Skip to main content

Blog 3584. ಸಾಗರ ಮಾರಿಕಾಂಬಾ ಭಾಗ 12

#ಭಾಗ_12_ಸಾಗರದ_ಮಾರಿಕಾಂಬಾ_ಚರಿತ್ರೆ

#ಇವತ್ತಿಗೆ_2026ರ_ಮಾರಿಕಾಂಭಾ_ಜಾತ್ರೆ_ಸಂಪನ್ನ.

#ಜನಸಂದಣಿ_ವಸ್ತುಪ್ರದರ್ಶನ_ಕೆಲವು_ದಿನ_ಮುಂದುವರಿಯಲಿದೆ.

#ಮುಂದಿನ_ಸಾಗರದ_ಮಾರಿಕಾಂಬಾ_ಜಾತ್ರೆ_2029ಕ್ಕೆ.

#ಕೆಳದಿ_ಅರಸ_ಹಿರಿಯ_ವೆಂಕಟಪ್ಪ_ನಾಯಕರು_ಕುಲದೇವತೆಯಾಗಿ_ಇಕ್ಕೇರಿ_ಕೋಟೆ_ಹೊರಗೆ

#ಸಣ್ಣ_ಗುಡಿಯಲ್ಲಿದ್ದ_ಮಾರಿಕಾಂಬೆಯನ್ನ_ಸ್ವೀಕರಿಸುತ್ತಾರೆ.

#ಯುದ್ದ_ಗೆದ್ದು_ಬಂದಾಗ_ಅಲ್ಲಿದ್ದ_ದೇವಿಯ_ಶಿಲಾಮಯ_ಪಾದದ_ವಿಗ್ರಹ_ಸಾಗರಕ್ಕೆ_ತಂದು_ಪ್ರತಿಷ್ಟಾಪಿಸಿದರು.

#ಈ_ದೇವಾಲಯ_1950ರಲ್ಲಿ_ಪುನಃ_ಊರ_ಹೊರಗೆ_ಸ್ಥಳಾಂತರಿಸುವ_ಪ್ರಯತ್ನ_ಪ್ಲೇಗ್_ರೋಗ_ಹರಡಿದ್ದರಿಂದ_ಕೈಬಿಡಲಾಯಿತು.

#ಸಾಗರದ_ಕುಲುಮೆ_ಪಾಪಣ್ಣ_1960ರಲ್ಲಿ_ಎಂಟು_ಸಾವಿರ_ರೂಪಾಯಿ_ವೆಚ್ಚದಲ್ಲಿ_ದೇವಾಲಯ_ಸ್ವರೂಪ_ನೀಡಿದರು.

#ಶಿವಮೊಗ್ಗದ_ಪ್ರಖ್ಯಾತ_ಶಿಲ್ಪಿ_ಕಾಶೀನಾಥರಿಂದ_72ಸಾವಿರ_ವೆಚ್ಚದಲ್ಲಿ_ನೂತನ_ಗೋಪುರ_ನಿಮಾ೯ಣವಾಯಿತು.

#ಪ್ರಮುಖರಾದ_ನೀಲಪ್ಪ_ಬೋಜಪ್ಪ_ಲಿಂಗಪ್ಪ_ಪುತ್ತೂರಾಯರು_ಜಿ_ಆರ್‌_ಜಿ_ನಗರ್_ಮುಂತಾದವರು
#ಹೊರತಾಲ್ಲೂಕಿನ_ದಾನಿಗಳಿಂದಲೂ_ದೇಣಿಗೆ_ಸಂಗ್ರಹಿಸಿದ್ದರು.

#ಉತ್ತರಕನ್ನಡ_ಜಿಲ್ಲೆಯ_ಸಿರ್ಸಿ
#ಶಿವಮೊಗ್ಗ_ಜಿಲ್ಲೆಯ_ಸಾಗರದ_ಮಾರಿಕಾಂಭಾ_ಜಾತ್ರೆಗಳು_ರಾಜ್ಯದಲ್ಲೇ_ದೊಡ್ಡ_ಜಾತ್ರೆ.


#sagara #Marikamba #Keladi #Hiriyavenkatappanayaka #Ikkeri 

  ಜಾತ್ರೆಯಿ೦ದ ಜಾತ್ರೆಗೆ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಸೇರುವ ಜನಸ್ತೋಮ ಮತ್ತು ಜಾತ್ರಾ ಸಮಿತಿಯ ಆದಾಯ ದುಪ್ಪಟ್ಟು ಮಾಡುವ ಪರಿ ನೋಡಿದರೆ....

   ಮುಂದಿನ ದಿನಗಳಲ್ಲಿ ಇದು ಇನ್ನೂ ದೊಡ್ಡ ಕಾರ್ಪೋರೇಟ್ ಮಟ್ಟದ ಮೇಳ ಆಗುವುದು ನಿಸ್ಸಂಶಯ.

   ಈಗಿನ ಸಾಗರ ಪಟ್ಟಣವನ್ನು ತನ್ನ ಅಜ್ಜ ಕೆಳದಿ ರಾಜ ಸದಾಶಿವ ನಾಯಕರ ಸ್ಮರಣಾರ್ಥವಾಗಿ ನಿರ್ಮಿಸಿದವರು ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರು.

      ಅವರು 43 ವರ್ಷಗಳ ದೀರ್ಘ ಕಾಲ ಆಳಿದ ಕೆಳದಿ ಸಂಸ್ಥಾನದ ಏಕೈಕ ರಾಜರು ಇವರ ಅಣ್ಣನ ಮಗ ಶಿವಪ್ಪನಾಯಕರು.

     ಆಗ ಅವರು ಈ ಪಟ್ಟಣಕ್ಕೆ ತನ್ನ ಅಜ್ಜ ಸದಾಶಿವ ಸಾಗರ ಎಂದೇ ನಾಮಕರಣ ಮಾಡಿದ್ದರು.

   ಈಗ 450 ವರ್ಷಗಳಲ್ಲಿ ಸದಾಶಿವ ಮರೆತು ಸಾಗರ ಅನ್ನುವುದು ಮಾತ್ರಚಾಲ್ತಿಯಲ್ಲಿದೆ.

   ಆಗ ದೇವಿಯ ಜೋಡು ಹೆಜ್ಜೆ ಗುರುತಿನ ಶಿಲಾ ವಿಗ್ರಹ ಕೆಳದಿ ಅರಸರ ರಾಜಧಾನಿ ಆಗಿದ್ದ ಇಕ್ಕೇರಿ ಕೋಟೆಯ ಹೊರಭಾಗದಲ್ಲಿ ಸಣ್ಣ ಗುಡಿಯಲ್ಲಿ ನಿರ್ಮಿಸಲ್ಪಟ್ಟಿತ್ತು.

  ಯುದ್ದಕ್ಕೆ ಹೋಗುವ ಸಂದರ್ಭ ಬಂದಾಗ ರಾಜ ವೆಂಕಟಪ್ಪ ನಾಯಕರು ಈ ದೇವಿಯನ್ನು ಕುಲದೇವತೆಯಾಗಿ ಸ್ವೀಕರಿಸಿ ಯುದ್ದದ ಗೆಲುವಿಗೆ ಪ್ರಾರ್ಥಿಸುತ್ತಾರೆ.

   ಯುದ್ದದಲ್ಲಿ ಗೆದ್ದು ಬಂದಾಗ ಇಕ್ಕೇರಿ ಕೋಟೆ  ಹೊರಗಿನ ದೇವಿಯ ಹೆಜ್ಜೆ ಗುರುತಿನ ಪಾದಗಳಿರುವ ಶಿಲಾ ವಿಗ್ರಹಗಳನ್ನು ಈಗಿನ ಸ್ಥಳವಾದ ಸಾಗರ ಪಟ್ಟಣದ ಮಧ್ಯಬಾಗದ ಮೂರು ರಸ್ತೆ ಸೇರುವ ಜಾಗದಲ್ಲಿ ರಾಜ ವೆಂಕಟಪ್ಪ ನಾಯಕರು ಸ್ಥಾಪಿಸುತ್ತಾರೆ.

   ಇದಕ್ಕೆ ನಾಲ್ಕು ನೂರು ವರ್ಷಗಳಾಗಿ ಚರಿತ್ರೆಯಲ್ಲಿ ದಾಖಲಾಗಿದೆ.

  ಸಾಗರ ಪ್ರಾಂತ್ಯದಲ್ಲಿ ಸಾಂಕ್ರಮಿಕ ರೋಗಗಳು ಉಲ್ಭಣಗೊಂಡಾಗೆಲ್ಲ ಜನ ಈ ದೇವಿಯ ಮೊರೆ ಹೋಗುತ್ತಿದ್ದರು.

  ಸಣ್ಣ ಕಲ್ಲಿನ ಗುಡಿ ಆಗಿದ್ದ ಈ ದೇವಿ ದೇವಾಲಯ 1950 ರಲ್ಲಿ ಸಾಗರದ ಪುರ ಪ್ರಮುಖರು ಸೇರಿ ಪುನಃ ಊರ ಹೊರಗೆ ದೇವಿ ದೇವಸ್ಥಾನ ಸ್ಥಳಾಂತರಿಸುವ ಯೋಚನೆ ಮಾಡುವಾಗಲೇ ಸಾಗರದ ಪಟ್ಟಣದಲ್ಲಿ ಪ್ಲೇಗ್ ರೋಗ ಉಲ್ಬಣಿಸಿದ್ದರಿಂದ ಈ ಮಾರಿಕಾಂಬಾ ಗುಡಿ ಸ್ಥಳಾಂತರದ ಯೋಜನೆ ಕೈಬಿಡಲಾಯಿತು.

  1960 ರಲ್ಲಿ ಸಾಗರದ ಕುಲುಮೆ ಪಾಪಣ್ಣ ಎಂಬುವವರು 8 ಸಾವಿರ ರೂಪಾಯಿ ವೆಚ್ಚದಲ್ಲಿ 8 ಸ್ಥಂಭಗಳ ದೇವಾಲಯದ ಮೇಲ್ಛಾವಣಿ ನಿರ್ಮಿಸಿ ಸಾಗರದ ಮಾರಿಕಾಂಬಾ ದೇವಿಗೆ ಮೊದಲ ಭಾರಿಗೆ ದೇವಾಲಯದ ರೂಪ ಕೊಟ್ಟರು.

  1972 ರಲ್ಲಿ 72 ಸಾವಿರ ವಿನಿಯೋಗಿಸಿ ಶಿವಮೊಗ್ಗದ ಶಿಲ್ಪಿ ಕಾಶೀನಾಥರಿಂದ ನೂತನ ರಥ ಆಕೃತಿಯ ಬೃಹತ್ ಗೋಪುರದ ಸಾಗರದ ಮಾರಿಕಾಂಭಾ ದೇವಾಲಯ ನಿರ್ಮಾಣವಾಗಿದೆ.

  ಈ ಸಂದರ್ಭದಲ್ಲಿ ಹಿರಿಯರಾದ ನೀಲಪ್ಪನವರು, ಮಡಿವಾಳ ಸಮಾಜದ ಬೋಜಪ್ಪನವರು, ಕುರುಬರ ಸಮಾಜದ ಲಿಂಗಪ್ಪನವರು, ಉಧ್ಯಮಿ ಪುತ್ತೂರಾಯರು,ಹೋರಾಟಗಾರ ಜಿ.ಆರ್.ಜಿ.ನಗರ್ ಮುಂತಾದವರ ಸೇವೆ ಅವಿಸ್ಮರಣಿಯ.

 ಈ ಗೋಪುರ ನಿರ್ಮಾಣಕ್ಕೆ ಹೊರ ತಾಲ್ಲೂಕುಗಳ ದಾನಿಗಳಿಂದಲೂ ದೇಣಿಗೆ ಸಂಗ್ರಹಿಸಲಾಗಿತ್ತು.

  1989 ರಲ್ಲಿ ಪ್ರತಿ ಜಾತ್ರೆಗೆ ಹೊಸದಾಗಿ ಮರದಿಂದ ದೇವಿ ವಿಗ್ರಹ ನಿರ್ಮಿಸುವ ಪದ್ಧತಿ ಬದಲಾಯಿಸಿ ಖಾಯಂ ಮರದ ಮರು ಜೋಡಿಸುವ 14 ಅಡಿ ಎತ್ತರದ ಸುಂದರ ವಿಗ್ರಹವನ್ನು ಆಗಿನ ಪ್ರಖ್ಯಾತ ಗುಡಿಗಾರರಾದ ಜಡೆ ಗುಡಿಗಾರ ಕುಟುಂಬದಿಂದ ನಿರ್ಮಿಸಲಾಯಿತು.

     36 ವರ್ಷದಿಂದ (2026ರ ಜಾತ್ರೆಗೆ) ಪ್ರತಿ ಜಾತ್ರೆಗೆ ಇದೇ ಮರು ಜೋಡಿಸುವ ಮಾರಿಕಾಂಬಾ ದೇವಿಯ ಮರದ ವಿಗ್ರಹ ಬಳಸಲಾಗುತ್ತಿದೆ.

  1949 ರಲ್ಲಿ ಒಂದು ದಿನದ ಮಾರಿಕಾಂಬಾ ಜಾತ್ರೆ ನಂತರ 3 ದಿನದ ಜಾತ್ರೆ, ನಂತರ 5 ದಿನದ ಜಾತ್ರೆ, ನಂತರ7 ದಿನದ ಜಾತ್ರೆ ಆಗಿ ಬದಲಾಗಿ ಈಗ 9 ದಿನದ ಜಾತ್ರೆಯಾಗಿದೆ.

   ಕೆಳದಿ ರಾಜವಂಶದ ಕುಲದೇವತೆ ಆಗಿದ್ದ ಸಾಗರದ ಮಾರಿಕಾಂಬಾ ದೇವಿಯ ಚರಿತ್ರೆ ಇದಾಗಿದೆ.

    ಕೆಳದಿ ರಾಜ ವೆಂಕಟಪ್ಪ ನಾಯಕರ ಸ್ಮರಣೆಯ ಸ್ಮಾರಕವನ್ನು ಮಾರಿಕಾಂಬಾ ಸಮಿತಿ ನಿರ್ಮಿಸಿ ಅವರ ನೆನಪು ಸ್ಮರಣೀಯ ಮಾಡಬಹುದಾಗಿದ್ದ ಅವಕಾಶ 2026ರ ಜಾತ್ರೆಯಲ್ಲಿ ಕಾರ್ಯರೂಪಕ್ಕೆ ಬರದೇ ಇರುವುದು ವಿಷಾದನೀಯ ವಿಷಯ ಆಗಿದೆ.

   ಬೂತ ಕಾಲ ಮರೆತು ವರ್ತಮಾನದಲ್ಲಿ ವಿಜೃಂಬಿಸುವ ಈಗಿನ ಮನಸ್ಥಿತಿ ಭವಿಷ್ಯ ಕಾಲದಲ್ಲಿ ಈಗಿನವರನ್ನ ಕೂಡ ಮುಂದಿನ ಪೀಳಿಗೆ ಮರೆತು ಬಿಡುವ ವಾಸ್ತವ ಜಗತ್ತಿನಲ್ಲಿ #ಕೋಟೆ_ಕಟ್ಟಿ_ಮೆರೆದೋರೆಲ್ಲ_ಏನಾದರೂ ಎಂಬ ಹಾಡಿನಂತಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...