ಸಾಗರದ ಮೊದಲ ಶಾಸಕರು ಸಮಾಜವಾದಿ ಪಕ್ಷದ ಶಾಂತವೇರಿ ಗೋಪಾಲಗೌಡರು.
ಸ್ವಾತಂತ್ರ್ಯ ನಂತರ ಸಾಗರ, ಸೊರಬ, ಹೊಸನಗರ ಮತ್ತು ತೀಥ೯ಳ್ಳಿ ತಾಲ್ಲೂಕ್ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಗೇಣಿ ರೈತರ ಶೋಷಣೆ ವಿರೋದಿಸಿ, ಗೇಣಿ ರೈತರ ಹಿತರಕ್ಷಣೆಗಾಗಿ ಪ್ರಾಂತ್ಯ ರೈತ ಸಂಘದ ಹೆಸರಲ್ಲಿ ಸಂಘಟನೆ ಪ್ರಾರ೦ಬಿಸಿದ್ದರು.
ಈ ಸಂಘಟನೆಗಳಲ್ಲಿ ಕಡಿದಾಳು ಮಂಜಪ್ಪನವರು, ಗಣಪತಿಯಪ್ಪನವರು ಪ್ರಮುಖ ಪಾತ್ರ ವಹಿಸಿದರು, ಈ ಹೋರಾಟ ಸಂಘಷ೯ಕ್ಕೆ ಕಾರಣವಾಯಿತು, ಗೇಣಿ ರೈತರ ಸಂಘಟನೆ ಭೂಮಾಲಿಕರ ಅಸಹನೆಗೆ ಕಾರಣವಾಗಿ ಗೇಣಿ ರೈತರಿಗೆ ಭೂಮಿ ನಿರಾಕರಿಸಿದ್ದು ಮುಂದೆ ಉಳುವವನೆ ಹೊಲದ ಒಡೆಯ ಎ೦ಬ ಘೋಷಣಾ ವಾಕ್ಯದಲ್ಲಿ ಇಡೀ ದೇಶದ ಗಮನ ಸೆಳೆದ ಕಾಗೋಡು ರೈತ ಹೋರಾಟ ಆಯಿತು.
ಶಾಂತವೇರಿ ಗೋಪಾಲ ಗೌಡರು ಸಮಾಜವಾದಿ ಪಕ್ಷದ ರಾಮ ಮನೋಹರ ಲೋಹಿಯಾರನ್ನ ಕರೆ ತಂದದ್ದು, ಅವರು ಕಾಗೋಡಿನಲ್ಲಿನ ಅರಳಿ ಮರದ ಕೆಳಗೆ ಗೇಣಿ ರೈತ ಹೋರಾಟಗಾರರನ್ನ ಪ್ರೇರೇಪಿಸಿ ಬಾಷಣ ಮಾಡಿ ಸಾಗರ ರೈಲು ನಿಲ್ದಾಣದ ತಂಗುದಾಣದಲ್ಲಿ ತಂಗಿದಾಗ ಅವರನ್ನ ಬಂದಿಸಿದ್ದು ಇಡೀ ದೇಶದಲ್ಲಿ ದೊಡ್ಡ ಸುದ್ದಿ ಆಗಿತ್ತು.
ಕಾಗೋಡು ರೈತ ಹೋರಾಟದ ಪ್ರಭಾವದಿಂದ 1952 ರಲ್ಲಿ ನಡೆದ ಮೊದಲ ವಿಧಾನ ಸಭಾ ಚುನಾವಣೆಯಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಮೊದಲ ಶಾಸಕರಾಗಿ ಆಯ್ಕೆ ಆಗಿ ರಾಜ್ಯ ವಿಧಾನಸಭೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದರು.
ಸಾಗರದ ಕ್ರೀಡಾ೦ಗಣಕ್ಕೆ ಗೋಪಾಲಗೌಡರ ಹೆಸರು ಇಡಲಾಗಿದೆ.
ಗೋಪಾಲಗೌಡರ ಸ್ಮರಣೆಗಾಗಿ ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸಾಗರದಲ್ಲಿ ನಿಮಿ೯ಸುವ ಬೇಡಿಕೆ 60 ವಷ೯ದಿಂದಲೂ ಈಡೇರದಿರುವುದು ವಿಷಾದನೀಯ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment