ಶರಾವತಿ ಉಳಿಸುವ ಭರದಲ್ಲಿ ಬೆಂಗಳೂರು ವಿರೋದಿಸುವ ಅನೇಕ ಹೇಳಿಕೆಗಳು ನಮ್ಮ ರಾಜದಾನಿ ಬೆಂಗಳೂರಿಗರಿಗೆ ಒಂದು ರೀತಿಯ ಭ್ರಮ ನಿರಸನ, ಮಲೆನಾಡಿಗರು ಬೆಂಗಳೂರನ್ನ ಈ ರೀತಿ ವಿರೋದಿಸುವುದು ಸರಿಯೇ ಅಂತ ಇಲ್ಲಿ೦ದ ಉದ್ಯೋಗ ಅರಸಿ ಅಲ್ಲಿ ನೆಲೆ ಕಂಡ ಅನೇಕರು ಪ್ರತಿಕ್ರಿಯಿಸಿದ್ದಾರೆ, ಅದು ಸರಿ ಕೂಡ ಇಡೀ ರಾಜ್ಯದ ಜನ ರಾಜದಾನಿಗೆ ಅವಕಾಶ ಅರಸಿ ಬರುವಾಗ ಅವರನ್ನೆಲ್ಲ ಉಳಿಸಲಿಕ್ಕಾಗಿ ಬೆಂಗಳೂರು ಕೂಡ ತನ್ನ ಸ್ವoತಿಕೆ ಮತ್ತು ಸಂಪನ್ಮೂಲಗಳನ್ನ ಕಳೆದುಕೊಂಡಿದೆ ಈಗ ಅಲ್ಲಿ ನೀರು ಕೇಳುವವರು ಯಾರು? ಅವರೆಲ್ಲ ನಮ್ಮ ಊರವರೆ ಅಕ್ಕಪಕ್ಕದವರೇ, ಹಾಗಂತ ಅವರೇನು ಶರಾವತಿಯಿಂದಲೇ ನೀರು ತನ್ನಿ ಅಂತ ಹೇಳಿಲ್ಲ, ಕೇಳಿಲ್ಲ!, ಅವರೂ ಕೂಡ ಶರಾವತಿ ಉಳಿಸಲು ಕೈ ಜೋಡಿಸುವವರೇ.
ಶರಾವತಿ ನೀರು ಸಾಗರಕ್ಕೆ ತರುವಾಗ ನಾವಾರು ವಿರೋದಿಸಲಿಲ್ಲ ಇದರಿಂದ ಮಲೆನಾಡಿಗರು ಸ್ವಾಥಿ೯ಗಳಲ್ಲವೇ ಎಂಬ ಬಾವನೆ ಕೂಡ ಬೆಂಗಳೂರು ನಿವಾಸಿಗಳಲ್ಲಿ ಉ೦ಟಾಗಿದೆ.
ಶರಾವತಿ ನದಿ ಉಳಿಯಬೇಕು ಉಳಿಸಬೇಕು ಎಂಬ ಕಾಳಜಿ ಮತ್ತು ಅವಸರದಲ್ಲಿ ಬೆಂಗಳೂರಿಗರನ್ನ ಅವಮಾನಿಸುವಂತ ಕೆಲ ಮಾತುಗಳು ಬಂದಿರುವುದು ಅನೇಕ ತಪ್ಪು ಕಲ್ಪನೆಗೆ ಕಾರಣ ಆಗಿರಬಹುದು ಇದು ಈಗ ಬೆಂಗಳೂರಿಗರು ವಸ೯ಸ್ ಮಲೆನಾಡಿಗರೆಂಬ ಛಾಯ ಯುದ್ದ ಪ್ರಾರಂಭ ಆಗಿದೆ ಇದರಿಂದ ಅವರ ಸವಾಲುಗಳು ಬಹು ಜನರು ಸರಿ ಎಂದು ತಲೆ ತೂಗುವಂತೆ ಪ್ರಯೋಗಿಸುತ್ತಿದ್ದಾರೆ, ಶರಾವತಿ ನದಿ ನೀರು ವಿದ್ಯುತ್ ಉತ್ಪಾದಿಸುವ ಮೊದಲೇ ಸಾಗರಕ್ಕೆ ಹೇಗೆ ಒಯ್ಯಲು ಬಿಟ್ಟರು? ಈಗ ವಿದ್ಯುತ್ ಉತ್ಪಾದಿಸಿದ ನಂತರ ಸಮುದ್ರಕ್ಕೆ ಸೇರುವ 310 TMC ಯಲ್ಲಿ 10 TMC ಬೆಂಗಳೂರಿಗೆ ಯಾಕೆ ಒಯ್ಯ ಬಾರದು, ಸಮುದ್ರದ ನೀರಿಗೂ ವಿರೋದವೇ? ಎಂಬ ತಕ೯ ಪ್ರಾರಂಭ ಆಗಿದೆ.
ಇದನ್ನ ಉಪ ಮುಖ್ಯಮಂತ್ರಿ (ಕಾ೦ಗ್ರೆಸ್) ಬಹಿರಂಗ ಹೇಳಿಕೆ ಕೊಟ್ಟಿದ್ದು ಆ ಪಕ್ಷಕ್ಕೆ ಮಲೆನಾಡಿನಲ್ಲಿ ದೊಡ್ಡ ಹೊಡೆತವೇ ಉಂಟಾಗುವುದರಲ್ಲಿ ಅನುಮಾನ ಇಲ್ಲ ಅಷ್ಟಕ್ಕೂ ಈ ಯೋಜನೆ ಜಾರಿ ಆದೀತಾ? ಗೊತ್ತಿಲ್ಲ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment