Skip to main content

Blog 3562.ಹೆಲ್ಮೆಟ್

#ನನ್ನ_ಹೆಲ್ಮೆಟ್_ಅಭಿಯಾನ_ಯಶಸ್ಸು_ಸಾಧಿಸಲೇ_ಇಲ್ಲ

#ಬೈಕ್_ಜೊತೆ_ಹೆಲ್ಮೆಟ್_ನಿಮ್ಮ_ಮಕ್ಕಳಿಗೆ_ನಿಮ್ಮ_ಮನೆಯಲ್ಲೇ_ಕಡ್ಡಾಯ_ಮಾಡಿ.

#ಇವತ್ತಿನ_ಯುವ_ಜನಾಂಗ_ಹೆಲ್ಮೆಟ್_ದ್ವೇಷಿಗಳು_ಯಾಕೆ?

#ಇತ್ತೀಚಿಗೆ_ಮೋಟಾರ್_ಬೈಕ್_ಅಪಘಾತವಾದರೆ_ಸವಾರರು_ಬದುಕುಳಿಯುವುದಿಲ್ಲ 

#ನೂತನ_ತಂತ್ರಜ್ಞಾನದ_ಹೆದ್ದಾರಿಗಳು_ಮತ್ತು_ಹೆಲ್ಮೆಟ್_ಧರಿಸದ_ಆದುನಿಕ_ಸವಾರರು.

#ಹೆಲ್ಮೆಟ್_ಕಡ್ಡಾಯ_ಕಾನೂನು_1976ರಲ್ಲಿ_ಗುಂಡೂರಾವ್_ಸರ್ಕಾರ_ಮಾಡಿತ್ತು

#ಹೆಲ್ಮೆಟ್_ನನ್ನ_ತಂದೆ_ಗೆಳೆಯ_ಯೋಮಕೇಶಪ್ಪಗೌಡರ_ಜೀವ_ಉಳಿಸಿತ್ತು

#ಕೊನೆ_ಗಳಿಗೆಯಲ್ಲಿ_ಅವರಿಗೆ_ಹೆಲ್ಮೆಟ್_ನೀಡುವ_ಪ್ರೇರಣೆಗೆ_ಕಾರಣ_ಗೊತ್ತಿಲ್ಲ.


#Helmet #bikes #riders #speed #highways #accidents #bikers
#Govtofindia 

  ಇತ್ತೀಚಿಗೆ ಮೋಟಾರ್ ಬೈಕ್ ಅಪಘಾತವಾದರೆ ಸವಾರರು ಬದುಕುಳಿಯುವುದಿಲ್ಲ ಕಾರಣ ಮಿತಿ ಮೀರಿದ ವೇಗವಾಗಿ ಚಲಿಸುವ ಬೈಕ್ ಗಳು ಅದಕ್ಕೆ ತಕ್ಕನಾದ ನೂತನ ತಂತ್ರಜ್ಞಾನದ ಹೆದ್ದಾರಿಗಳು ಮತ್ತು ಹೆಲ್ಮೆಟ್ ಧರಿಸದ ಆದುನಿಕ ಸವಾರರು.

   ಈ ಕಾರಣದಿಂದಲೇ ನಾನು ಹೆಲ್ಮೆಟ್ ಖರೀದಿಸಿ ಕೆಲವರಿಗೆ ಹಂಚುವ ಅಭಿಯಾನ ಪ್ರಾರಂಬಿಸಿದೆ.

    ಹೆಲ್ಮೆಟ್ ಧರಿಸದೇ ಬಿದ್ದು ಮುಖ ಒಡೆದುಕೊಂಡ ಹೊಸನಗರ ತಾಲ್ಲೂಕಿನ ಪತ್ರಕರ್ತ ಮಿತ್ರರಿಗೆ ಒಂದು ಬೆಲೆಬಾಳುವ ಹೆಲ್ಮೆಟ್ ಉಡುಗೊರೆ ನೀಡಿ ರಸ್ತೆ ಸುರಕ್ಷತೆ ಪಾಠ ಮಾಡಿದ್ದೆ ಆದರೆ ಅವರು ನನ್ನ ಕಛೇರಿಯಿಂದ ಹೆಲ್ಮೆಟ್ ಧರಿಸಿ ಅವರ ಮನೆಗೆ ಹೋದವರು ನಂತರ ಧರಿಸಲೇ ಇಲ್ಲ!?...

   ಇನ್ನೊಬ್ಬ ಶಾಮಿಯಾನದ ಕಿರಿಯ ಗೆಳೆಯ ಆತನೂ ಬೈಕಿನಿಂದ ಬಿದ್ದು ಮುಖ ತಲೆ ಗಾಯ ಮಾಡಿಕೊಂಡಿದ್ದ ಅವನಿಗೂ ನೀಡಿದ ಹೆಲ್ಮೆಟ್ ಅಪಾತ್ರ ದಾನ ಆಯಿತು, ಒಂದು ದಿನ ವಿಚಾರಿಸಿದರೆ ಹೊಟ್ಟೆ ತುಂಬಾ ಹೆಂಡ ಕುಡಿದಿದ್ದ ಆತ ನನಗೇ ಪಾಠ ಮಾಡಿದ್ದ...

    ನವಟೂರು ಮಂಜುನಾಥ ಆಚಾರ್ ಎಂಬುವವರು ನಮ್ಮ ಲಾಡ್ಜ್ ಕೆಲಸ 2021 ರ ತನಕ ಮಾಡುತ್ತಿದ್ದರು ಅವರಿಗೆ ನೀಡಿದ ನನ್ನ ಹೆಲ್ಮೆಟ್ ಅಭಿಯಾನ ಮಾತ್ರ ಯಶಸ್ಸು ಕಂಡಿದೆ ಇವತ್ತಿಗೂ ಅವರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವುದಿಲ್ಲ.

   ನಮ್ಮ ಸಂಸ್ಥೆಯವರೂ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುತ್ತಾರೆ ಆದ್ದರಿಂದ ಸದ್ಯದಲ್ಲಿ ಬೈಕ್ ಮಾರಾಟದ ತೀರ್ಮಾನ ಮಾಡಿದ್ದೇನೆ.

    ಬಹುತೇಕ ಬೈಕ್ ಸವಾರರು ಹೆಲ್ಮೆಟ್ ದರಿಸುವುದಿಲ್ಲ ಅವರು ಹೇಳುವುದು ನಾವೆಲ್ಲ ದೂರ ಪ್ರಯಾಣ ಮಾಡುವುದಿಲ್ಲ ಆದ್ದರಿಂದ ಹೆಲ್ಮೆಟ್ ಬೇಕಾಗಿಲ್ಲ.

   ಇತ್ತೀಚಿಗೆ ಗೆಳೆಯ ಕಾರ್ಗಲ್ ಹೋಟೆಲ್ ಉದ್ಯಮಿ #ಅಣ್ಣಪ್ಪರ ಏಕೈಕ ಪುತ್ರ ಪತ್ನಿ ಮನೆಯಿಂದ ಬೈಕ್ ಲ್ಲಿ ಬರುವಾಗ ಹೆಲ್ಮೆಟ್ ಧರಿಸಿದ್ದವರು ಮಾರ್ಗ ಮಧ್ಯೆ ದೇವರ ಗುಡಿಗೆ ಹೋಗಿ ಕೈ ಮುಗಿದು ಹೊರಟವರು ಹೆಲ್ಮೆಟ್ ಧರಿಸದೆ ಬೈಕ್ ಹ್ಯಾಂಡಲಿಗೆ ತಗಲು ಹಾಕಿದ್ದರು.

    ಆ ಕ್ಷಣದಲ್ಲೇ ಅಪಘಾತವಾಗಿ ಮೃತರಾದ ಸುದ್ದಿ ಅಘಾತಕರ.

   ಲಕ್ಷಾಂತರ ರೂಪಾಯಿಯ ಬೈಕ್ ಖರೀದಿಸುವ ಯುವ ಜನತೆ ಹೆಲ್ಮೆಟ್ ಕಡ್ಡಾಯ ಧರಿಸಬೇಕೆಂಬ ಕಾನೂನು ಇದ್ದರು ಹೆಲ್ಮೆಟ್ ಧರಿಸುವುದಿಲ್ಲ ಕಾರಣ ಕೇಳಿದರೆ ಇತ್ತೀಚಿಗೆ ಒಬ್ಬ ಯುವಕ ಹೇಳಿದ್ದು ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ... ನಗಬೇಕೋ ಅಳಬೇಕೋ ನೀವೇ ಹೇಳಿ.

   1976 ನಾನು ಆರನೆ ತರಗತಿ ವಿದ್ಯಾರ್ಥಿ ಆಗ ನನ್ನ ತಂದೆಯ ಗೆಳೆಯರಾದ #ಯೋಮಕೇಶಪ್ಪ ಗೌಡರು ಆಗಾಗ್ಗೆ ತಮ್ಮ ಹಿರೇಹಾರಕದ ಮನೆಯಿಂದ ತಮ್ಮ ರಾಜದೂತ್ ಬೈಕ್ ನಲ್ಲಿ ಬಂದು ನಮ್ಮ ಮನೆಯಲ್ಲಿ ಬೈಕ್ ಇಟ್ಟು ಸಾಗರ ಅಥವ ಶಿವಮೊಗ್ಗಕ್ಕೆ ಹೋಗಿ ಅವರ ಕೆಲಸ ಮುಗಿಸಿ ಬರುತ್ತಿದ್ದರು.

   ಶಿವಮೊಗ್ಗ ಹೋಗಿ ಬಂದವರು ಆ ದಿನಗಳ ರಾತ್ರಿ ತಂಗಲು ನಮ್ಮ ಊರಿನ ಸಮೀಪದ ಬಸವನಕೊಪ್ಪದ ಅವರ ಮಾವ #ಚೆನ್ನವೀರಪ್ಪಗೌಡರ ಮನೆಗೆ (ನಿಜಲಿಂಗಪ್ಪ ಗೌಡರ ತಂದೆ) ಹೋಗುತ್ತಿದ್ದರು.

  1975-76 ರಿಂದಲೆ ಸರ್ಕಾರ ಹೆಲ್ಮೆಟ್ ಕಡ್ಡಾಯ ಮಾಡಿದ್ದರಿಂದ ಅವರು ಅರಿಶಿಣ ಬಣ್ಣದ ಇಂಡಸ್ಟ್ರೀಯಲ್ ಸೇಫ್ಟಿ ಹೆಲ್ಮೆಟ್ ಖರೀದಿಸಿ ಧರಿಸುತ್ತಿದ್ದರು.

    ಯಾವಾಗಲೂ ಹೀಗೆ ನಮ್ಮ ಮನೆಯಿಂದ 2 ಕಿ.ಮಿ ದೂರದ ಚೆನ್ನವೀರಪ್ಪ ಗೌಡರ ಮನೆಗೆ ಹೋಗುವಾಗ ಹೆಲ್ಮೆಟ್ ಧರಿಸದೆ ನಮ್ಮ ಮನೆಯಲ್ಲೇ ಇಟ್ಟು ಹೋಗುವುದು ಅವರ ಅಭ್ಯಾಸ.

  ಇಂತಹದ್ದೇ ಒಂದು ದಿನ ಅವತ್ತು ಸಂಜೆ ಶಿವಮೊಗ್ಗದಿಂದ ಬಂದ ಗೌಡರು ನನ್ನ ತಂದೆ ಹತ್ತಿರ ಸ್ವಲ್ಪ ಹೊತ್ತು ಮಾತಾಡಿ ಬಸವನಕೊಪ್ಪದ ಅವರ ಮಾವನ ಮನೆಗೆ ಹೊರಟರು.

    ಆಗ ಅವರ ರಾಜದೂತ್ ಬೈಕ್ ಸ್ಟಾರ್ಟ್ ಮಾಡಲು ಬೈಕ್ ಕಿಕ್ಕರ್ ತುಳಿಯುವಾಗ ನನಗೆ ಅವರಿಗೆ ಹೆಲ್ಮೆಟ್ ಕೊಡಲೇ ಬೇಕು... ಅವರು ಹೆಲ್ಮೆಟ್ ಧರಿಸಿಯೇ ಬೈಕ್ ಚಲಾಯಿಸಲಿ...ಅನ್ನಿಸಿ ಬಿಟ್ಟಿತು ಯಾಕಂತ ಗೊತ್ತಿಲ್ಲ...

   ತಕ್ಷಣ ನಮ್ಮ ಮನೆಯಲ್ಲಿಟ್ಟಿದ್ದ ಅವರ ಹೆಲ್ಮೆಟ್ ತೆಗೆದುಕೊಂಡು ಓಡಿ ಹೋಗಿ ಅವರಿಗೆ ನೀಡಿದೆ.

   ಅವರು ... " ಇಲ್ಲೇ ಬಸವನ ಕೊಪ್ಪಕ್ಕೆ ಹೋಗಿ ಬರೋಕೆ ಹೆಲ್ಮೆಟ್ ಯಾಕೆ?...  ಅಂದವರು ತಕ್ಷಣ ಹುಡುಗ ತಂದು ಕೊಟ್ಟಿದ್ದು ನಿರಾಕರಿಸಬಾರದು ಇರಲಿ" ಅಂತ ಹೆಲ್ಮೆಟ್ ಆರೆ ಮನಸ್ಸಿನಿಂದಲೇ ಧರಿಸಿ ಬೈಕ್ ಚಾಲು ಮಾಡಿ ಹೋದರು.

   ಅವರು ನಮ್ಮ ಮನೆಯಿಂದ ಹೋಗಿ ಕೆಲ ಕ್ಷಣದಲ್ಲೇ ಕಾಡು ಹಂದಿಗಳು ದೊಡ್ಡ ಗುಂಪು ರಸ್ತೆ ದಾಟಲು ವೇಗವಾಗಿ ಓಡುತ್ತಾ ಯೋಮಕೇಶಪ್ಪ ಗೌಡರ ಬೈಕ್ ಗೆ ನುಗ್ಗಿ ಅಪಘಾತವಾಗಿ ಗೌಡರು ಬದುಕಿದ್ದೇ ಹೆಚ್ಚು... 

   ಅವರು ಧರಿಸಿದ್ದ ಹೆಲ್ಮೆಟ್ ಎರಡು ಸೀಳಾಗಿತ್ತು... 

   ಅವತ್ತು ಹೆಲ್ಮೆಟ್ ಇಲ್ಲದಿದ್ದರೆ ಗೌಡರು ತಲೆಗೆ ನೇರವಾಗಿ ಪೆಟ್ಟಾಗಿ ಬದುಕುಳಿಯುತ್ತಿದ್ಧಿರಲಿಲ್ಲ ಅಂತ ದೊಡ್ಡವರೆಲ್ಲ ಹೇಳುತ್ತಿದ್ದರು.

    ಅವರಿಗೆ ಕೊನೆಗಳಿಗೆಯಲ್ಲಿ ಹೆಲ್ಮೆಟ್ ಕೊಡಬೇಕೆಂದು ನನಗೆ ಅನ್ನಿಸಿದ್ದು ಏಕೆ - ಹೇಗೆ?...

   ಈವರೆಗೆಉತ್ತರ ಸಿಕ್ಕಿಲ್ಲ ಇದು ನನ್ನ ಆರನೇ ಇಂದ್ರಿಯದ ಜಾಗೃತೆನಾ? ಅಥವ ಕಾಕತಾಳಿಯನೋ? ಗೊತ್ತಿಲ್ಲ.

  "ಕೃಷ್ಣಣ್ಣ ನಿನ್ನ ಮಗ ಹೆಲ್ಮೆಟ್ ಕೊಡದಿದ್ದರೆ ನಾನು ಬದುಕುತ್ತಿರಲಿಲ್ಲ" ಅಂತ ಯೋಮಕೇಶಪ್ಪ ಗೌಡರು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ನಮ್ಮ ತಂದೆಯ ಹತ್ತಿರ ಕ್ಲೀನಿಕ್ ನಲ್ಲಿ ಹೇಳುತ್ತಿದ್ದ ಮಾತು ನನ್ನ ಮನದಾಳದಲ್ಲಿ ಹಾಗೇ ಉಳಿದಿದೆ.

  ಬೈಕ್ ಸವಾರಿ ಮಾಡುವವರು ಕಾನೂನಿನ ಕಡ್ಡಾಯಕ್ಕಾಗಿ ಅಥವ ಪೋಲಿಸರ ದಂಡ ಹಾಕುತ್ತಾರೆಂದು  ಹೆಲ್ಮೆಟ್ ದರಿಸುವುದಲ್ಲ, ನಮ್ಮ ಜೀವ ರಕ್ಷಣೆಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಬೈಕ್ ಓಡಿಸಬೇಕು.

    ಬೈಕ್ ಸವಾರರ ಜೀವ ರಕ್ಷಣೆಗಾಗಿಯೇ 50 ವರ್ಷದ ಹಿಂದೆಯೇ ಹೆಲ್ಮೆಟ್ ಕಡ್ಡಾಯ ಮಾಡಿ ಕಾನೂನು ಜಾರಿ ಆಗಿದೆ.

   ಆದರೆ ಹೆಲ್ಮೆಟ್ ಧರಿಸಲು ನಿರ್ಲಕ್ಷ್ಯ ವಹಿಸುವವರೇ ಈಗಲೂ ಜಾಸ್ತಿ.

   ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವವರಿಗೆ ಅವರವರ ಮನೆಯಲ್ಲಿಯೇ ಅವಕಾಶ ನೀಡಬಾರದು.

    ಈ ಮೂಲಕ ನಿಮ್ಮ ಕುಟುಂಬದ ಸದಸ್ಯರ ಜೀವ ರಕ್ಷಣೆ ಮಾಡಿ ಎಂದು ವಿನಂತಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...