# ಸಾಗರದ ವಿಶೇಷ ವ್ಯಕ್ತಿ, ಒಂದು ಕಾಲದ ಕಾ೦ಗ್ರೇಸ್ ಶಕ್ತಿ ಕುರುಬರ ಲಿಂಗಣ್ಣ#
ಜನ ಪ್ರೀತಿಯಿ೦ದ ಇವರನ್ನ ಕುರುಬರ ಲಿಂಗಣ್ಣ, ಕುರಿ ಲಿಂಗಣ್ಣ ಅಂತ ಕರಿತಾರೆ.
ಇವರು 7 ಸಾರಿ ಸಾಗರದ ಮುನ್ಸಿಪಲ್, ಪುರಸಭೆ ಮತ್ತು ನಗರ ಸಭೆಗಳಿಗೆ ನಿರಂತರವಾಗಿ ಆಯ್ಕೆ ಆದವರು, 3 ರಿಂದ 4 ಸಾರಿ ಅಧ್ಯಕ್ಷರಾಗಿದ್ದವರು, ವಿಶೇಷ ಅಂದರೆ ಈ ಸೋಲಿಲ್ಲದ ಸರದಾರರ ಒಂದೇ ಒಂದು ಸ್ವಜಾತಿ ಮನೆ, ಓಟು ಇಲ್ಲ!!
ಈಗ ವಯಸ್ಸಿನ ಕಾರಣದಿಂದ ರಾಜಕೀಯವಾಗಿ ನಿವೃತ್ತರಾಗಿದ್ದಾರೆ, ಇವರ ಮಗ ಮಂಜುನಾಥ್ ಕೂಡ ಸಾಗರದಲ್ಲಿ ಎರೆಡು ಬಾರಿ ನಗರ ಸಭೆಗೆ ಆಯ್ಕೆ ಆಗಿದ್ದಾರೆ, ಕಳೆದ ವಷ೯ ಇವರ ವಾಡ್೯ನಲ್ಲಿ ಆಶ್ರಯ ಹಕ್ಕು ಪತ್ರ ವಿತರಣೆಯನ್ನ ಸಾಗರದ ಮಾರಿಕಾಂಬಾ ದೇವಾಲಯದಲ್ಲಿ ದೇವರ ಎದುರು ಯಾರಿಂದಲೂ ಒಂದೇ ರೂಪಾಯಿ ಹಣ ಪಡೆದಿಲ್ಲ ಅಂತ ಪ್ರಮಾಣ ಮಾಡಿ ವಿತರಿಸಿದ್ದರು, ಫಲಾನುಭವಿಗಳು ತಾವು ಕೂಡ ಲಂಚ ನೀಡಿಲ್ಲ ಎಂದು ಪ್ರಮಾಣ ಮಾಡಿ ಹಕ್ಕು ಪತ್ರ ಸ್ವೀಕರಿಸಿದ್ದು ರಾಜ್ಯದಲ್ಲೇ ಸುದ್ದಿ ಆಗಿತ್ತು.
ಕಾಗೋಡು ತಿಮ್ಮಪ್ಪರ ಸಮಕಾಲಿನವರಾದ ಇವರು ಮತ್ತು ಆಹಮದ್ ಆಲೀ ಖಾನ್ ಸಾಹೇಬರು ಜಿಗಣಿ ದೊಸ್ತರು, ಇವರಿಬ್ಬರ ಶ್ರಮವೇ ಕಾಗೋಡು ಕಾಂಗ್ರೇಸ್ಗೆ ಸೇರಲು ಕಾರಣ.
ಕುರುಬ ಸಮಾಜದ, ಇವತ್ತೂ ಕುರಿ ವ್ಯಾಪಾರ ಮುಂದುವರಿಸಿರುವುದರಿಂದ ಇವರ ಹೆಸರ ಮುಂದೆ, ಕುರುಬರ ಲಿಂಗಣ್ಣ ಅಂತ ಕೆಲವರು, ಇನ್ನು ಕೆಲವರು ಕುರಿ ಲಿಂಗಣ್ಣ ಅಂತ ಕರೀತಾರೆ.
ಸಾಗರದ ಕೆಳದಿ ರಸ್ತೆ ತಿರುವಿನಲ್ಲಿ ವಾಸ ಇರುವ ಲಿಂಗಪ್ಪನವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಮೊನ್ನೆ ಅವರನ್ನ ಬೇಟಿ ಮಾಡಿದಾಗ ಅನೇಕ ರಾಜಕೀಯದ ಹಳೇಯ ನೆನಪು ಮಾಡಿಕೊಂಡರು.
ಈಗಿನ ಹೊಸ ತಲೆಮಾರಿನ ಸಾಗರದ ಜನತೆಗೆ ಹಣ, ಜಾತಿ ಇಲ್ಲದೆ ಗುಣ ಒಂದರಿಂದಲೇ ದೀಘ೯ ಕಾಲ ರಾಜಕಾರಣ ಮಾಡಿದ ಇವರ ಕಥೆ ಕೇಳಿ ಆಶ್ಚಯ೯ ಪಡುತ್ತಾರೆ.# ಸಾಗರದ ವಿಶೇಷ ವ್ಯಕ್ತಿ, ಒಂದು ಕಾಲದ ಕಾ೦ಗ್ರೇಸ್ ಶಕ್ತಿ ಕುರುಬರ ಲಿಂಗಣ್ಣ#
ಜನ ಪ್ರೀತಿಯಿ೦ದ ಇವರನ್ನ ಕುರುಬರ ಲಿಂಗಣ್ಣ, ಕುರಿ ಲಿಂಗಣ್ಣ ಅಂತ ಕರಿತಾರೆ.
ಇವರು 7 ಸಾರಿ ಸಾಗರದ ಮುನ್ಸಿಪಲ್, ಪುರಸಭೆ ಮತ್ತು ನಗರ ಸಭೆಗಳಿಗೆ ನಿರಂತರವಾಗಿ ಆಯ್ಕೆ ಆದವರು, 3 ರಿಂದ 4 ಸಾರಿ ಅಧ್ಯಕ್ಷರಾಗಿದ್ದವರು, ವಿಶೇಷ ಅಂದರೆ ಈ ಸೋಲಿಲ್ಲದ ಸರದಾರರ ಒಂದೇ ಒಂದು ಸ್ವಜಾತಿ ಮನೆ, ಓಟು ಇಲ್ಲ!!
ಈಗ ವಯಸ್ಸಿನ ಕಾರಣದಿಂದ ರಾಜಕೀಯವಾಗಿ ನಿವೃತ್ತರಾಗಿದ್ದಾರೆ, ಇವರ ಮಗ ಮಂಜುನಾಥ್ ಕೂಡ ಸಾಗರದಲ್ಲಿ ಎರೆಡು ಬಾರಿ ನಗರ ಸಭೆಗೆ ಆಯ್ಕೆ ಆಗಿದ್ದಾರೆ, ಕಳೆದ ವಷ೯ ಇವರ ವಾಡ್೯ನಲ್ಲಿ ಆಶ್ರಯ ಹಕ್ಕು ಪತ್ರ ವಿತರಣೆಯನ್ನ ಸಾಗರದ ಮಾರಿಕಾಂಬಾ ದೇವಾಲಯದಲ್ಲಿ ದೇವರ ಎದುರು ಯಾರಿಂದಲೂ ಒಂದೇ ರೂಪಾಯಿ ಹಣ ಪಡೆದಿಲ್ಲ ಅಂತ ಪ್ರಮಾಣ ಮಾಡಿ ವಿತರಿಸಿದ್ದರು, ಫಲಾನುಭವಿಗಳು ತಾವು ಕೂಡ ಲಂಚ ನೀಡಿಲ್ಲ ಎಂದು ಪ್ರಮಾಣ ಮಾಡಿ ಹಕ್ಕು ಪತ್ರ ಸ್ವೀಕರಿಸಿದ್ದು ರಾಜ್ಯದಲ್ಲೇ ಸುದ್ದಿ ಆಗಿತ್ತು.
ಕಾಗೋಡು ತಿಮ್ಮಪ್ಪರ ಸಮಕಾಲಿನವರಾದ ಇವರು ಮತ್ತು ಆಹಮದ್ ಆಲೀ ಖಾನ್ ಸಾಹೇಬರು ಜಿಗಣಿ ದೊಸ್ತರು, ಇವರಿಬ್ಬರ ಶ್ರಮವೇ ಕಾಗೋಡು ಕಾಂಗ್ರೇಸ್ಗೆ ಸೇರಲು ಕಾರಣ.
ಕುರುಬ ಸಮಾಜದ, ಇವತ್ತೂ ಕುರಿ ವ್ಯಾಪಾರ ಮುಂದುವರಿಸಿರುವುದರಿಂದ ಇವರ ಹೆಸರ ಮುಂದೆ, ಕುರುಬರ ಲಿಂಗಣ್ಣ ಅಂತ ಕೆಲವರು, ಇನ್ನು ಕೆಲವರು ಕುರಿ ಲಿಂಗಣ್ಣ ಅಂತ ಕರೀತಾರೆ.
ಸಾಗರದ ಕೆಳದಿ ರಸ್ತೆ ತಿರುವಿನಲ್ಲಿ ವಾಸ ಇರುವ ಲಿಂಗಪ್ಪನವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಮೊನ್ನೆ ಅವರನ್ನ ಬೇಟಿ ಮಾಡಿದಾಗ ಅನೇಕ ರಾಜಕೀಯದ ಹಳೇಯ ನೆನಪು ಮಾಡಿಕೊಂಡರು.
ಈಗಿನ ಹೊಸ ತಲೆಮಾರಿನ ಸಾಗರದ ಜನತೆಗೆ ಹಣ, ಜಾತಿ ಇಲ್ಲದೆ ಗುಣ ಒಂದರಿಂದಲೇ ದೀಘ೯ ಕಾಲ ರಾಜಕಾರಣ ಮಾಡಿದ ಇವರ ಕಥೆ ಕೇಳಿ ಆಶ್ಚಯ೯ ಪಡುತ್ತಾರೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ
Comments
Post a Comment