#ತೇಜಸ್ವಿ_ಕಟ್ಟಾ_ಅಭಿಮಾನಿ_ಈ_ವೈದ್ಯರು.
#ಕನ್ನಡ_ಸಾಹಿತ್ಯ_ಓದುವ_ಮತ್ತು_ಬರೆಯುವ_ಅಪರೂಪದ_ವೈದ್ಯರು
#ಈಗಾಗಲೇ_ಡಯಾಬಿಟೀಸ್_ಬಗ್ಗೆ_ಮೂರು_ಪುಸ್ತಕ_ಪ್ರಕಟಿಸಿರುವ
#ಡಾಕ್ಟರ್_ಪ್ರೀತಮ್_ಪೂರ್ಣಚಂದ್ರ_ತೇಜಸ್ವಿ_ಅಭಿಮಾನಿ
#Mudigere #Niruthara #PurnachandraTejaswi #DrPreetham #Kannada books #Diabetesreveseltips #Shivamogga
ಕನ್ನಡ ಸಾಹಿತ್ಯ ಓದುವ ಮತ್ತು ಕನ್ನಡದಲ್ಲಿ ಬರೆಯುವ ವೈದ್ಯರ ಸಂಖ್ಯೆ ತುಂಬಾ ಕಡಿಮೆ ಮತ್ತು ಅಪರೂಪದಲ್ಲಿ ಅಪರೂಪ.
ಡಾಕ್ಟರ್ ಪ್ರೀತಮ್ ಶಿವಮೊಗ್ಗ ಕನ್ನಡ ಸಾಹಿತ್ಯದ ಅಭಿಮಾನಿಗಳು, ನಿರಂತರ ಓದು ಅವರ ಹವ್ಯಾಸ, ಇವರು ಎರೆಡು ಪುಸ್ತಕ ಡಯಾಬಿಟೀಸ್ ಬಗ್ಗೆ ಕನ್ನಡದಲ್ಲಿ ಪ್ರಕಟಿಸಿದ್ದಾರೆ ಹಾಗೂ ಒಂದು ಪುಸ್ತಕ ಇಂಗ್ಲೀಷ್ ನಲ್ಲಿ ಪ್ರಕಟಿಸಿದ್ದಾರೆ.
ಡಯಾಬಿಟಿಸ್ ರಿವರ್ಸಲ್ ಯಶಸ್ವಿ ತರಬೇತಿ ಮತ್ತು ಚಿಕಿತ್ಸೆಯಿಂದ ಕರ್ನಾಟಕ ರಾಜ್ಯ ಮಾತ್ರವಲ್ಲ ಬೇರೆ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲೂ ಇವರಿಂದ ಚಿಕಿತ್ಸೆ ಪಡೆದು ಡಯಾಬಿಟೀಸ್ ರಿವರ್ಸಲ್ ಮಾಡಿಕೊಂಡವರಿದ್ದಾರೆ.
ಇವರು ಈಗಾಗಲೇ ಮೂರು ಪುಸ್ತಕಗಳನ್ನ ಡಯಾಬಿಟೀಸ್ ಬಗ್ಗೆ ಬರೆದು ಪ್ರಕಟಿಸಿ ವೈದ್ಯಕೀಯ ಸಾಹಿತ್ಯ ಲೋಕದ ಜನಪ್ರಿಯ ವೈದ್ಯರಾಗಿದ್ದಾರೆ.
ಇವರ ಮೂರನೆ ಪುಸ್ತಕ #ಡಯಾಬಿಟೀಸ್_ರಿವರ್ಸಲ್_ಟಿಪ್ಸ್ ಪುಸ್ತಕದ ಮುಖಪುಟಕ್ಕೆ ಮೂಡಿಗೆರೆಯ ಪೂರ್ಣಚಂದ್ರ ತೇಜಸ್ವಿ ಅವರ ಮನೆ #ನಿರುತ್ತರ ಅಚ್ಟಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ಮತ್ತು ಕುವೆಂಪು ಅವರ ಎಲ್ಲಾ ಸಾಹಿತ್ಯಗಳನ್ನ ಇವರು ಓದಿದ್ದಾರೆ.
ತೇಜಸ್ವಿ ಬಗ್ಗೆ ಇವರಿಗೆ ಇರುವ ಅಭಿಮಾನ ಮಾತ್ರ ವಿಶೇಷ, ಇವರು ಡಯಾಬಿಟೀಸ್ ರಿವರ್ಸಲ್ ಜನ ಜಾಗೃತೆಗಾಗಿ ವಾಟ್ಸಪ್ ಗ್ರೂಪ್ ಅಭಿಯಾನ ಪ್ರಾರಂಭಿಸಿದ್ದಾರೆ ಅದಕ್ಕೆ ಇವರು #ತೇಜಸ್ಟಿ_ಡಯಾಬಿಟೀಸ್_ಎಜುಕೇಶನ್_ಗ್ರೂಪ್ ಅಂತ ನಾಮಕರಣ ಮಾಡಿದ್ದಾರೆ.
ಮೂಡಿಗೆರೆಯ ಪೂರ್ಣಚಂದ್ರ ತೇಜಸ್ವಿ ಅವರ ಮನೆ ನಿರುತ್ತರದಲ್ಲಿದ್ದ ತೇಜಸ್ವಿ ಅವರ ವಾಹನ ಸ್ಕೂಟರ್ ಮೇಲೆ ಡಾಕ್ಟರ್ ಪ್ರೀತಮ್ ಕುಳಿತ ಫೋಟೋ ತುಂಬಾ ವೈರಲ್ ಆಗಿತ್ತು.
ನಾಡಿನಾದ್ಯಂತ ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳಿದ್ದಾರೆ ಆದರೆ ಡಯಾಬಿಟೀಸ್ ತಜ್ಞ ವೈದ್ಯರಾದ ಶಿವಮೊಗ್ಗದ ಡಾಕ್ಟರ್ ಪ್ರೀತಮ್ ಅಷ್ಟು ಅಭಿಮಾನಿ ನಾನು ನೋಡಿಲ್ಲ.
ಪ್ರತಿ ವಿಚಾರದಲ್ಲೂ ಪ್ರಯೋಗ ಮಾಡಿ ನೋಡಿ ಬರೆಯುವ ಡಾಕ್ಟರ್ ಪ್ರೀತಮ್ ವಿಶೇಷ ವ್ಯಕ್ತಿ ಆಗಿದ್ದಾರೆ.
Comments
Post a Comment