Skip to main content

Posts

Blog 3566. ಬಾರಾಪಂಥ್ ಯಾತ್ರೆ ಭಾಗ - 3

#ಭಾಗ_3 #ಭಾರಾ_ಪಂಥ_ಯಾತ್ರೆ #ಉತ್ತರಪ್ರದೇಶದ_ಗೋರಕ್_ಪುರದ_ಶಾಖಾ_ಮಠ #ಸಿದ್ದಾಪುರದ_ಕಮಲಶಿಲೆ_ಸಮೀಪದ_ಹಲವಾರಿಮಠ #ನಾಸಿಕ್_ಕುಂಭಮೇಳದಿಂದ_ಪ್ರತಿ_12_ವರ್ಷಕ್ಕೊಮ್ಮೆ_ಹೊರಡುತ್ತದೆ. #ಮುಂದಿನ_ಬಾರಾಪಂಥ್_ಯಾತ್ರೆ_2027ಕ್ಕೆ_ನಾಸಿಕ್_ನಿಂದ_ಹೊರಟು #ಮಂಗಳೂರು_ಕದ್ರಿಗೆ_2028_ಜನವರಿಯಲ್ಲಿ_ತಲುಪಲಿದೆ. #ಬಾರಾಪಂಥ_ಯಾತ್ರೆ_ಹಲವಾರಿ_ಮಠದಲ್ಲಿ_ತಂಗುತ್ತದೆ. #nathapanth #barapanth #jondiyatre #gorakpura #nasik #kumbamela #siddapeeta #kodachadri #halavarimutt #YogiAdityanath     ಗೋರಖ್‌ಪುರ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಗರವಾಗಿದೆ.    ರಪ್ತಿ ನದಿಯ ದಡದಲ್ಲಿರುವ ಇದು ನಾಥ ಪಂಥದ ಪ್ರಸಿದ್ಧ ಸಂತ ಗೋರಕ್ಷನಾಥರ ಹೆಸರಿನಿಂದ (ಗೋರಕ್ಷಾಪುರ) ಬಂದಿದೆ.    ಇದು ಪ್ರಸಿದ್ಧ ಗೋರಖನಾಥ ಮಠ ಈ ಮಠದ ಮಹಾಂತರೇ ಬಾರಾಪಂತ್ ಯಾತ್ರೆಯ ರೂವಾರಿಗಳು ಆಗಿರುತ್ತಾರೆ.     ಗೋರಖ್ ನಾಥ ಮಠದ ಈಗಿನ ಮಹಾಂತರು ಯೋಗಿ ಆದಿತ್ಯನಾಥ್ ಜೋಗಿ ಇವರು ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಗಳೂ ಆಗಿದ್ದಾರೆ.   ಪಶ್ಚಿಮ ಘಟ್ಟದ ತಪ್ಪಲಿನ ಮಧ್ಯ ನಡೆದು ಬರುವ ನಾಥ ಪಂಥದ ಸಾದು ಸಂತರ ಈ ಬಾರಾಪಂಥ್ ಯಾತ್ರೆಗೆ ಸಾವಿರರಾರು ವರ್ಷದ ಇತಿಹಾಸವಿದೆ.  ನಾಥಪ೦ಥದ ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಹಲವಾರಿ ಮಠ ಎಡಮೊಗೆ (ಕಮಲಶಿಲ...

Blog 3565. ಯಡೂರಪ್ಪರ ಹುಟ್ಟುಹಬ್ಬ

#ಶಿವಮೊಗ್ಗದ_ವಿಮಾನ_ನಿಲ್ದಾಣದ_ವಾರ್ಷಿಕೋತ್ಸವ_ಮತ್ತು_ಯಡೂರಪ್ಪರ_ಹುಟ್ಟು_ಹಬ್ಬ  #ಇವತ್ತು_ಯಡ್ಯೂರಪ್ಪರ_84ನೇ_ಹುಟ್ಟು_ಹಬ್ಬ. #ಶಿವಮೊಗ್ಗ_ವಿಮಾನ_ನಿಲ್ದಾಣ_ಉದ್ಘಾಟನೆ_ಆಗಿ_ಮೂರು_ವರ್ಷ #ಶಿವಮೊಗ್ಗ_ವಿಮಾನ_ನಿಲ್ದಾಣದ_ಕನಸು_ನನಸು_ಮಾಡಿದವರು #ಯಡೂರಪ್ಪನವರು_ಇದರ_ಸಂಪೂರ್ಣ_ಕ್ರೆಡಿಟ್_ಯಡೂರಪ್ಪನವರದ್ಧೆ. #ತಮ್ಮ_ಹೆಸರಿನ_ನಾಮಕರಣ_ನಯವಾಗಿ_ನಿರಾಕರಿಸಿ_ಕುವೆಂಪು_ಹೆಸರು_ಸೂಚಿಸಿದ_ಯಡೂರಪ್ಪ #ರಾಷ್ಟ್ರಪತಿಗಳು_ಕೊಯಮತ್ತೂರು_ಪ್ರವಾಸಕ್ಕೆ_ಬಳಸಿದ್ದ_ಬೋಯಿಂಗ್_737_ಶಿವಮೊಗ್ಗದಲ್ಲಿಳಿದ_ಮೊದಲ_ವಿಮಾನ. #ಪೆಬ್ರುವರಿ_27_2023ರಂದು_ಪ್ರದಾನಿ_ಮೋದಿ_ಈ_ವಿಮಾನ_ನಿಲ್ದಾಣ_ಉದ್ಘಾಟಿಸಿದರು #kuvempuairport #yadurappa #shivamogga #airport #743boying #PrimeMinisterOfIndia     ಇವತ್ತು ಶುಕ್ರವಾರ 27- ಫೆಬ್ರುವರಿ ಯಡೂರಪ್ಪರ 84ನೇ ಹುಟ್ಟು ಹಬ್ಬದ ಆಚರಣೆ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.    ಮೂರು ವರ್ಷಗಳ ಹಿಂದೆ ಇದೇ ದಿನ ದೇಶದ ಪ್ರಧಾನ ಮಂತ್ರಿಗಳು ನಮ್ಮ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಯಡೂರಪ್ಪರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನ ಹೇಳಿದ್ದರು. ಅವತ್ತು ಯಡೂರಪ್ಪರ 81ನೇ ಹುಟ್ಟು ಹಬ್ಬದ ದಿನವಾಗಿತ್ತು  ಮೂರು ವರ್ಷದ ಹಿಂದೆ  21- ಪೆಬ್ರುವರಿ-2023ರ ಮಂಗಳವಾರ ಮಧ್ಯಾಹ್ನ ಪ್ರಯೋಗಾರ್ಥವಾಗಿ ಮೊದಲ ವಿಮಾನ ಬೋಯಿಂಗ್ 737 ಶಿವಮೊಗ್ಗ ವಿಮಾನ ನ...

Blog 3564. ಸತಿ ಸಹಗಮನ

#ಸತಿ_ಸಹಗಮನ #ಸಹಗಮನದ_ಕಥೆ_ಹೇಳುವ #ಮಹಾಸತಿ_ಕಲ್ಲು_ಮಾಸ್ತಿಕಲ್ಲಾಗಿದೆ #ಸತಿ_ಹೋದವರನ್ನ_ದೈವ_ರೂಪವಾಗಿ_ಪೂಜೆ_ಸಲ್ಲಿಸುವ #ಮಹಾಸತಿ_ಎನ್ನುತ್ತಿದ್ದ_ಆಚರಣೆ #ಸತಿಸಹಗಮನ_1829ರ_ತನಕ_ಆಚರಣೆಯಲ್ಲಿತ್ತು #ರೂಪಾ_ಕನ್ವರ್_1987_ರಾಜಸ್ಥಾನದಲ್ಲಿ #ಮಧ್ಯಪ್ರದೇಶದಲ್ಲಿ_65_ವರ್ಷದ_ಮಹಿಳೆ_2002ರಲ್ಲಿ_ಸತಿಸಹಗಮನದ_ಇತ್ತೀಚಿನ_ಘಟನೆ #sathi #sahagamana #RajaRamMohanRoy #lordbentik #Mastikallu #Okkaishasana #Keladi    4 - ಡಿಸೆಂಬರ್ - 1829 ರಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ #ಲಾರ್ಡ್_ವಿಲಿಯಂ_ಬೆಂಟಿಂಗ್ ಭಾರತದ ಸತಿ ಪದ್ಧತಿ ಕಾನೂನು ಬಾಹಿರ ಎಂದು ಘೋಷಿಸಿದರು.    1672 ರಲ್ಲಿ #ಕೆಳದಿ_ರಾಣಿ_ಚೆನ್ನಮ್ಮ ಸತಿ ಪದ್ಧತಿ ಸ್ವೀಕರಿಸದೆ ಪಟ್ಟಕ್ಕೆ ಏರಿ ರಾಜ್ಯ ಆಳಿದ ಉದಾಹರಣೆ ನಮ್ಮಲ್ಲಿ ಇದೆ.    ಅಲ್ಲಲ್ಲಿ ಇರುವ ಮಹಾಸತಿ ಕಲ್ಲುಗಳನ್ನ ಜನ ಆಡುಭಾಷೆಯಲ್ಲಿ #ಮಾಸ್ತಿ_ಕಲ್ಲು ಎನ್ನುತ್ತಾರೆ ಈ ರೀತಿ ಸತಿ ಸಹಗಮನ ಮಾಡಿದ ಸಾಕ್ಷಿ ಕಲ್ಲು ಜನ ಪೂಜಿಸುತ್ತಾ ಬಂದಿದ್ದಾರೆ.      ಸತಿ ಸಹಗಮನ ಪದ್ದತಿಯನ್ನು #ಮಹಾ_ಬಾರತದಲ್ಲಿ ಕಾಣಬಹುದು.     ಪಾಂಡು ಮಹಾರಾಜ ಮರಣ ಹೊಂದಿದಾಗ ಆತನ ಪತ್ನಿ, ಮಾದ್ರಿ, ಮತ್ತು ಕುಂತಿ ಸತಿ ಸಹಗಮನ ಹೊಂದಲು ತೀರ್ಮಾನಿಸಿದಾಗ #ಮಾದ್ರಿಯು ಕುಂತಿಯನ್ನು ಸಂತೈಸಿ  ಅಕ್ಕಾ ಮಕ್ಕಳು ನಿನ್ನನ್ನು ಹೊಂದಿಕೊಂಡಿದ್ದಾರೆ ಅದ್ದರಿಂ...

Blog 3563.ಪ್ರಮೋದ್ ಮಧ್ವರಾಜ್

#ಏಳು_ವರ್ಷದ_ಹಿಂದಿನ #ನೆನಪಿನ_ಚಿತ್ರ #ಪ್ರಮೋದ್_ಮಧ್ವರಾಜ್_ನಮ್ಮ_ಅತಿಥಿ #Pramodmadwaraj #Udupi #Hombujaresidencylidge #Yadehalli #Anandapuram #Mallikaveg    2019 ರ ಫೆಬ್ರುವರಿ 28 ರಂದು ಅಂದರೆ ಏಳು ವರ್ಷಗಳ ಹಿಂದಿನ ನೆನಪಿನ ಚಿತ್ರ ಇದು.    ಕನಾ೯ಟಕ ಸಕಾ೯ರದ ಮಾಜಿ ಮಂತ್ರಿಗಳಾದ ಶ್ರೀ #ಪ್ರಮೋದ್_ಮಧ್ವರಾಜ್ ರು ನಮ್ಮ ಅತಿಥಿಗಳು.    ನಮ್ಮ #ಹೊಂಬುಜ_ರೆಸಿಡೆನ್ಸಿಗೆ ಆಗಮಿಸಿ ನಮ್ಮ ವಿಕ್ಟೋರಿಯಾ ಕಾಟೇಜಿನಲ್ಲಿ ವಿಶ್ರಾ೦ತಿ ಪಡೆದಿದ್ದರು.    ನಮ್ಮ #ಚಂಪಕಾ_ಪ್ಯಾರೇಡೈಸ್ ನ #ಮಟಕಾ_ದಮ್ ಬಿರಿಯಾನಿ, ಚಿಕನ್ ಡ್ರೈ ಮತ್ತು #ಮಲ್ಲಿಕಾ_ವೆಜ್ ನ ಖಾದ್ಯ ಸವಿದು ಶುಭ ಹಾರೈಸಿದ್ದರು.

Blog 3562.ಹೆಲ್ಮೆಟ್

#ನನ್ನ_ಹೆಲ್ಮೆಟ್_ಅಭಿಯಾನ_ಯಶಸ್ಸು_ಸಾಧಿಸಲೇ_ಇಲ್ಲ #ಬೈಕ್_ಜೊತೆ_ಹೆಲ್ಮೆಟ್_ನಿಮ್ಮ_ಮಕ್ಕಳಿಗೆ_ನಿಮ್ಮ_ಮನೆಯಲ್ಲೇ_ಕಡ್ಡಾಯ_ಮಾಡಿ. #ಇವತ್ತಿನ_ಯುವ_ಜನಾಂಗ_ಹೆಲ್ಮೆಟ್_ದ್ವೇಷಿಗಳು_ಯಾಕೆ? #ಇತ್ತೀಚಿಗೆ_ಮೋಟಾರ್_ಬೈಕ್_ಅಪಘಾತವಾದರೆ_ಸವಾರರು_ಬದುಕುಳಿಯುವುದಿಲ್ಲ  #ನೂತನ_ತಂತ್ರಜ್ಞಾನದ_ಹೆದ್ದಾರಿಗಳು_ಮತ್ತು_ಹೆಲ್ಮೆಟ್_ಧರಿಸದ_ಆದುನಿಕ_ಸವಾರರು. #ಹೆಲ್ಮೆಟ್_ಕಡ್ಡಾಯ_ಕಾನೂನು_1976ರಲ್ಲಿ_ಗುಂಡೂರಾವ್_ಸರ್ಕಾರ_ಮಾಡಿತ್ತು #ಹೆಲ್ಮೆಟ್_ನನ್ನ_ತಂದೆ_ಗೆಳೆಯ_ಯೋಮಕೇಶಪ್ಪಗೌಡರ_ಜೀವ_ಉಳಿಸಿತ್ತು #ಕೊನೆ_ಗಳಿಗೆಯಲ್ಲಿ_ಅವರಿಗೆ_ಹೆಲ್ಮೆಟ್_ನೀಡುವ_ಪ್ರೇರಣೆಗೆ_ಕಾರಣ_ಗೊತ್ತಿಲ್ಲ. #Helmet #bikes #riders #speed #highways #accidents #bikers #Govtofindia    ಇತ್ತೀಚಿಗೆ ಮೋಟಾರ್ ಬೈಕ್ ಅಪಘಾತವಾದರೆ ಸವಾರರು ಬದುಕುಳಿಯುವುದಿಲ್ಲ ಕಾರಣ ಮಿತಿ ಮೀರಿದ ವೇಗವಾಗಿ ಚಲಿಸುವ ಬೈಕ್ ಗಳು ಅದಕ್ಕೆ ತಕ್ಕನಾದ ನೂತನ ತಂತ್ರಜ್ಞಾನದ ಹೆದ್ದಾರಿಗಳು ಮತ್ತು ಹೆಲ್ಮೆಟ್ ಧರಿಸದ ಆದುನಿಕ ಸವಾರರು.    ಈ ಕಾರಣದಿಂದಲೇ ನಾನು ಹೆಲ್ಮೆಟ್ ಖರೀದಿಸಿ ಕೆಲವರಿಗೆ ಹಂಚುವ ಅಭಿಯಾನ ಪ್ರಾರಂಬಿಸಿದೆ.     ಹೆಲ್ಮೆಟ್ ಧರಿಸದೇ ಬಿದ್ದು ಮುಖ ಒಡೆದುಕೊಂಡ ಹೊಸನಗರ ತಾಲ್ಲೂಕಿನ ಪತ್ರಕರ್ತ ಮಿತ್ರರಿಗೆ ಒಂದು ಬೆಲೆಬಾಳುವ ಹೆಲ್ಮೆಟ್ ಉಡುಗೊರೆ ನೀಡಿ ರಸ್ತೆ ಸುರಕ್ಷತೆ ಪಾಠ ಮಾಡಿದ್ದೆ ಆದರೆ ಅವರು ನನ್ನ ಕಛೇರಿಯಿಂದ ಹೆಲ್ಮೆಟ್...

Blog number 3561. ಕೆಂಜಿಗಾಪುರದ ಶ್ರೀವೀರಭದ್ರೇಶ್ವರ ರಥೋತ್ಸವ

#ನಮ್ಮೂರ_ಕೆಂಜಿಗಾಪುರದ_ಶ್ರೀವೀರಭದ್ರಸ್ವಾಮಿ_ದೇವರ_ಜಾತ್ರೆ_ರಥೋತ್ಸವ. #ಆನಂದಪುರಂ_ಸಮೀಪದ_ಕೆಂಜಿಗಾಪುರದಲ್ಲಿ #ಪ್ರತಿವರ್ಷ_ಹೋಳಿಹುಣ್ಣಿಮೆ_ದಿನ_ರಥೋತ್ಸವ_ಆಚರಣೆ #ವಿಜಯನಗರದ_ಅರಸು_ಪ್ರೌಡ_ಪ್ರತಾಪ_ರಾಯ_ಆರು_ಶತಮಾನದ_ಹಿಂದೆ_ನಿರ್ಮಿಸಿದ_ದಾಖಲೆಯಿದೆ #ಪ್ರೌಡ_ಪ್ರತಾಪರಿಗೆ_ಗಜ_ಬೇ0ಟೆಗಾರ_ಎಂಬ_ಬಿರುದು_ಇತ್ತು. #shivamogga #sagar #ananandapuram #Yadehalli #kenjigapura #veerabadreshwara #temple     ಇದೇ ಬರುವ ಮಾರ್ಚ್ 2 ರಿಂದ 4ನೇ ತಾರೀಖಿನ ತನಕ ಆನಂದಪುರಂ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಜಿಗಾಪುರದ ಇತಿಹಾಸ ಪ್ರಸಿದ್ಧ ಶ್ರೀವೀರಭದ್ರೇಶ್ವರ ದೇವರ ಜಾತ್ರೆ ಮತ್ತು ರಥೋತ್ಸವ ನಡೆಯಲಿದೆ.     ದಿನಾಂಕ 3 - ಮಾರ್ಚ್ ಹೋಳಿ ಹುಣ್ಣಿಮೆ ದಿನ ರಥೋತ್ಸವ ನಡೆಯುತ್ತದೆ.    ಈ ಶಿಲಾಮಯ ದೇವಾಲಯವು ನಿರ್ಮಾಣವಾಗಿ ಆರು ಶತಮಾನಗಳಾಗಿದೆ.     ವಿಜಯನಗರದ ಅರಸು #ಪ್ರೌಡ_ಪ್ರತಾಪರಾಯ ಆ ಕಾಲದಲ್ಲಿ ಮಲೆನಾಡಿನ ಈ ಪ್ರದೇಶದಲ್ಲಿನ ಅರಣ್ಯದಲ್ಲಿನ ಕಾಡಾನೆಗಳನ್ನು ಹಿಡಿದು ಪಳಗಿಸಿ ಅದನ್ನು ತನ್ನ ಸೈನ್ಯದಲ್ಲಿ ಬಳಸುತ್ತಿದ್ದಂತ ಸಾಹಸಿ.     ಆದ್ದರಿಂದ ರಾಜ ಪ್ರೌಢ ಪ್ರತಾಪ ರಾಯರಿಗೆ #ಗಜ_ಬೇಂಟೆಗಾರ ಎಂಬ ಬಿರುದು ಇತ್ತು.    ಆರುನೂರು ವರ್ಷಗಳ ಹಿಂದೆ ಈ ಪ್ರದೇಶ ದೊಡ್ಡ ಜನ ವಸತಿ ಪ್ರದೇಶ ಆಗಿದ್ದಿರಬೇಕು.    ಕೆಂಜಿಗಾಪ...

Blog number 3560.ಮಲೆನಾಡಿನ ಅಪ್ಪೆ ಮಿಡಿ ಭಾಗ -1

#ಮಲೆನಾಡಿನ_ಅಪ್ಪೆ_ಮಾವಿನ_ಮಿಡಿ_ಭಾಗ_1 #ಅರಸಾಳಿನ_ಹೊಳೆಸಾಲಿನ_ಅಪ್ಪೆ_ಮಿಡಿ_ಬಂತು #ಮಿಡಿ_ಉಪ್ಪಿಗೆ_ಹಾಕುವ_ನನ್ನ_ಕೆಲಸ_ನೋಡಿ #ಈ_ಅಪ್ಪೆ_ಮಿಡಿ_ಉಪ್ಪಿನಕಾಯಿಗೆ_GI_Tag_ದೊರೆತಿದೆ. #ಅಪ್ಪೆ_ಮಿಡಿ_ಸ್ವಾಂಪ್_ಬಿಡುಗಡೆ_ಆಗಿದೆ #Tendermango #APPEMIDI #Mavinakayi #PickleLovers #pickles #mangopickle  #arasalu           ಮಾವಿನ ಅಪ್ಪೆ ಮಿಡಿ ಉಪ್ಪಿನಕಾಯಿ ವಿಶಿಷ್ಟ ಮತ್ತು ವಿಶೇಷ ಇದು ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡು ಭಾಗವಾದ ಕೆಲವೇ ತಾಲ್ಲೂಕಿನಲ್ಲಿ ಮಾತ್ರ ಬಳಕೆ ಮಾಡುತ್ತಾರೆ.    ಈ ಪ್ರದೇಶದ ಜನ ವಿಶ್ವದ ಯಾವುದೇ ಮೂಲೆಗೆ ಹೋದರೂ ಈ ಮಾವಿನ ಮಿಡಿ ಉಪ್ಪಿನಕಾಯಿ ಮರೆಯುವುದಿಲ್ಲ.        ಮಾವಿನ ಮರದಲ್ಲಿ ಮಾವಿನ ಹೂವು ಕಾಯಿಯಾಗಿ ಒಂದು ಹದಕ್ಕೆ ಬಂದಾಗ, ಚಿಗುರಾದ ಮತ್ತು ಮಾವಿನ ಮಿಡಿಯ ಒಳಗೆ ಬೀಜ ಎಳೆಯದಾಗಿರುವಾಗಲೇ ಹಾಗೂ ಅದರ ತೊಟ್ಟಿನಲ್ಲಿ ಮಾವಿನ ಕಾಯಿ ಸೊನೆ ಚಿಮ್ಮುವಾಗ ಕೊಯ್ಯುತ್ತಾರೆ.     ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ #ಅರಸಾಳಿನ ಹೊಳೆಸಾಲಿನ ಮಾವಿನ ಅಪ್ಪೆ ಮಿಡಿ ಉತ್ಕೃಷ್ಟ ಎಂಬ ಬ್ರಾಂಡ್ ಆಗಿರುವುದರಿಂದ ಇದಕ್ಕೆ ಬೇಡಿಕೆ ಜಾಸ್ತಿ.     ಮೊದಲೆಲ್ಲ ಮಾವಿನ ಮಿಡಿ ಎಣಿಸಿ ಸಾವಿರ ಮಿಡಿಗೆ ಇಷ್ಟು ದರ ಎಂದು ಮಾರಾಟಗಾರರು ಬೆಲೆ ನಿಗದಿ ಮಾಡುತ್ತಿದ್ದರು ಈಗ ಕಾಲ ಬದಲಾಗಿದ್ದು ಮಾವಿನ ಮಿಡಿ...