Skip to main content

ಸಾಗರದ ಮಹಾ ಗಣಪತಿ ದೇವಾಲಯದ ಇತಿಹಾಸ

# ಸಾಗರದ ಪುರಾತನ ಗಣಪತಿ ದೇವಸ್ಥಾನದ ಅಚ೯ಕರ 4 ತಲೆಮಾರುಗಳ ಇತಿಹಾಸ ಈಗ ಪುಸ್ತಕವಾಗಿ#
  ಎರೆಡು ವಷ೯ದ ಹಿಂದೆ ಸಾಗರದ ಪತ್ರಕತ೯ ಮಿತ್ರ ದೀಪಕ್ ಸಾಗರ್ ಪೋನಾಯಿಸಿ ಪ್ರತಿ 12 ವಷ೯ಕ್ಕೆ ಒಮ್ಮೆ ಪಶ್ಚಿಮ ಘಟ್ಟದಲ್ಲಿ ದೂರದ ನಾಸಿಕ್ ನಿಂದ ಕರಾವಳಿಯ ಮಂಗಳೂರಿನ ಕದ್ರಿಗೆ ತಲುಪುವ "ಬಾರ ಪಂಥ್ " ಯಾತ್ರೆಯ ಬಗ್ಗೆ ನಾನು ಬರೆದ ಲೇಖನ ಯಾವುದೋ ಒಂದು ಪುಸ್ತಕದಲ್ಲಿ ಬಳಸಿಕೊಳ್ಳಬಹುದಾ? ಎಂದು ಕೇಳಿದ್ದರು, ದಾರಾಳವಾಗಿ ಬಳಸಿಕೊಳ್ಳಿ ಎಂದಿದ್ದೆ ಕಾರಣ ಸುಮಾರು 34 ವಷ೯ ಸಿದ್ದಾಪುರದ ಕಮಲಶಿಲೆ ಹತ್ತಿರದ ಹಲವಾರಿ ಮಠದ ಪಟ್ಟದ ಸ್ವಾಮಿಗಳಾಗಿದ್ದ ಸೋಮನಾಥ ಬಾಬರವರು ಈ ಬಾರ ಪಂಥ ಯಾತ್ರೆ ಬಗ್ಗೆ ಹೆಚ್ಚು ಪ್ರಚಾರ ಮತ್ತು ಪ್ರಸಾರ ಮಾಡಲು ನನಗೆ ಆದೇಶಿಸಿದ್ದರು.
  ನಿನ್ನೆ ಬೆಳಿಗ್ಗೆ ಪತ್ರಕತ೯ರ ದಿನಾಚಾರಣೆಯ೦ದು ದೀಪಕ್ ಸಾಗರ್ ಮತ್ತು ಅವರ ಪತ್ನಿ ಶ್ರೀಮತಿ ಸಹನಾ ಈ ಪುಸ್ತಕ ಗೌರವ ಪ್ರತಿಯಾಗಿ ನೀಡಿದರು.
   *ಶ್ರೀಮಹಾಗಣಪತಿ ದೇವಾಲಯದ ಇತಿಹಾಸ* ಎಂಬ ಈ ಪ್ರಸ್ತಕ ಸಾಗರದ ಪುರಾತನ ಮಹಾಗಣಪತಿ ದೇವಸ್ಥಾನದ ಪ್ರದಾನ ಅಚ೯ಕ  ವಿದ್ವಾನ್ ಪಿ.ಎಲ್.ಗಜಾನನ ಭಟ್ ರ ಪುತ್ರಿ ಶ್ರೀಮತಿ ಸಹನಾ ಸಂಪಾದಿಸಿ ಪ್ರಕಟಿಸಿದ್ದಾರೆ.
  ಸುಮಾರು ನಾಲ್ಕು ಶತಮಾನದ ಹಿಂದೆ ಕೆಳದಿ ಅರಸರಾದ ವೆಂಕಟಪ್ಪ ನಾಯಕರು (ದೀಘ೯ ಕಾಲ ರಾಜ್ಯ ಬಾರ ಮಾಡಿದ ಅರಸರು) ಈಗಿನ ಸಾಗರ ಪಟ್ಟಣದ ನಿಮಾ೯ತರು (ಸದಾಶಿವ ಸಾಗರ ಆಗಿನ ಹೆಸರು, ಅವರ ಅಜ್ಜ ರಾಜ ಸದಾಶಿವರ ಸ್ಮರಣಾಥ೯) ಗಣಪತಿ ದೇವಾಲಯ ಕೂಡ ಅವರೇ ನಿಮಿ೯ಸಿದರೆಂಬ ಪ್ರತೀತಿ ಇದೆ ಆದರೆ ಬಾರಾ ಪಂಥದ ಮೂಲ ಉತ್ತರ ಪ್ರದೇಶದ ಗೋರಕ್ ಪುರದ ಗೋರಕ್ ನಾಥ ಮಠ (ಇದರ ಮಹಾಂತರು ಯೋಗಿ ಆದಿತ್ಯನಾಥರು ಈಗ ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳು, ಅವರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು ಎಂಬ ಸುದ್ದಿ ಇದೆ ಆದರೆ ಯಾವಾಗ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ) ಪ್ರತಿ 12 ವಷ೯ಕ್ಕೆ ನಾಸಿಕ್ ನಿಂದ ಹೊರಡುವ ಯಾತ್ರೆ ಸಾಗರದ ಗಣಪತಿ ದೇವಾಲಯದಲ್ಲಿ 2 ರಿಂದ 3 ದಿನ ತಂಗುತ್ತದೆ, ಈ ಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಸನ್ಯಾಸಿ ಆಗಿ 78 ಜನ್ಮ ತಾಳಿದವರಿಗೆ ಸಿಗುತ್ತದೆ ಎಂಬ ನಂಬಿಕೆ ಅವರದ್ದು, ಮಚ್ಚೇoದ್ರನಾಥರ ಕಾಲದಿಂದ ಈ ಯಾತ್ರೆ ನಡೆಯುತ್ತಿದೆ ಎನ್ನುತ್ತಾರೆ ಹಾಗಾದರೆ ಸಾಗರದ ಗಣಪತಿ ದೇವಸ್ಥಾನ ಅತ್ಯಂತ ಪುರಾತನವಾದದ್ದಾಗಿರ ಬೇಕು ಎನ್ನುವ ತಕ೯ ಕೂಡ.
  ಈ ದೇವಾಲಯದಲ್ಲಿನ ಶತಮಾನದ ಹಿಂದಿನ ಪರಿಸ್ಥಿತಿ, ಪರಿಸರ ಮತ್ತು ಆ ದಿನದಲ್ಲಿನ ಸಾಗರದ ಜನ ಜೀವನದ ಬಗ್ಗೆಯೂ ಮಾಹಿತಿ ಮತ್ತು ಚಿತ್ರಗಳು ಈ ಪ್ರಸ್ತಕದಲ್ಲಿ ದಾಖಲಿಸಿದ್ದಾರೆ.
  ಅಚ೯ಕ ಕುಟುಂಬಗಳ ಶ್ರದ್ದೆ, ಭಕ್ತಿ ಮತ್ತು ಬದ್ದತೆಗಳು ಅವರ ಕಷ್ಟ ಆಗಿನ ಕಾಲದ ರೀತಿ ರಿವಾಜು ಮತ್ತು ಕಟ್ಟಲೆಗಳು, ಆ ಕಾಲದಲ್ಲಿ ತಮ್ಮ ಕುಟುಂಬಕ್ಕೆ ತಲತಲಾಂತರದಿoದ ಬಂದ ಅಚ೯ಕ ವೃತ್ತಿ ಕೈ ತಪ್ಪುವ೦ತಾದಾಗ ತುಂಬಾ ಶ್ರಮ ಪಟ್ಟು ಕಾನೂನು ಹೋರಾಟವು ಮಾಡಿ ಗೆಲ್ಲುವ ಸಹನಾರ ಮುತ್ತಜ್ಜಿ ತುಂಗಮ್ಮ ರಾಮಚಂದ್ರ ಭಟ್ಟರು ಸ್ತುತ್ಯಾತರು ಅವರ ಹೋರಾಟ ಇಲ್ಲದಿದ್ದರೆ ಈ ಪುಸ್ತಕ ಪ್ರಕಟನೆ ಕೂಡ ಆಗುತ್ತಿರಲಿಲ್ಲ.
  ಗಣಪತಿ ದೇವಸ್ಥಾನ, ಅದರ ಕೆರೆ ದಂಡೆ ಪುರಾತನವಾದದ್ದು ಮತ್ತು ಇತಿಹಾಸದ ತಳಕು ಇರುವಂತದ್ದು ಅದನ್ನ ಅಚ೯ಕ ಕುಟುಂಬದ ಮಸೂರದಿಂದ ಇಣುಕು ಹಾಕುವ ಈ ಪ್ರಯತ್ನ ಪ್ರಶಂಸಾಹ೯.
ಇವತ್ತಿನ ಈ ಪುಸ್ತಕ ಮುಂದಿನ ತಲೆಮಾರಿಗೆ ಒಂದು ಉಪಯುಕ್ತ ಮಾಹಿತಿ ಗ್ರಂಥವಾಗಲಿದೆ.
ಈ ಪುಸ್ತಕದ ಪ್ರತಿಗಾಗಿ ದೀಪಕ್ ಸಾಗರನ್ನ ಸಂಪಕಿ೯ಸ ಬಹುದು ಅವರ ಸೆಲ್ ನಂಬರ್ 94481 54224.
ವಿಮಶೆ೯ ಮತ್ತು ಲೇಖನ: ಕೆ.ಅರುಣ್ ಪ್ರಸಾದ್ ಮಾಜಿ ಜಿ.ಪಂ.ಸದಸ್ಯ ಆನಂದಪುರಂ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...