ಳು ಕೇಸುಗಳಿಂದ ಪ್ರಕ್ಷುಬ್ದ ಪರಿಸ್ಥಿತಿ ಉ೦ಟಾಗಿತ್ತು.
ಕಾಮಿ೯ಕ ಮುಖಂಡರಾದ ಪೂವಪ್ಪ (ಇವತ್ತು ಆನಂದಪುರದ ಪ್ರತಿಷ್ಠಿತ ಮಾರುತಿ ಇಂಡಸ್ಟ್ರಿಸ್ ಮಾಲಿಕರು), ಸೈಮನ್ ಡಿಸೋಜರ ಮೇಲೆ ಪೋಲಿಸರಿ೦ದ ಬೀಕರ ಹಲ್ಲೆ ಮಾಡಿಸಿದ ಮಾಲಿಕ ಸುಬ್ಬಣ್ಣ ನಾಯಕರು ಕಾಮಿ೯ಕ ವಲಯದಲ್ಲಿ ಈ ಕಾರಣದಿಂದ ವಿಲನ್ ಆಗಿದ್ದರು ಆಗ ಈಶ್ವರ ಹಸುವಂತೆ ನಮ್ಮ ಜೊತೆ ಇದ್ದರು.
ನಂತರ ಬೀದಿ ನಾಟಕಗಳಿಂದ, ಹೆಗ್ಗೋಡಿನ ನೀನಾಸಂ ವಿದ್ಯಾಥಿ೯ ಆಗಿ, ಚರಕ ಪ್ರಸನ್ನರ ಚರಕ ಎಂಬ ಖಾದಿ ದೇಶಿ ಸಂಸ್ಥೆ ಸ್ಥಾಪನೆಯಲ್ಲಿ ಪ್ರಮುಖ ಸ್ಥಾನವಹಿಸಿ ನಂತರ ತಮ್ಮ ಕುಲದ ಹಸೆ ಚಿತ್ರದ ಬಗ್ಗೆ ದೀಘ೯ ಅಧ್ಯಯನ ಮಾಡಿ ಈ ಕಲೆಯಲ್ಲಿ ಪರಿಣಿತಿ ಪಡೆದು, ಇದನ್ನ ದೇಶ ಮತ್ತು ಅಂತರ್ ರಾಷ್ಟ್ರ ಮಟ್ಟಕ್ಕೆ ಒಯ್ದ ಕೀತಿ೯ ಇವರದ್ದು.
ಇದಕ್ಕಾಗಿ ಇವರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಇವರಿಗೆ ಸಿಕ್ಕಿದೆ ಆದರೆ ಪ್ರಶಸ್ತಿಯ ಗೀಳು ಇಲ್ಲದ ಇವರು ಸದಾ ಈ ಕಲೆಯ ಪ್ರಸರಣದ ಬಗ್ಗೆ ಜವಾಬ್ದಾರಿಯ ಕೆಲಸ ನಿರಂತರವಾಗಿ ನಡೆಸಿದ್ದಾರೆ.
ಹಸೆ ಚಿತ್ರದಿಂದಾಗಿ ಇಡೀ ವಿಶ್ವ ಪಯ೯ಟನೆ ಮಾಡಿದ್ದಾರೆ ಇವರು ಬಿಡಿಸಿದ ಹಸೆ ಚಿತ್ರ ನಮ್ಮ ರಾಜ್ಯದ ರಾಜ ಭವನದಿಂದ ಪ್ರಾರಂಭವಾಗಿ ರಾಷ್ಟ್ರಪತಿ ಭವನ, ಅಮೇರಿಕಾ, ಇಂಗ್ಲೆಂಡ್ ಆಸ್ಟ್ರೇಲಿಯದ ಪ್ರಮುಖ ಸ್ಥಳ ತಲುಪಿದೆ.
ಹಸೆ ಚಿತ್ರದ ಜೊತೆ ಇದನ್ನ ಬಿಡಿಸುವ ಕಾರಣ, ಚಿತ್ರದ ಅಥ೯ ಬಲ್ಲವರು ಇವರೊಬ್ಬರೆ. ಅನೇಕರು ಇದನ್ನ ಕಲಿತು ಬರೆಯುತ್ತಾರೆ ಆದರೆ ಮಲೆನಾಡಿನ ಪಶ್ಚಿಮ ಘಟ್ಟದ ದೀವರು ಎಂಬ ಗುಡ್ಡಗಾಡು ಪದ್ದತಿಗಳ ಆಚರಣೆಯ ವಿಶಿಷ್ಟ ಜನಾ೦ಗದ ಈ ಕಲೆ ರಕ್ತಗತವಾಗಿ ಬಂದಿರುವ ಅದರ ಪರಿಣಿತಿಯೊ೦ದಿಗೆ ಅದರ ಸಮಗ್ರ ಸಂಶೋದನೆ ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹಸುವಂತೆ ಗ್ರಾಮದ ಹಸೆ ಚಿತ್ತಾರದ ಕಲಾವಿದ ಈಶ್ವರ್ ಹಸುವಂತೆಗೆ ಸಂಬಂದ ಪಟ್ಟ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಬಹುದಾದ ಯೋಗ್ಯತೆ ಇದೆ.
ಮೊನ್ನೆ ನನ್ನ ಕಚೇರಿಗೆ ಸುಮಾರು 18 ವಷ೯ದ ನಂತರ ಬಂದಾಗ ಇದೆಲ್ಲ ನೆನಪಾಗಿ ಬರೆದೆ 2001ರಲ್ಲಿ ನಾನು ಚಿತ್ರಮಂದಿರ ಪ್ರಾರಂಬಿಸಿದಾಗ ಅಲ್ಲಿ ಇವರು ಹಸೆ ಚಿತ್ತಾರ ಬಿಡಿಸಿದ್ದರು, ಈಗ ನನ್ನ ಲಾಡ್ಜ, ಕಾಟೇಜು ಮತ್ತು ಕಲ್ಯಾಣ ಮಂಟಪದಲ್ಲಿ ಇವರ ಕೈ ಚಳಕದ ಹಸೆ ಚಿತ್ತಾರ ಮತ್ತೆ ಮೂಡಿ ಬರಲಿದೆ ಅನ್ನುವುದು ನನಗೆ ಅತ್ಯಂತ ಸಂತೋಷದ ವಿಚಾರವಾಗಿದೆ.
ಅವರ ಹಸ್ತದ ಕಲೆಯಲ್ಲಿ ತಯಾರಾದ ಹಸೆ ಚಿತ್ತಾರದ ಚತ್ರಿ, ಗಡಿಯಾರ, ಆಕಷ೯ಕ ಸೀರೆ, ಚೂಡಿದಾರದ ಟಾಪ್ ಮತ್ತು ಚಿತ್ರಪಟಗಳು ಇಲ್ಲಿದೆ.
ಹೆದ್ದಾರಿಯಲ್ಲಿ ಸುಲ್ತಾನ್ ಜ್ಯೂವೆಲರಿಯ ದೊಡ್ಡ ಹೊಡಿ೯೦ಗ್ಗಳಲ್ಲಿ ಇವರ ಹಸೆ ಚಿತ್ತಾರದ ಚಿತ್ರಗಳಿವೆ ಎಂದರೆ ಇವರ ಪ್ರಖ್ಯಾತಿ ಅಥ೯ವಾದೀತು.
FAMOUS WESTERN GHAT FOLK ART HASE CHITTARA OF LOCAL TRIBES DIVARU COMMUNITY IS SPREADING WORLDWIDE BY REAL ARTIST BELONGS TO THIS COMMUNITY MR ESHWAR HASUVANTHE CELL PHONE NUMBER 9481935579.

good article sir,,.thanks .its usefull information us
ReplyDeleteIt's not the art form of devru. Its originally of HASLAR tribe. Residing in the region.
ReplyDeleteAll communities of that part of malenad practice it. Write it on their walls use it in festivals..
It's been practiced by okkaligaru..madivalaru.. shetru.. devaru.. gondaru..etc farming communities.