#ಕೊಡಚಾದ್ರಿಯ_ಶಿವರಾತ್ರಿಯ_ಮೂರು_ಕೊಳಗದ_ದೀಪಾರಾದನೆ
#ಕಬ್ಬನಾಡು_ಹನ್ನಾರ_ಸೌಳುನಾಡು_ಸೀಮೆಯಿಂದ_ತರುವ_ದೀಪದ_ಎಣ್ಣೆ
#ಬುಡಕಟ್ಟು_ಕುಣುಬಿ_ಜನರು_ಎಣ್ಣೆ_ಸoಗ್ರಹಿಸಿ_ತಂದು_ಬೆಳಗುವ_ಪದ್ದತಿ
#ಈ_ಆಚರಣೆಗೆ_ಇದೆ_ಸಾವಿರಾರು_ವರ್ಷದ_ಇತಿಹಾಸ.
ಪ್ರತಿ ವರ್ಷ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಪರ್ವತದ ತುತ್ತ ತುದಿಯಲ್ಲಿ ನಡೆಯುವ ವಿಶಿಷ್ಟವಾದ ಕೊಳಗದ ದೀಪಾರಾದನೆ.
ಪ್ರತಿ ವರ್ಷ ಶಿವರಾತ್ರಿಯಂದು ಕೊಡಚಾದ್ರಿ ಪರ್ವತದ ತುತ್ತ ತುದಿಯ ಸರ್ವಜ್ಞ ಮಂಟಪದ ಸ್ಥಳದಲ್ಲಿ ಮೂರು ಸೀಮೆಯ ಭಕ್ತರ ಮನೆಗಳಿಂದ ಸಂಗ್ರಹಿಸಿ ತಂದ ದೀಪದ ಎಣ್ಣೆಯನ್ನ ಆಯಾ ಸೀಮೆಗೆ ಮೀಸಲಿಡುವ ಕೊಳಗಕ್ಕೆ ಸುರಿದು ಬತ್ತಿಯನ್ನ ಹಚ್ಚಿ ದೀಪ ಬೆಳಗುವ ಪುರಾತನ ಪದ್ಧತಿ ಈಗಲೂ ಮುಂದುವರಿದಿದೆ.
ಇದೇನು ಪದ್ದತಿ? ಇದಕ್ಕೆ ಕಾರಣ ಏನು? ಎಂಬ ಮಾಹಿತಿ ಇಲ್ಲಿದೆ.
#kodachadri #sarvajnamantapa #jogi #kunubi #mulamukambika #sowparnika #shivaratri
ಪ್ರತಿ ವರ್ಷ ಶಿವರಾತ್ರಿಯ ದಿನ ಕೊಡಚಾದ್ರಿ ಪರ್ವತದ ಮೇಲಿರುವ ಮೂಲ ಮೂಕಾಂಬಿಕಾ ದೇವಿಯ ಉತ್ಸವ -ಜಾತ್ರೆ ಅದ್ದೂರಿಯಾಗಿ ಭಕ್ತಿಪೂರ್ವಕವಾಗಿ ನೆರವೇರುತ್ತದೆ.
ಇದಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ, ಈ ಮೂಲ ಮೂಕಾಂಬಿಕಾ ದೇವಿಯ ಪೂಜೆ ಮಾಡಿಕೊಂಡು ಬರುವ ಬಳೆಗಾರ ಜೋಗಿ ಕುಟುಂಬದವರಾದ ನಿಟ್ಟೂರುವಾಸಿ ನಾಗೇಶ ಜೋಗಿ ಪ್ರಧಾನ ಅರ್ಚಕರಾಗಿದ್ದಾರೆ, ಇವರ ಸಹೋದರ ನಾಗೇಂದ್ರ ಜೋಗಿ ಈ ದೇವಾಲಯದ ಅರ್ಚಕರಾಗಿದ್ದಾರೆ.
ಅರ್ಚಕರಾದ ನಾಗೇಂದ್ರ ಜೋಗಿ ಕೆಲವು ಕಾಲ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಆಗಿದ್ದರು, ಈಗ ಹೊಸನಗರ ತಾಲೂಕಿನ ಕೆ ಡಿ ಪಿ ಸಮಿತಿ ಸದಸ್ಯರಾಗಿದ್ದಾರೆ.
ಕೊಡಚಾದ್ರಿಯ ಮುಜರಾಯಿ ಸಮಿತಿ ಅಧ್ಯಕ್ಷರು ಶಿವರಾಂ ಶೆಟ್ಟರು ಇವರು ಕೂಡ ನಿಟ್ಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು.
ಪ್ರತಿ ಶಿವರಾತ್ರಿಯ ಸಂಜೆ ಮೂಲ ಮುಕಾಂಬಿಕಾ ದೇವಿಯ ಉತ್ಸವಮೂರ್ತಿಯ ಉತ್ಸವ ಕೊಡಚಾದ್ರಿಯ ಮೂಲ ಮುಕಾಂಬಿಕ ದೇವಾಲಯದಿಂದ ಹೊರಟು ರಾತ್ರಿ ಕೊಡಚಾದ್ರಿ ಪರ್ವತದ ತುತ್ತ ತುದಿಯ ಸರ್ವಜ್ಞ ಮಂಟಪ ತಲುಪುತ್ತದೆ.
ಈ ಸಂದರ್ಭದಲ್ಲೇ ಅಲ್ಲಿ ಮೂರು ಮರದ ಕಂಬಗಳನ್ನು ಮಣ್ಣಿನಲ್ಲಿ ಹುಗಿದು ನಿಲ್ಲಿಸಿರುತ್ತಾರೆ ಅದಕ್ಕೆ ಮೂರು ಕೊಳಗಳನ್ನು ಭದ್ರವಾಗಿ ಕಟ್ಟಿ ಇಟ್ಟಿರುತ್ತಾರೆ.
ಮೂಲ ಮೂಕಾಂಬಿಕಾ ದೇವಿಯ ಉತ್ಸವ ಅಲ್ಲಿಗೆ ತಲುಪಿದಾಗ ಮೂರು ಸೀಮೆಯ ಭಕ್ತರು ಸಂಗ್ರಹಿಸಿ ತಂದ ಎಣ್ಣೆಯನ್ನು ಪ್ರತ್ಯೇಕವಾಗಿ ಅವರ ಸೀಮೆಗೆ ಮೀಸಲಿಟ್ಟ ಕೊಳಗಗಳಿಗೆ ಸುರಿಯುತ್ತಾರೆ.
ನಂತರ ಅದಕ್ಕೆ ಬತ್ತಿಯನ್ನು ಜೋಡಿಸಿ ದೀಪ ಹಚ್ಚಿ ಬೆಳಗುತ್ತಾರೆ, ಅದು ಆ ಎತ್ತರದ ಕೊಡಚಾದ್ರಿ ಪರ್ವತ ಶ್ರೇಣಿಯ ತುತ್ತ ತುದಿಯಿಂದ ಪೂರ್ವ ಇಳಿಜಾರಿನ ಶಿವಮೊಗ್ಗ ಜಿಲ್ಲೆ ಮತ್ತು ಪಶ್ಚಿಮ ಇಳಿಜಾರಿನ ಉಡುಪಿ ಜಿಲ್ಲೆಗೆ ಕಾಣುತ್ತದೆ.
ಅದನ್ನು ಆಯಾ ಭಾಗದ ಊರವರು ಈ ಸಂದರ್ಭದಲ್ಲಿ ನೋಡಿ ನಮಸ್ಕರಿಸುತ್ತಾರೆ.
ರಾಜರ ಕಾಲದಲ್ಲಿ ಇದ್ದ ಮೂರು ಸೀಮೆಗಳಾದ ಕಬ್ಬನಾಡು ಸೀಮೆ, ಹನ್ನಾರು ಸೀಮೆ ಮತ್ತು ಸೌಳುನಾಡು ಸೀಮೆ ಎಂಬ ಪ್ರದೇಶಗಳು ಈಗ ಸಾಗರ ಹೊಸನಗರ ತಾಲೂಕುಗಳಿಗೂ ಉಳಿದ ಭಾಗ ಉಡುಪಿ ಜಿಲ್ಲೆಗೂ ಹಂಚಿ ಹೋಗಿದೆ.
ಆದರೂ ಈ ಧಾರ್ಮಿಕ ಪದ್ಧತಿಯಾದ ಕೊಡಚಾದ್ರಿಯ ಶಿವರಾತ್ರಿಯ ಕೊಳಗದ ದೀಪಾರಾಧನೆಗೆ ಮಾತ್ರ ಈ ಪ್ರದೇಶದ ಭಕ್ತರಿಂದ ದೀಪದ ಎಣ್ಣೆ ಸಂಗ್ರಹಿಸಿ ತಂದು ಹಚ್ಚುವ ಪದ್ಧತಿ ಮಾತ್ರ ನಿರಂತರವಾಗಿ ಮುಂದುವರೆದಿದೆ.
ಈ ಐತಿಹಾಸಿಕ ಪುರಾಣ ಪದ್ದತಿಯ ಕೊಡಚಾದ್ರಿಯ ಶಿವರಾತ್ರಿಯ ಕೊಳಗದ ದೀಪಕ್ಕೆ ದೀಪದ ಎಣ್ಣೆ ಸಂಗ್ರಹಿಸಿ ತರುವ ಕೆಲಸ ಪಶ್ಚಿಮ ಘಟ್ಟದ ಬುಡಕಟ್ಟು ಜನಾಂಗವಾದ ಕುಣುಬಿ ಜನಾಂಗದವರು ಭಕ್ತಿಪೂರ್ವಕವಾಗಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಕೊಡಚಾದ್ರಿಯ ಶಿವರಾತ್ರಿಯ ದಿನ ಇಲ್ಲಿಗೆ ಬಂದು ಭಾಗವಹಿಸುವ ಭಕ್ತರಿಗೂ, ಈ ದೀಪ ಆರಾಧನೆ ಮಾಡುವವರೆಗೂ,ಈ ದೀಪಾರಾದನೆಗೆ ಬೆಟ್ಟದ ತುದಿಗೆ ಅ ಹೋಗಲಾಗದಿದ್ದವರು ಕೊಡಚಾದ್ರಿ ಶಿಖರ ಶ್ರೇಣಿಯ ಕೆಳಗಿನ ತಪ್ಪಲಿನಿಂದ ನೋಡುವುದರಿಂದಲೂ ಅವರಿಗೆ ಮತ್ತು ಅವರ ಕುಟುಂಬಕ್ಕೆ ಪುಣ್ಯಪ್ರಾಪ್ತಿ ಆಗುತ್ತದೆ, ಅವರು ಬೆಳೆದ ಬೆಳೆಗಳುಅವರ ಕಣಜಗಳಿಂದ ತುಂಬಿ ತುಳುಕುತ್ತದೆ, ಅವರ ಕುಟುಂಬ ಮತ್ತು ಊರಿಗೆ ಮೂಲ ಮೂಕಾಂಬಿಕೆಯ ಶ್ರೀರಕ್ಷೆ ಮತ್ತು ನಾಥಪಂಥದ ದೈವ ಕಾಲಭೈರವನ ರಕ್ಷಣೆ ಸದಾ ಇರುತ್ತದೆ ಎಂಬ ನಂಬಿಕೆ ತಲೆಮಾರುಗಳಿಂದ ಈ ಪ್ರದೇಶದ ನಂಬಿಕೆ ಆಗಿ ನಡೆದು ಬಂದಿದೆ.
ತಲತಲಾಂತರದಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಕೊಡಚಾದ್ರಿ ಬೆಟ್ಟದ ಶಿವರಾತ್ರಿಯ ಮೂರು ಸೀಮೆಯ 3 ಕೊಳಗದ ದೀಪ ಬೆಳಗುವ ಸಂಪ್ರದಾಯದ ಬಗ್ಗೆ ಇತಿಹಾಸ ಆಸಕ್ತರು ಹೆಚ್ಚಿನ ಮಾಹಿತಿ ನೀಡಬಹುದಾಗಿದೆ.
Comments
Post a Comment