* ಮಲೆನಾಡಿನ ಸ್ವಾದಿಷ್ಟ ಆಹಾರಕ್ಕೆ ಬೆಲೆ ಕಟ್ಟಲಾಗುವುದೇ?*
ಇವತ್ತು ಬೆಳಿಗ್ಗೆ ನಮ್ಮ ಅಡುಗೆ ಮನೆಯಲ್ಲಿ ವಿಶೇಷ ಅಡುಗೆಯ ಘಮ.... ಕಾರಣ
ಕಳಲೆ ಪಲ್ಯದೊಂದಿಗೆ ತಟ್ಟೆ ಇಡ್ಲಿ,
ಕೆಸುವಿನ ಎಲೆಯ ಪತ್ರೊಡೆ, ಹುರುಳಿಕಾಳಿನ ಹುಳ್ಳಿ ಕಟ್ಟು, ಹಲಸಿನ ಹಣ್ಣು, ಜೊತೆಗೆ ಅಕ್ಕಿ ಹಪ್ಪಳ, ಮಾವಿನ ಮಿಡಿ ಉಪ್ಪಿನ ಕಾಯಿ, ಹಲಸಿನ ಸಿಹಿ ಹಪ್ಪಳ, ಸಂಡಿಗೆ ಮೆಣಸು ಹೀಗೆ ಮಲೆನಾಡಿನ ಪಶ್ಚಿಮ ಘಟ್ಟದ ಆರಿದ್ರಾ ಮಳೆಯಲ್ಲಿ ಊಟಕ್ಕೆ ಒಂದು ಸ್ವಾದಿಷ್ಟವಾದ ಪಾರಂಪರಿಕವಾದ ರುಚಿ, ಘಮಗಳು ಆವರಿಸಿತ್ತು.
ಹಣ ಕೊಟ್ಟರೂ ಸಿಗದ, ಮಲೆನಾಡಿಗರಿಗೆ ಮಾತ್ರ ಗೊತ್ತಿರುವ ಈ ಆಹಾರಗಳು ಇವತ್ತು ಮಲೆನಾಡಿಗರ ಅಡುಗೆ ಮನೆಗಳಿಂದಲೂ ನಿಗ೯ಮಿಸಿದೆ ಇವುಗಳ ಜಾಗಕ್ಕೆ ರೆಡಿಮೇಡ್ ಮಸಾಲದಿಂದ ಹಿಡಿದು ಮ್ಯಾಗಿವರೆಗೆ ಅಕ್ರಮಿಸಿದೆ.
ಅಸಲಿಗೆ ಇವುಗಳಿಗೆ ಬೆಲೆ ಕಟ್ಟಲಾಗುವುದಿಲ್ಲ! ಆದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಇವುಗಳನ್ನ ಸಂಗ್ರಹಿಸಿ ಹೆಚ್ಚು ಖಚಿ೯ಲ್ಲದೆ ರುಚಿಯಾದ ಅಡುಗೆ ತಯಾರಿಸಬಹುದು.
ಇದು ಶುಚಿ ರುಚಿ ಜೊತೆಗೆ ನೈಸಗಿ೯ಕವಾಗಿ ಸಿಗುವ ಸಾವಯವ ಆಹಾರ ಪದಾಥ೯ ಕೂಡ.
Comments
Post a Comment