# ಮುಟ್ಟಿನ ಬಗ್ಗೆ ಮಹಿಳೆಯರಿಗೆ ಜಾಗೃತಿ#
ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯಲ್ಲಿ ದೀಪಾವಳಿ ಹಬ್ಬದಲ್ಲಿ ಗ್ರಾಮಗಳಲ್ಲಿ ಗಾಮದ ಹಬ್ಬ / ನೋನಿ ಎಂಬ ಸಾಮೂಹಿಕವಾಗಿ ಗ್ರಾಮದ ಎಲ್ಲಾ ದೇವಾನು ದೇವತೆಗಳಿಗೆ (ಇದು ಕೆಲ ಕಡೆ ನೂರಕ್ಕೂ ಹೆಚ್ಚು ) ಪೂಜೆ ನಂತರ ಬಲಿ ನೀಡುವ ಕ್ರಮ ಇದೆ.
ಮೇಲ್ಜಾತಿಯವರು ಈ ಪೂಜೆಗೆ ಸಹಕರಿಸುತ್ತಾರೆ, ಬಲಿಗೆ ತರುವ ಕೋಳಿ ಕುರಿಗೆ ತಮ್ಮ ಪಾಲಿನ ಹಣ ಗ್ರಾಮದ ಜನ ನಿದ೯ರಿಸಿದಂತೆ ನೀಡುತ್ತಾರೆ ಆದರೆ ಬಲಿ ಮಾಂಸದ ಪಾಲು ಅವರ ಮನೆಯ ನಿಷ್ಟ ಕೆಲಸಗಾರನಿಗೆ (ಶೂದ್ರನಿಗೆ) ನೀಡುವಂತೆ ಹೇಳುತ್ತಾರೆ.
ದೀಪಾವಳಿ ನಂತರ ಕೆಲ ದಿನ ಈ ನೋನಿ ನಡೆಯುತ್ತದೆ ಇದಕ್ಕೆ ಆಚರಣೆಯ ಕ್ರಮ ಹೇಳುವವ ಊರಿನ ಮುಖಂಡ ಅಥವ ಹಿರಿಯ ಇಲ್ಲಿಯೂ ಬಹುಸಂಖ್ಯಾತ ಜಾತಿಯವರ ಮಾತು ಹೆಚ್ಚು ಕೃತಿಗೆ.
ಇಲ್ಲಿ ಜಾತಿ ಮಡಿ ಇಲ್ಲ ಆದರೆ ಹುಟ್ಟು / ಸಾವುಗಳ ಸೂತಕ ಇದೆ ಹಾಗೆಯೆ ಮುಟ್ಟು ಸದರಿ ದಿನ ಆದರೆ ಈ ಪೂಜ ಕಾಯ೯ಕ್ರಮ ಮುಂದೂಡಲಾಗುತ್ತೆ, ಇಲ್ಲಿ ಬಾಡೂಟದ ಗಮ್ಮತ್ತು ಇರುವುದರಿಂದ ಈ ಕಾಯ೯ಕ್ರಮ ಮುಂದೂಡಲು ಹೆಚ್ಚಿನವರಿಗೆ ಇಷ್ಟ ಇರುವುದಿಲ್ಲ ಅದಕ್ಕಾಗಿ ಸೂತಕಗಳನ್ನೇ ನಿವಾರಿಸಿಕೊಳ್ಳುವ ಹೊಸ ಯೋಜನೆ ಆಚರಣೆಯಲ್ಲಿದೆ ಅದೇನೆ೦ದರೆ ಮುಟ್ಟಾಗುವ ಮುನ್ನವೆ ಹೆಣ್ಣು ಮಕ್ಕಳು ಹಳ್ಳಿ ತೊರೆದು ನೋನಿ ಇಲ್ಲದ ಹಳ್ಳಿಯ ನೆಂಟರ ಮನೆಗೆ ಹೋಗಬೇಕು.
ಇದನ್ನ ಸಾಗರದ ಖ್ಯಾತ ರಂಗಭೂಮಿ ಕಲಾವಿದೆ, ಕಡಿದಾಳು ಶಾಮಣ್ಣರ ಶಿಷ್ಯೆ ಪ್ರತಿಭಾ ರಾಘವೇ೦ದ್ರ ವಿವಿದ ಸಂಘಟನೆಗಳ ನೆರವಿನಿಂದ ಜಾಗೃತಿಗಾಗಿ ಕರಪತ್ರ, ಹಾಡು ಸಭೆ ಮೂಲಕ ಕಾಯ೯ಕ್ರಮ ಪ್ರಾರ೦ಭಿಸಿದ್ದು ಅಭಿನಂದನೀಯ.
ಸ್ಥಳಿಯ ಮಹಿಳಾ ಮುಖಂಡರೂ ಕೈಜೋಡಿಸ ಬೇಕು ಹಾಗೆಯ ಎಲ್ಲಾ ಊರಿನ ಶಾಲಾ ಕಾಲೇಜುಗಳಲ್ಲಿ ಈ ಜಾಗೃತಿ ನಡೆದು ಈ ಅಂದ ಆಚರಣೆ ನಿಲ್ಲುವಂತಾಗ ಬೇಕು.
ಈ ಕರ ಪತ್ರ ಎಲ್ಲಾ ಮಾಹಿತಿ ಹೊಂದಿದೆ.
https://m.facebook.com/story.php?story_fbid=2010188362548992&id=100006735423463
Comments
Post a Comment